
ಕೇಪ್‌ಟೌನ್ (ಫೆ.23): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಹಿಳೆಯರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ಮಾಡಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಆಲ್ರೌಂಡ್ ಆಟಗಾರ್ತಿ ಪೂಜಾ ವಸ್ತ್ರಾಕರ್ ಪಂದ್ಯದಿಂದ ಹೊರಗುಳಿದಿದ್ದರೆ, ಅವರ ಬದಲಿಗೆ ಸ್ನೇಹಾ ರಾಣಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ ಕೂಡ ಅಲಭ್ಯರಾಗುವ ಬಗ್ಗೆ ಮಾಹಿತಿ ದೊರಕಿತ್ತು. ಆದರೆ, ಪಂದ್ಯದ ವೇಳೆಗೆ ಅವರು ಫಿಟ್ ಆಗಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಅಲಿಸ್ಸಾ ಹೀಲಿ ತಂಡಕ್ಕೆ ವಾಪಸಾಗಿದ್ದಾರೆ.
ಟಾಸ್ ವೇಳೆ ಮಾತನಾಡಿದ ಆಸೀಸ್ ನಾಯಕಿ ಮೆಗ್ ಲ್ಯಾನಿಂಗ್, ವಿಕೆಟ್ ತುಂಬಾ ಉತ್ತಮವಾಗಿರುವಂತೆ ಕಾಣುತ್ತಿದೆ. ಅದಕ್ಕಾಗಿ ಮೊದಲು ಬ್ಯಾಇಟಂಗ್ ಮಾಡಲು ತೀರ್ಮಾನ ಮಾಡಿದ್ದೇವೆ. ಅಲಾನಾ ಕಿಂಗ್ ಬದಲು ಜೆಸ್ ಜೊನಾಸ್ಸೆನ್ ತಂಡಕ್ಕೆ ಬಂದಿದ್ದಾರ.ೆ ಇದನ್ನು ಅಲಿಸ್ಸಾ ಹೀಲಿ ಫಿಟ್ ಆಗಿರುವ ಕಾರಣ, ಅನ್ನಾಬೆಲ್ ಸುದರ್‌ಲೆಂಡ್ ಸ್ಥಾನಕ್ಕೆ ಅವರು ವಾಪಾಸ್ ಬಂದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಗಳಿಸುವ ಗುರಿ ನಮ್ಮದು ಎಂದು ಹೇಳಿದರು.
'ಪೂಜಾ ವಸ್ತ್ರಾಕರ್ ಅನಾರೋಗ್ಯದಲ್ಲಿದ್ದಾರೆ. ಅವರ ಬದಲು ಸ್ನೇಹ ರಾಣಾ ತಂಡಕ್ಕೆ ಬಂದಿದ್ದಾರೆ. ತಂಡದಲ್ಲಿ ಇನ್ನೂ ಒಂದು ಬದಲಾವಣೆ ಇದೆ. ರಾಜೇಶ್ವರಿ ಗಾಯಕ್ವಾಡ್ ಬದಲಿಗೆ ರಾಧಾ ಯಾದವ್ ಸ್ಥಾನ ಪಡೆದಿದ್ದಾರೆ. ನನಗೆ ಸಣ್ಣ ಪ್ರಮಾಣದ ಜ್ವರವಿತ್ತು. ಆದರೆ, ಈಗ ಫಿಟ್ ಆಗಿದ್ದೇನೆ. ನಾನು ಈ ಟೂರ್ನಿಯಲ್ಲಿ ಮೊದಲಿನಿಂದಲೂ ಒಂದೇ ಮಾತನ್ನು ಹೇಳುತ್ತಾ ಬಂದಿದ್ದೇನೆ. ನಮ್ಮ ಬ್ಯಾಟಿಂಗ್ ಉತ್ತಮವಾಗಿರಬೇಕು ಎನ್ನುವುದು. ಅದಕ್ಕಾಗಿ ಒಂದು ಬ್ಯಾಟರ್‌ಅನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ. ದೇವಿಕಾ ಬದಲು ಯಸ್ತಿಕಾರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ ಎಂದು ಹರ್ಮಾನ್‌ಪ್ರೀತ್ ಕೌರ್ ಹೇಳಿದ್ದಾರೆ.
ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದರೆ, ಭಾರತ ತಂಡ ಆಡಿದ ನಾಲ್ಕು ಪಂದ್ಯದಲ್ಲಿ 3ರಲ್ಲಿ ಗೆದ್ದು ಗುಂಪಿನ 2ನೇ ಸ್ಥಾನಿಯಾಗಿ ಸೆಮಿಫೈನಲ್ ಹಂತಕ್ಕೇರಿತ್ತು. ಗುಂಪು ಹಂತದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ಐರ್ಲೆಂಡ್ ವಿರುದ್ಧ ಭಾರತ ಜಯ ಕಂಡಿದ್ದರೆ, ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಎ ಗುಂಪಿನಿಂದ ಸೆಮಿಫೈನಲ್‌ಗೇರಿದ ಇನ್ನೊಂದು ತಂಡ ದಕ್ಷಿಣ ಆಫ್ರಿಕಾ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯ ನಾಳೆ ಇದೇ ಮೈದಾನದಲ್ಲಿ ನಡೆಯಲಿದೆ.
ICC Women's T20 World Cup: ಆಸೀಸ್ ಎದುರಿನ ಸೆಮೀಸ್‌ಗೂ ಮುನ್ನ ಹರ್ಮನ್‌ಪ್ರೀತ್ ಕೌರ್ ಪಡೆಗೆ ಶಾಕ್..!
ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಯತ್ಸಿಕಾ ಭಾಟಿಯಾ, ಸ್ನೇಹ ರಾಣಾ, ಶಿಖಾ ಪಾಂಡೆ, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್
ICC Women's T20 World Cup ಇಂದು ಭಾರತ vs ಆಸೀಸ್ ಹೈವೋಲ್ಟೇಜ್ ಸೆಮೀಸ್ ಕದನ..!
ಆಸ್ಟ್ರೇಲಿಯಾ ತಂಡ: ಅಲಿಸ್ಸಾ ಹೀಲಿ (ವಿ.ಕೀ), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.