ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಡುವೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇವರಿಬ್ಬರ ನಡುವಿನ ಮಾತುಕತೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇವರ ನಡುವೆ ನಡೆದಿದ್ದೇನು?
ಧರ್ಮಶಾಲಾ(ಅ.22) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ರೋಚಕ ಘಟ್ಟ ತಲುಪಿದೆ. ನ್ಯೂಜಿಲೆಂಡ್ ನೀಡಿದ 274 ರನ್ ಟಾರ್ಗೆಟ್ ಚೇಸಿಂಗ್ ಇದೀಗ ಕುತೂಹಲ ಮೂಡಿಸಿದೆ. ಆದರೆ ಪಂದ್ಯದ ನಡುವೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡೆಸಿದ ಮಾತುಕತೆ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇವರಿಬ್ಬರ ನಡುವಿನ ಮಾತುಕತೆ ಏನು? ವಿರಾಟ್ ಕೊಹ್ಲಿ ಮಾತನ್ನು ರೋಹಿತ್ ಶರ್ಮಾ ನಿರಾಕರಿಸಿದರೆ? ನಿಜಕ್ಕೂ ನಡೆದಿದ್ದೇನು ಅನ್ನೋ ಚರ್ಚೆ ಇದೀಗ ಗಂಭೀರವಾಗುತ್ತಿದೆ. ಈ ಕುರಿತು ಅಭಿಮಾನಿಗಳು ರಹಸ್ಯ ಬಯಲು ಮಾಡಿದ್ದಾರೆ.
ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ನಡೆದ ಘಟನೆ ಇದು. ಭಾರತದ ಓವರ್ ನಡುವೆ ನಾಯಕ ರೋಹಿತ್ ಶರ್ಮಾಗೆ ವಿರಾಟ್ ಕೊಹ್ಲಿ ಕೆಲ ಸಲಹೆ ನೀಡಿದ್ದಾರೆ. ಆದರೆ ಕೊಹ್ಲಿ ಮಾತನ್ನು ರೋಹಿತ್ ಶರ್ಮಾ ಕೇಳಿಸಿಕೊಳ್ಳದೇ ಮಂದೆ ಸಾಗಿದ್ದಾರೆ. ಆದರೆ ಕೊಹ್ಲಿ ಮಾತ್ರ ಹಿಂಬಾಲಿಸಿಕೊಂಡು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಇತ್ತ ರೋಹಿತ್ ಕೂಡ ಕೊಹ್ಲಿ ಮಾತನ್ನು ನಿರಾಕರಿಸಿದ್ದಾರೆ. ಕೆಲ ಹೊತ್ತು ಕೊಹ್ಲಿ ಗಂಭೀರವಾಗಿ ವಿಚಾರ ಪ್ರಸ್ತಾಪಿಸಿದರೂ ರೋಹಿತ್ ಮಾತ್ರ ನಿರ್ಲಕ್ಷಿಸಿದ್ದಾರೆ.
ಭಾರತ ಮುಗ್ಗರಿಸಿದರೆ ಮಟನ್ ಬಿರಿಯಾನಿ ಹಂಚುತ್ತೇನೆ; ಮತ್ತೆ ಹರಿಹಾಯ್ದ ಪಾಕ್ ನಟಿ!
ಈ ವಿಡಿಯೋವನ್ನು ಐಸಿಸಿ ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಜೊತೆಗೆ ಇವರಿಬ್ಬರ ನಡುವಿನ ಮಾತುಕತೆ ಏನು ಅನ್ನೋದರ ಕುತೂಹಲ ಹೆಚ್ಚಾಗಿದೆ. ಅಭಿಮಾನಿಗಳು ಹಲವು ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ. ನನ್ನ ಗೆಳೆಯನಿಗೆ ನಾನು ಗೋವಾ ಟ್ರಿಪ್ ಹೋಗುವ ಕುರಿತು ಆತನನ್ನು ಒಪ್ಪಿಸುವ ಮಾತುಕತೆ ಇದು ಎಂದು ಕಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿದರೆ ವಿರಾಟ್ ಕೊಹ್ಲಿ ಯಾವುದೇ ಮಾತನ್ನು ರೋಹಿತ್ ಕೇಳಿಸಿಕೊಳ್ಳಲು ತಯಾರಿದ್ದಂತೆ ಕಾಣುತ್ತಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇವರ ಮಾತುಕತೆ ಕ್ಯಾಮೆರಾ ಕಣ್ಣಿಗೆ ಕಂಡಷ್ಟು ಆಳವಾಗಿಲ್ಲ. ಇದು ಕೇವಲ ಮೈದಾನದಲ್ಲಿನ ಮಾತುಕತೆ ಅಷ್ಟೆ. ಗಂಭೀರ ಅರ್ಥಿ ಕಲ್ಪಿಸಬೇಕಿಲ್ಲ ಎಂದು ಸಲಹೆ ನೀಡಿದ್ದಾರೆ.
ಮಿಚೆಲ್ ಸೆಂಚೂರಿ, ಶಮಿಗೆ 5 ವಿಕೆಟ್ ಗೊಂಚಲು; ಭಾರತಕ್ಕೆ ಗೆಲ್ಲಲು 274 ಗುರಿ
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಿಟ್ಟ ಹೋರಾಟ ನೀಡಿ 273 ರನ್ ಸಿಡಿಸಿದೆ. ಡರಿಲ್ ಮೆಚೆಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಮಿಚೆಲ್ 130 ರನ್ ಕಾಣಿಕೆ ನೀಡಿದ್ದರು. ಇತ್ತ ರಾಚಿನ್ ರವೀಂದ್ರ 75 ರನ್ ಸಿಡಿಸಿದ್ದರು. ನ್ಯೂಜಿಲೆಂಡ್ ಮೇಲಿಂದ ಮೇಲೆ ವಿಕೆಟ್ ಬಿದ್ದರೂ ರಾಚಿನ್ ರವೀಂದ್ರ ಹಾಗೂ ಡರಿಲ್ ಮಿಚೆಲ್ ಜೊತೆಯಾಟದಿಂದ ನ್ಯೂಜಿಲೆಂಡ್ ಉತ್ತಮ ಮೊತ್ತ ಸಿಡಿಸಿತು. 50 ಓವರ್‌ನಲ್ಲಿ ನ್ಯೂಜಿಲೆಡ್ 273 ರನ್ ಸಿಡಿಸಿ ಆಲೌಟ್ ಆಯಿತು.