ICC Women's T20 World Cup: ಬೆಥ್‌ ಮೂನಿ ಅರ್ಧಶತಕ, 172 ರನ್‌ ಪೇರಿಸಿದ ಅಸೀಸ್‌

Published : Feb 23, 2023, 07:57 PM ISTUpdated : Feb 23, 2023, 08:11 PM IST
ICC Women's T20 World Cup: ಬೆಥ್‌ ಮೂನಿ ಅರ್ಧಶತಕ, 172 ರನ್‌ ಪೇರಿಸಿದ ಅಸೀಸ್‌

ಸಾರಾಂಶ

ಭಾರತ ತಂಡದ ನೀರಸ ಫೀಲ್ಡಿಂಗ್‌ನ ಲಾಭ ಪಡೆದುಕೊಂಡ ಆಸ್ಟ್ರೇಲಿಯಾ ತಂಡ ಮಹಿಳೆಯರ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಗಿದೆ. ಬೆಥ್‌ ಮೂನಿ ಬಾರಿಸಿದ ಆಕರ್ಷಕ ಅರ್ಧಶತಕದ ಬಾರಿಸುವ ಮೂಲಕ ತಂಡ ಉತ್ತಮ ಮೊತ್ತಕ್ಕೆ ಕಾರಣರಾದರು.  

ಕೇಪ್‌ಟೌನ್‌ (ಫೆ.23): ಟೂರ್ನಿಯಲ್ಲಿ ನೀರಸ ಫೀಲ್ಡಿಂಗ್‌ ಕಾರಣಕ್ಕಾಗಿ ಲೀಗ್‌ ಹಂತದಲ್ಲಿ ಒಂದು ಸೋಲಿನ ಕಹಿ ಕಂಡಿದ್ದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲೂ ಕೆಟ್ಟ ಫೀಲ್ಡಿಂಗ್‌ ಅಭ್ಯಾಸವನ್ನು ಮುಂದುವರಿಸಿದೆ.  ಆರಂಭಿಕ ಆಟಗಾರ್ತಿ ಬೆಥ್‌ ಮೂನಿ ಬಾರಿಸಿದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ ಕದನದಲ್ಲಿ 4 ವಿಕೆಟ್‌ಗೆ 172 ರನ್‌ ಪೇರಿಸಿದೆ. ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ಮಾಡಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್‌ಗೆ ಅಲಿಸ್ಸಾ ಹೀಲಿ ಹಾಗೂ ಬೆಥ್‌ ಮೂನಿ 45 ಎಸೆತಗಳಲ್ಲಿ 52 ರನ್‌ಗಳ ಎಚ್ಚರಿಕೆಯ ಜೊತೆಯಾಟವಾಡಿದ್ದರು. ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಅಲಿಸ್ಸಾ ಹೀಲಿ, 26 ಎಸೆತಗಳಲ್ಲಿ 3 ಬೌಂಡರಿಗಳಿದ್ದ 25 ರನ್‌ ಬಾರಿಸಿ ರಾಧಾ ಯಾದವ್‌ ಎಸೆತದಲ್ಲಿ ಔಟಾದರು. ರಾಧಾ ಎಸೆತದಲ್ಲಿ ಕ್ರೀಸ್‌ ಬಿಟ್ಟು ಆಡಲು ಯತ್ನಿಸಿದ ಹೀಲಿಯನ್ನು ರೀಚಾ ಘೋಷ್‌ ಸ್ಟಂಪ್‌ ಔಟ್‌ ಮಾಡಿದರು.

ಬಳಿಕ ಬೆಥ್‌ ಮೂನಿಗೆ ಜೊತೆಯಾದ ನಾಯಕಿ ಮೆಗ್‌ ಲ್ಯಾನಿಂಗ್‌ ನಿಧಾನಗತಿಯ ಆಟವಾಡಿದರೆ, ಮೂನಿ ಮಾತ್ರ ಅಬ್ಬರಿಸಿದರು 37 ಎಸೆತ ಎದುರಿಸಿದ ಬೆಥ್‌ ಮೂನಿ 7 ಬೌಂಡರಿ, 1 ಸಿಕ್ಸರ್‌ ಇದ್ದ 54 ರನ್‌ ಬಾರಿಸಿ ಔಟಾದರು. ಅರ್ಧಶತಕ ಬಾರಿಸಿ ಭಾರತದ ಬೌಲಿಂಗ್‌ಗೆ ಸವಾಲಾಗಿದ್ದ ಜೋಡಿಯನ್ನು ಶಿಖಾ ಪಾಂಡೆ ಬೇರ್ಪಡಿಸಿದರು. ಬೆಥ್‌ ಮೂನಿ ನಿರ್ಗಮನದ ಬಳಿಕ ಜೊತೆಯಾದ ಲ್ಯಾನಿಗ್‌ ಹಾಗೂ ಆಶ್ಲೇಗ್‌ ಗಾರ್ಡ್‌ನರ್‌ (31ರನ್,‌ 18 ಎಸೆತ, 5 ಬೌಂಡರಿ) ಬಿರುಸಾಗಿ ರನ್‌ ಬಾರಿಸಲು ಆರಂಭಿಸಿದರು. ಈ ವೇಳೆ ಭಾರತ ಸಾಕಷ್ಟು ಕೆಟ್ಟ ಫೀಲ್ಡಿಂಗ್‌ ನಡೆಸಿತು. ಇವರಿಬ್ಬರೂ 3ನೇ ವಿಕೆಟ್‌ಗೆ 53 ರನ್‌ ಜೊತೆಯಾಟವಾಡಿದ್ದಲ್ಲದೆ, ಸ್ಲಾಗ್‌ ಓವರ್‌ಗಳಲ್ಲಿ ಅಬ್ಬರದ ಆಟವಾಡುವ ಸೂಚನೆಯನ್ನೂ ನೀಡಿದ್ದರು.

ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್‌ ಉಚಿತವಾಗಿ ಪ್ರಸಾರ!

ಈ ಹಂತದಲ್ಲಿ ದಾಳಿಗಿಳಿದಿ ದೀಪ್ತಿ ಶರ್ಮ, ಗಾರ್ಡ್‌ನರ್‌ ಅವರನ್ನು ಬೌಲ್ಡ್‌ ಮಾಡಿದರೆ,  ನಂತರ ಬಂದ ಗ್ರೇಸ್‌ ಹ್ಯಾರಿಸ್‌4 ಎಸೆತದಲ್ಲಿ ಕೇವಲ 1 ಬೌಂಡರಿಯೊಂದಿಗೆ 7 ರನ್‌ ಬಾರಿಸಿ ಶಿಖಾ ಪಾಂಡೆಗೆ ಔಟಾದರು. 160ರ ಆಸುಪಾಸಿನ ರನ್‌ ಬಾರಿಸುವ ಹಂತದಲ್ಲಿದ್ದ ಆಸೀಸ್‌ ತಂಡವನ್ನು 170ರ ಗಡಿ ದಾಟಿಸಿದ್ದು ನಾಯಕಿ ಮೆಗ್‌ ಲ್ಯಾನಿಂಗ್. ರೇಣುಕಾ ಸಿಂಗ್‌ ಎಸೆದ ಕೊನೇ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ 1 ಬೌಂಡರಿ ಬಾರಿಸಿದ ಲ್ಯಾನಿಂಗ್‌ 34 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ ಇದ್ದ ಅಜೇಯ 49 ರನ್‌ ಬಾರಿಸಿದರು. 

ICC Women's T20 World Cup: ಟಾಸ್‌ ಗೆದ್ದ ಆಸ್ಟ್ರೇಲಿಯಾ, ಬ್ಯಾಟಿಂಗ್‌ ಆಯ್ಕೆ

ಭಾರತ ತಂಡದ ಪರವಾಗಿ ರೇಣುಕಾ ಸಿಂಗ್‌ 4 ಓವರ್‌ಗಳ ಕೋಟಾದಲ್ಲಿ 41 ರನ್‌ ನೀಡಿ ದುಬಾರಿ ಎನಿಸಿದರೆ, ಶಿಖಾ ಪಾಂಡೆ 32 ರನ್‌ಗೆ 2 ವಿಕೆಟ್‌ ಉರುಳಿಸುವ ಮೂಲಕ ಭಾರತದ ಯಶಸ್ವಿ ಬೌಲರ್‌ ಎನಿಸಿದರು.ದೀಪ್ತಿ ಶರ್ಮ ಹಾಗೂ ರಾಧಾ ಯಾದವ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.  ಹಾಲಿ ರನ್ನರ್‌ಅಪ್‌ ಆಗಿರುವ ಭಾರತ ತಂಡ 2020ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧವೇ 85 ರನ್‌ಗಳಿಂದ ಸೋಲು ಕಂಡಿತ್ತು. ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತದ (Team India) ಮುಂದಿದೆ.ಇನ್ನೊಂದೆಡೆ ಆಸ್ಟ್ರೇಲಿಯಾ (Australia) ತಂಡ ಟಿ20 ವಿಶ್ವಕಪ್‌ನಲ್ಲಿ (ICC Womens T20 World Cup) ದಾಖಲೆಯ ಐದು ಬಾರಿಯ ಚಾಂಪಿಯನ್‌ ಎನಿಸಿಕೊಂಡ ತಂಡವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಮಿನಿ ಹರಾಜು: ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತಕ್ಕೆ ಬಿಡ್ ಆಗಿ ದಾಖಲೆ ಬರೆದ ಕ್ಯಾಮರೋನ್ ಗ್ರೀನ್
ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