ICC U-19 World Cup: ಕಿರಿಯರ ವಿಶ್ವಕಪ್ ಆಡಿದ್ದ ರಾಜವರ್ಧನ್‌ಗೆ 21 ವರ್ಷ..?

Suvarna News   | Asianet News
Published : Feb 19, 2022, 12:32 PM IST
ICC U-19 World Cup: ಕಿರಿಯರ ವಿಶ್ವಕಪ್ ಆಡಿದ್ದ ರಾಜವರ್ಧನ್‌ಗೆ 21 ವರ್ಷ..?

ಸಾರಾಂಶ

* ಐಸಿಸಿ ಅಂಡರ್ 19 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಟಗಾರನ ಮೇಲೆ ವಯಸ್ಸು ವಂಚನೆ ಆರೋಪ * ರಾಜವರ್ಧನ್‌ ಹಂಗ್ರೇಕರ್‌ ವಿರುದ್ಧ ವಯಸ್ಸು ವಂಚನೆಯ ಆರೋಪ  * ಭಾರತ ಪರ 6 ಪಂದ್ಯಗಳನ್ನಾಡಿ 5 ವಿಕೆಟ್‌ ಕಬಳಿಸಿ ಮಿಂಚಿದ್ದ ರಾಜವರ್ಧನ್‌ ಹಂಗ್ರೇಕರ್‌

ನವದೆಹಲಿ(ಫೆ.19): ಅಂಡರ್‌-19 ವಿಶ್ವಕಪ್‌ (ICC U-19 World Cup) ವಿಜೇತ ಭಾರತದ ತಂಡದಲ್ಲಿದ್ದ ರಾಜವರ್ಧನ್‌ ಹಂಗ್ರೇಕರ್‌ (Rajvardhan Hangargekar) ವಿರುದ್ಧ ವಯಸ್ಸು ವಂಚನೆಯ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಾರಾಷ್ಟ್ರ ಕ್ರೀಡಾ ಇಲಾಖೆ ಆಯುಕ್ತ ಓಂಪ್ರಕಾಶ್‌ ಬಕೋರಿಯಾ ಅವರು ಬಿಸಿಸಿಐಗೆ (BCCI) ದೂರು ನೀಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ‘ಶಾಲಾ ದಾಖಲಾತಿ ಪ್ರಕಾರ ರಾಜವರ್ಧನ್‌ ವಯಸ್ಸು 21. ಆದರೆ 19 ವರ್ಷ ಎಂದು ದಾಖಲೆ ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಜನವರಿ 7, 2001ರ ಬದಲು ನವೆಂಬರ್10, 2002 ಎಂದು ನಮೂದಿಸಿ ವಂಚಿಸಿದ್ದಾರೆ’ ಎಂದು ಓಂಪ್ರಕಾಶ್‌ ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. 

ವೆಸ್ಟ್ ಇಂಡೀಸ್‌ನಲ್ಲಿ ಇತ್ತೀಚೆಗಷ್ಟೇ ಮಕ್ತಾಯವಾದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ರಾಜವರ್ಧನ್‌ ಹಂಗ್ರೇಕರ್‌, ಭಾರತ ಪರ 6 ಪಂದ್ಯಗಳನ್ನಾಡಿ 5 ವಿಕೆಟ್‌ ಕಬಳಿಸಿ ಮಿಂಚಿದ್ದರು. ಯಶ್ ಧುಳ್ (Yash Dhull) ನೇತೃತ್ವದ ಟೀಂ ಇಂಡಿಯಾ, ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಐಪಿಎಲ್‌ ಹರಾಜಿನಲ್ಲಿ ರಾಜವರ್ಧನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಫ್ರಾಂಚೈಸಿಯು 1.5 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ಹಿಂದೆ ಜಮ್ಮು-ಕಾಶ್ಮೀರದ ರಸಿಕ್‌ ದಾರ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬಳಿಕ ವಯೋ ವಂಚನೆ ಸಾಬೀತಾಗಿತ್ತು. ಅವರನ್ನು ಬಿಸಿಸಿಐ 2 ವರ್ಷ ನಿಷೇಧಗೊಳಿಸಿತ್ತು. ಈ ವರ್ಷ ಐಪಿಎಲ್‌ನಲ್ಲಿ ರಸಿಕ್‌ ಕೆಕೆಆರ್‌ ಪರ ಆಡಲಿದ್ದಾರೆ.

