
ಕೊಲೊಂಬೋ (ಅ.05) ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಎಡವಿದ ಪಾಕಿಸ್ತಾನ 159 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 88 ರನ್ ಗೆಲುವು ದಾಖಲಿಸಿದೆ. ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮುಗ್ಗರಿಸಿದೆ. ಈ ಮೂಲಕ ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಭಾರತ ಮಹಿಳಾ ತಂಡ ಪುರುಷರ ತಂಡದ ರೀತಿಯಲ್ಲೇ ಪಾಕಿಸ್ತಾನ ಆಟಗಾರ್ತಿಯರಿಗೆ ಹ್ಯಾಂಡ್ ಶೇಕ್ ಮಾಡದೇ ತೆರಳಿದೆ. ಈ ಮೂಲಕ ಪಾಕಿಸ್ತಾನ ಮತ್ತೆ ತೀವ್ರ ಮುಖಭಂಗ ಅನುಭವಿಸಿದೆ. ಸೆಪ್ಟೆಂಬರ್ 28ರಂದು ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಹ್ಯಾಂಡ್ ಶೇಕ್ ಮಾತ್ರವಲ್ಲ, ಹಲವು ರೀತಿಯಲ್ಲಿ ಪಾಕಿಸ್ತಾನ ತಂಡವನ್ನು ರೋಸ್ಟ್ ಮಾಡಿತ್ತು.
ಭಾರತ 248ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನದ ಸಾದಿರ್ ಅಮೀನ್ ದಿಟ್ಟ ಹೋರಾಟ ನೀಡಿದ್ದರು. 81 ರನ್ ಸಿಡಿಸಿ ಅಬ್ಬರಿಸಿದ್ದರು. ಅಮೀನ್ ಅಬ್ಬರ ಭಾರತಕ್ಕೆ ತೆಲನೋವಾಗಿತ್ತು. ಆದರೆ ಸಾದಿರ್ ಅಮೀನ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತ್ತು. ನತಾಲಿಯಾ ಪರ್ವೇಜ್ ಹಾಗೂ ಸಾದಿರ್ ಅಮಿನ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ನೆರವಾಗಿತ್ತು. ಆದರೆ ಪರ್ವೇಜ್ 33 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಾದಿರ್ ಅಮಿನ್ ಏಕಾಂಗಿಯಾಗಿ ಹೋರಾಟ ನೀಡಿದರು. ಯಾರಿಂದರೂ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ 43 ಓವರ್‌ಗಳಲ್ಲಿ ಪಾಕಿಸ್ತಾನ ಆಲೌಟ್ ಆಗಿತ್ತು. 159 ರನ್ ಸಿಡಿಸಿ ಪಾಕಿಸ್ತಾನ ಸೋಲೋಪ್ಪಿಕೊಂಡಿತು.
ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಏಕದಿನ ಮಾದರಿಯಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲು ಕಂಡಿಲ್ಲ. 12 ಏಕದಿನ ಪಂದ್ಯ ಆಡಿದ್ದು, 12ರಲ್ಲೂ ಪಾಕಿಸ್ತಾನ ವಿರುದ್ದ ಭಾರತ ಗೆಲುವು ದಾಖಲಿಸಿದೆ.
ಮಹಿಳಾ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರತ ಮಹಿಳಾ ತಂಡ ಮೊದಲ ಸ್ಥಾನದಲ್ಲಿದೆ. ಆಡಿದ 2 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಒಟ್ಟು ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಇತ್ತ ಪಾಕಿಸ್ತಾನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 2 ಪಂದ್ಯದಲ್ಲಿ ಮುಗ್ಗರಿಸಿದೆ. ಹೀಗಾಗಿ 6ನೇ ಸ್ಥಾನದಲ್ಲಿದೆ. ಒಟ್ಟು 8 ತಂಡಗಳ ಪೈಕಿ ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ 7 ಮತ್ತು 8ನೇ ಸ್ಥಾನದಲ್ಲಿದೆ. 2ರಲ್ಲ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ನಂತರದ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.