IND vs NZ ಸ್ಥಗಿತಗೊಂಡ ಭಾರತ-ನ್ಯೂಜಿಲೆಂಡ್ ಪಂದ್ಯ ಮತ್ತೆ ಆರಂಭ!

By Suvarna News  |  First Published Oct 22, 2023, 7:56 PM IST

ನ್ಯೂಜಿಲೆಂಡ್ ನೀಡಿದ 274 ರನ್ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಭಾರತ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಇದರ ಬೆನ್ನಲ್ಲೇ ಪಂದ್ಯ ಸ್ಥಗಿತಗೊಂಡಿತ್ತು. ಆದರೆ ಕೆಲವೇ ಹೊತ್ತಲ್ಲಿ ಪಂದ್ಯ ಪುನರ್ ಆರಂಭಗೊಂಡಿದೆ. 


ಧರ್ಮಶಾಲಾ(ಅ.22)  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಆಟ ಸ್ಥಗಿತಗೊಂಡಿದೆ. ಧರ್ಮಶಾಲಾ ಮೈದಾನದಲ್ಲಿ ಮಂಜು ಕವಿದ ವಾತಾರಣದ ಕಾರಣ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. ನ್ಯೂಜಿಲೆಂಡ್ ನೀಡಿದ 274 ರನ್ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಇದೇ ವೇಳೆ ವಾತಾವರಣ ಮಳೆಯತ್ತ ತಿರುಗಿತು. ಮಂಜು ಕವಿದ ವಾತಾವರಣ ಕಾರಣ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಕೆಲವೇ ಹೊತ್ತಲ್ಲಿ ಪಂದ್ಯ ಮತ್ತೆ ಆರಂಭಗೊಂಡಿತು. 

ಟಾರ್ಗೆಟ್ ಚೇಸಿಂಗ್ ವೇಳೆ ನಾಯಕ ರೋಹಿತ್ ಶರ್ಮಾ ಹಾಗೂ ಆರಂಭಿಕ ಶುಬ್‌ಮನ್ ಗಿಲ್ ಉತ್ತಮ ಒಪನಿಂಗ್ ನೀಡಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 71 ರನ್ ಜೊತೆಯಾಟ ನೀಡಿತು. ರೋಹಿತ್ ಹಾಗೂ ಗಿಲ್ ಸ್ಫೋಟಕ ಆರಂಭದ ಮೂಲಕ ಭಾರತ ದಿಟ್ಟ ಹೋರಾಟ ನೀಡಿತು. ರೋಹಿತ್ ಶರ್ಮಾ 40 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಇತ್ತ ಶುಭಮನ್ ಗಿಲ್ 26 ರನ್ ಸಿಡಿಸಿ ನಿರ್ಗಮಿಸಿದರು.

Latest Videos

undefined

ಭಾರತ ಮುಗ್ಗರಿಸಿದರೆ ಮಟನ್ ಬಿರಿಯಾನಿ ಹಂಚುತ್ತೇನೆ; ಮತ್ತೆ ಹರಿಹಾಯ್ದ ಪಾಕ್ ನಟಿ!

ಶ್ರೇಯಸ್ ಅಯ್ಯರ ಸ್ಫೋಟಕ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದರು. ಇತ್ತ ವಿರಾಟ್ ಕೊಹ್ಲಿ ಕೂಡ ಸಾಥ್ ನೀಡಿದ್ದರು. 16.5 ಓವರ್‌ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 106 ರನ್ ಸಿಡಿಸಿತ್ತು. ಈ ವೇಳೆ ಮಂಜು ಕವಿದ ವಾತಾರವಣ ಕಾರಣ ಪಂದ್ಯ ಸ್ಥಗಿತಗೊಳಿಸಾಯಿತು. 

ಕೆಲವೇ ಹೊತ್ತಲ್ಲಿ ಪರಿಸ್ಥಿತಿ ಸುಧಾರಿಸಿದ ಕಾರಣ ಮತ್ತೆ ಪಂದ್ಯ ಆರಂಭಗೊಂಡಿತು. ಹೆಚ್ಚಿನ ಸಮಯ ವ್ಯರ್ಥವಾಗದೇ ಪಂದ್ಯ ಆರಂಭಗೊಂಡ ಕಾರಣ ಓವರ್ ಕಡಿತ ಆತಂಕ ಎದುರಾಗಲಿಲ್ಲ. 

ಮಿಚೆಲ್‌ ಸೆಂಚೂರಿ, ಶಮಿಗೆ 5 ವಿಕೆಟ್‌ ಗೊಂಚಲು; ಭಾರತಕ್ಕೆ ಗೆಲ್ಲಲು 274 ಗುರಿ

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಡರಿಲ್ ಮೆಚೆಲ್ ಸ್ಫೋಟಕ ಸೆಂಚುರಿ ಸಿಡಿಸಿದ್ದರು. ರಾಚಿನ್ ರವೀಂದ್ರ ಹಾಗೂ ಡರಿಲ್ ಮೆಚಿಲ್ ಜೊತೆಯಾದಿಂದ ನ್ಯೂಜಿಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ರಾಚಿನ್ ರವೀಂದ್ರ 75 ರನ್ ಕಾಣಿಕೆ ನೀಡಿದರೆ, ಡರಿಲ್ ಮೆಚೆಲ್ 130 ರನ್ ಸಿಡಿಸಿ ಔಟಾದರು. ಇತರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ನ್ಯೂಜಿಲೆಂಡ್ 50 ಓವರ್‌ನಲ್ಲಿ 273 ರನ್ ಸಿಡಿಸಿ ಆಲೌಟ್ ಆಯಿತು.
 

click me!