
ಚೆನ್ನೈ(ಅ.23) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಘಟಾನುಘಟಿ ತಂಡಕ್ಕೆ ಆಫ್ಘಾನಿಸ್ತಾನ ಶಾಕ್ ನೀಡಿದೆ. ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದ್ದ ಆಫ್ಘಾನಿಸ್ತಾನ ಇದೀಗ ಪಾಕಿಸ್ತಾನ ವಿರದ್ಧವೂ ಗೆಲುವಿನ ಸಿಹಿ ಕಂಡಿದೆ. ಪಾಕಿಸ್ತಾನ ನೀಡಿದ 283 ರನ್ ಟಾರ್ಗೆಟ್ ಸುಲಭವಾಗಿ ಬೆನ್ನಟ್ಟಿದ ಆಫ್ಘಾನಿಸ್ತಾನ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಪಾಕಿಸ್ತಾನ ಕೊನೆಯ ಸ್ಥಾನದಿಂದ 6ನೇ ಸ್ಥಾನಕ್ಕೆ ಜಿಗಿದಿದೆ.ಇತ್ತ ಪಾಕಿಸ್ತಾನ 5 ಪಂದ್ಯದಲ್ಲಿ 3 ಸೋಲಿಗೆ ಗುರಿಯಾಗಿದೆ.
ಆಫ್ಘಾನಿಸ್ತಾನಕ್ಕೆ 283 ರನ್ ಟಾರ್ಗೆಟ್ ನೀಡಲಾಗಿತ್ತು. ಹೇಳಿ ಕೇಳಿ ಪಾಕಿಸ್ತಾನ ಬೌಲಿಂಗ್ ತುಂಬಾನೇ ಸ್ಟ್ರಾಂಗ್. ಹೀಗಾಗಿ ಈ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುತ್ತೇ ಅನ್ನೋ ಲೆಕ್ಕಾಚಾರ ಪಾಕಿಸ್ತಾನ ಅಭಿಮಾನಿಗಳಿಗಿತ್ತು. ಇತ್ತ ಚಿಪಾಕ್ ಮೈದಾನದಲ್ಲಿ ದಿಲ್ ದಿಲ್ ಪಾಕಿಸ್ತಾನ ಘೋಷಣೆಗಳು ಮೊಳಗಿತ್ತು. ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಅಭಿಮಾನಿಗಳ ದೃಷ್ಟಿಯಿಂದ ತಮಿಳುನಾಡು ಪೊಲೀಸ್ ತೆಗೆದುಕೊಂಡ ನಿರ್ಧಾರ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಚೆನ್ನೈ ಚಿಪಾಕ್ ಮೈದಾನದೊಳಗ್ಗೆ ಭಾರತದ ಧ್ವಜ ತೆಗೆದುಕೊಂಡು ಹೋಗಲು ಭಾರತೀಯ ಅಭಿಮಾನಿಗಳಿಗೆ ಅವಕಾಶ ನೀಡಿಲ್ಲ ಅನ್ನೋ ಆರೋಪವೂ ಜೋರಾಗಿ ಕೇಳಿಬಂದಿತ್ತು. ಇತ್ತ ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿ ಭಾರಿ ಟ್ವೀಟ್ ಮಾಡಿದ್ದರು. ಕೊನೆಗೆ ಪಾಕಿಸ್ತಾನ ತಂಡಕ್ಕೆ ಸೋಲಿನ ಕಹಿ ಎದುರಾಗಿದೆ. ಆಫ್ಘಾನಿಸ್ತಾನ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ.
ಟೀಂ ಇಂಡಿಯಾ ವಿಶ್ವಕಪ್ ಗೆಲ್ಲದೇ ಇರಲು ಸಾಧ್ಯವೇ ಇಲ್ಲ: ಶೋಯೆಬ್ ಅಖ್ತರ್ ಬಿಚ್ಚು ಮಾತು
ಚೇಸಿಂಗ್ ವೇಳೆ ಆಫ್ಘಾನಿಸ್ತಾನ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜರ್ದಾನ್ ಹೋರಾಟಕ್ಕೆ ಪಾಕಿಸ್ತಾನ ಬಳಲಿ ಬೆಂಡಾಯಿತು. ಇವರ ಆರಂಭ ಪಾಕಿಸ್ತಾನ ಲೆಕ್ಕಾಚಾರವನ್ನು ಆರಂಭದಲ್ಲೇ ತಲೆಕೆಳಗೆ ಮಾಡಿತು. ಗುರ್ಬಾಜ್ 65 ರನ್ ಸಿಡಿಸಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 130 ರನ್ ಜೊತೆಯಾಟ ನೀಡಿತು. ಇತ್ತ ಇಬ್ರಾಹಿಂ ಜರ್ದಾನ್ 87 ರನ್ ಸಿಡಿಸಿ ಆಫ್ಘಾನಿಸ್ತಾನ ತಂಡಕ್ಕೆ ಆಸರೆಯಾದರು.
ಆರಂಭಿಕರ ಬಲಿಕ ರಹಮತ್ ಶಾ ನಾಯಕ ಹಶ್ಮುತುಲ್ಹಾ ಶಾಹಿದಿ ಆಟ ಪಾಕಿಸ್ತಾನದ ಗೆಲುವನ್ನು ಕಸಿದುಕೊಂಡಿತು. ಈ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಯಾವುದೇ ತಂಡಕ್ಕೆ ಶಾಕ್ ನೀಡಬಲ್ಲ ಸಾಮರ್ಥ್ಯಹೊಂದಿದೆ ಅನ್ನೋದನ್ನು ಮತ್ತೆ ಸಾಬೀತುಪಡಿಸಿತು. ರಹಮತ್ ಶಾ ಅಜೇಯ ರನ್ ಸಿಡಿಸಿದರೆ, ಹಶ್ಮತುಲ್ಹಾ ಶಾಹಿದಿ ಅಜೇಯ ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.
ಗಾಯದ ಮೇಲೆ ಬರೆ..! ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಾರಕ ವೇಗಿ ವಿಶ್ವಕಪ್ ಟೂರ್ನಿಯಿಂದಲೇ ಔಟ್..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.