
ಕೊಲೊಂಬೊ (ಅ.05) ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಇತ್ತೀಚೆಗೆ ಮುಖಾಮುಖಿಯಾಗಿತ್ತು. ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಇದೀಗ ಮಹಿಳಾ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದಿರುವ ಪಾಕಿಸ್ತಾನಕ್ಕೆ ಭಾರತ ಮಹಿಳಾ ತಂಡ ಆರಂಭದಲ್ಲೇ ಶಾಕ್ ಕೊಟ್ಟಿದೆ. ಪಾಕಿಸ್ತಾನ 6 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಪಂದ್ಯದಲ್ಲಿ ಭಾರಿ ಹೈಡ್ರಾಮಗಳು ನಡೆಯುತ್ತಿದ್ದು, ಜಿದ್ದಾಜಿದ್ದಿ, ಪೈಪೋಟಿ ತೀವ್ರಗೊಂಡಿದೆ.
ಭಾರತ 248 ರನ್ ಟಾರ್ಗೆಟ್ ನೀಡಿದೆ. ಇತ್ತ ಪಾಕಿಸ್ತಾನ ಬ್ಯಾಟಿಂಗ್ ಆರಂಭಿಸದ ಬೆನ್ನಲ್ಲೇ ಒತ್ತಡ ಹೇರಲು ಭಾರತ ಮಹಿಳಾ ತಂಡ ಪ್ರಯತ್ನಿಸಿತು. ಮುಬೀನಾ ಆಲಿ ರನ್ ಗಳಿಸಲು ಪರದಾಡುತ್ತಿದ್ದರು. ಇದೇ ವೇಳೆ ಎಲ್‌ಬಿ ಬಲೆಗೆ ಬಿದ್ದ ಮಬೀನಾ ವಿರುದ್ದ ಭಾರತ ಡಿಆರ್‌ಎಸ್ ಪಡೆದಕೊಂಡಿತ್ತು. ಔಟ್ ಇಲ್ಲದಿದ್ದರೂ ಭಾರತ ಒತ್ತಡಕ್ಕೆ ಸಿಲುಕಿಸಲು ಈ ಪ್ರಯತ್ನ ಮಾಡಿತ್ತು. ಭಾರತ ಒಂದು ಡಿಆರ್‌ಎಸ್ ಅವಕಾಶ ಕಳೆದುಕೊಂಡಿತ್ತು. ಆರಂಭದಲ್ಲೇ ಮಿಸ್ಟೇಕ್ ಮಾಡಿದ ಭಾರತ ಮಹಿಳಾ ತಂಡದ ವಿರುದ್ದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.ಆದರೆ ಭಾರತದ ಪ್ರಯತ್ನ ಫಲಿಸಿತ್ತು.
ಪಾಕಿಸ್ತಾನವನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಭಾರತ ಮಹಿಳಾ ತಂಡ ಯಶಸ್ವಿಯಾಗಿತ್ತು. ಇದರ ಪರಿಣಾಮ ಮುಬೀನಾ ಆಲಿ ಕೇವಲ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಪಾಕಿಸ್ತಾನ 6 ರನ್ ಸಿಡಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಭಾರತ ಆರಂಭಿಕ ಮೇಲುಗೈ ಸಾಧಿಸಿತು. ವಿಕೆಟ್ ಪತನದಿಂದ ಪಾಕಿಸ್ತಾನ ರನ್‌ರೇಟ್ ಮತ್ತಷ್ಟು ಕುಸಿತ ಕಂಡಿತ್ತು. ಇದೀಗ ಪಾಕಿಸ್ತಾನ ವಿಕೆಟ್ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನಕೇಂದ್ರರಿಸಿದೆ.
ಟೀಂ ಇಂಡಿಯಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಮೂರು ಬಾರಿ ಮುಖಾಮುಖಿಯಾಗಿತ್ತು.ಮೂರು ಬಾರಿ ಪಾಕಿಸ್ತಾನ ಜೊತೆ ಯಾವುದೇ ಹ್ಯಾಂಡ್‌ಶೇಕ್ ಮಾಡಿಲ್ಲ. ಪಾಕಿಸ್ತಾನ ಆಟಗಾರರನ್ನು ಸಂಪೂರ್ಣವಾಗಿ ಕಡಣೆಗಣಿಸಿತ್ತು. ಇದೀಗ ಭಾರತ ಮಹಿಳಾ ತಂಡ ಕೂಡ ಪಾಕಿಸ್ತಾನ ಜೊತೆ ಯಾವುದೇ ಹ್ಯಾಂಡ್‌ಶೇಕ್ ಮಾಡಿಲ್ಲ. ಟಾಸ್ ವೇಳೆ ಹರ್ಮನ್‌ಪ್ರೀತ್ ಕೌರ್ ಹಾಗೂ ಫಾತಿಮಾ ಸನಾ ಮುಖ ನೋಡಲಿಲ್ಲ. ಹರ್ಮನ್ ಹ್ಯಾಂಡ್‌ಶೇಕ್ ಮಾಡದೇ ತಮ್ಮ ನೀತಿ ಪಾಲಿಸಿದ್ದಾರೆ.
ಭಾರತ ಬ್ಯಾಟಿಂಗ್ ವೇಳೆ ಪಾಕಿಸ್ತಾನ ತಂಡ ಸ್ಲೆಡ್ಜಿಂಗ್ ಮೂಲಕ ವಿಕೆಟ್ ಪಡೆಯು ಪ್ರಯತ್ನ ಮಾಡಿತ್ತು. ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪಾಕಿಸ್ತಾನ ಹೆಚ್ಚು ಸ್ಲೆಡ್ಜಿಂಗ್ ಮಾಡಿತ್ತು. ಇದಕ್ಕೆ ಅಷ್ಟೇ ಖಾರವಾಗಿ ಹರ್ಪಮನ್ ಪ್ರೀತ್‌ಕೌರ್ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.