
ಮೆಲ್ಬರ್ನ್(ಮಾ.03): ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಸೋಮವಾರ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೇರಿದೆ. ಸೋತ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.
ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ!
ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ
ಆಸ್ಪ್ರೇಲಿಯಾ ನೀಡಿದ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮಾರ್ಟಿನ್ (37), ಸೋಫಿ ಡಿವೈನ್ (31) ಹೋರಾಟದ ಹೊರತಾಗಿಯೂ 20 ಓವರಲ್ಲಿ 7 ವಿಕೆಟ್‌ಗೆ 151 ರನ್‌ಗಳಿಸಿ ಸೋಲೊಪ್ಪಿತು. ಆಸೀಸ್ ಪರ ಜಾರ್ಜಿಯಾ ವಾರ್ಹೆಮ್ (3-17) ಹಾಗೂ ಮೆಗಾನ್ ಸ್ಚಟ್ (3-28) ಮಾರಕ ಬೌಲಿಂಗ್ ದಾಳಿಯಿಂದ ಗಮನಸೆಳೆದರು. ಆಸ್ಪ್ರೇಲಿಯಾ ಬೆಥ್ ಮೂನಿ (60) ನೆರವಿನಿಂದ 5 ವಿಕೆಟ್‌ಗೆ 155 ರನ್‌ಗಳಿಸಿತ್ತು.
ಸ್ಕೋರ್: ಆಸ್ಪ್ರೇಲಿಯಾ 155/5, ನ್ಯೂಜಿಲೆಂಡ್ 151/7
ಸೆಮೀಸ್ ಇಂದು ನಿರ್ಧಾರ:
ಮಾ.5ರಂದು ಸೆಮಿಫೈನಲ್ ಹಂತದ ಪಂದ್ಯಗಳು ನಡೆಯಲಿವೆ. ‘ಎ’ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಈಗಾಗಲೇ ಸೆಮೀಸ್ ಪ್ರವೇಶಿಸಿವೆ. ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಅಗ್ರ 2 ಸ್ಥಾನದಲ್ಲಿವೆ. ಇವೆರಡೂ ತಂಡಗಳು ಸೆಮೀಸ್‌ಗೇರುವುದು ಖಚಿತ. ಮಂಗಳವಾರ ನಡೆಯಲಿರುವ ದ.ಆಫ್ರಿಕಾ-ವಿಂಡೀಸ್ ಪಂದ್ಯದ ಫಲಿತಾಂಶ ಸೆಮೀಸ್ ಹಣಾಹಣಿಯನ್ನು ನಿರ್ಧರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.