Ranji Trophy: ಚೊಚ್ಚಲ ರಣಜಿ ಪಂದ್ಯದಲ್ಲೇ ಯಶ್ ಧುಳ್ ಆಕರ್ಷಕ ಶತಕ

ಲಂಕಾ ವಿರುದ್ಧ ಟಿ20ಗೆ ಕೊಹ್ಲಿಗೆ ವಿಶ್ರಾಂತಿ?

ನವದೆಹಲಿ: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಫೆ.24ರಿಂದ ಆರಂಭಗೊಳ್ಳಲಿರುವ ಸರಣಿಗೆ ಒಂದೆರಡು ದಿನಗಳಲ್ಲಿ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ನಿರಂತರ ಕ್ರಿಕೆಟ್‌, ನಾಯಕತ್ವ ವಿವಾದಗಳಿಂದ ದಣಿದಿರುವ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ವಿರಾಟ್‌ ಟೆಸ್ಟ್‌ ಸರಣಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೆ.ಎಲ್‌.ರಾಹುಲ್‌ (KL Rahul) ಸಹ ಸರಣಿಗೆ ಗೈರಾಗಬಹುದು ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ(Ravindra Jadeja), ವಿಶ್ರಾಂತಿಯಲ್ಲಿದ್ದ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಟಿ20 ಸರಣಿಗೆ ವಾಪಸಾಗಲಿದ್ದಾರೆ ಎಂದು ವರದಿಯಾಗಿದೆ.

ಭಾರತಕ್ಕೆ 100ನೇ ಟಿ20 ಜಯ

ವಿಂಡೀಸ್‌ ವಿರುದ್ಧ 2ನೇ ಪಂದ್ಯ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ 100 ಗೆಲುವುಗಳನ್ನು ಪೂರೈಸಿದೆ. ಈ ಮೈಲಿಗಲ್ಲು ತಲುಪಿದ ವಿಶ್ವದ 2ನೇ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 155 ಪಂದ್ಯಗಳಲ್ಲಿ ಭಾರತ 100 ಗೆಲುವುಗಳನ್ನು ಕಂಡಿದ್ದು 51 ಸೋಲು ಕಂಡಿದೆ. 4 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯವಾಗಿವೆ. 100 ಗೆಲುವುಗಳನ್ನು ಕಂಡ ಮೊದಲ ತಂಡ ಎನ್ನುವ ದಾಖಲೆಯನ್ನು ಪಾಕಿಸ್ತಾನ ಬರೆದಿತ್ತು. ಪಾಕಿಸ್ತಾನ ಈ ವರೆಗೂ 189 ಪಂದ್ಯಗಳನ್ನಾಡಿದ್ದು, 118 ಗೆಲುವು, 66 ಸೋಲು ಕಂಡಿದೆ. 5 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.

ಕಿವೀಸ್‌ ವಿರುದ್ಧ ಭಾರತ ವನಿತೆಯರಿಗೆ ಸರಣಿ ಸೋಲು

ಕ್ವೀನ್ಸ್‌ಟೌನ್‌: ನ್ಯೂಜಿಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‌ ಸೋಲು ಅನುಭವಿಸಿದ ಭಾರತ ಮಹಿಳಾ ತಂಡ 5 ಪಂದ್ಯಗಳ ಸರಣಿಯಲ್ಲಿ 0-3 ಹಿನ್ನಡೆ ಅನುಭವಿಸಿ, ಸರಣಿ ಬಿಟ್ಟುಕೊಟ್ಟಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 49.3 ಓವರಲ್ಲಿ 7 ವಿಕೆಟ್‌ಗೆ 279 ರನ್‌ಗೆ ಆಲೌಟ್‌ ಆಯಿತು. ದೀಪ್ತಿ(69), ಮೇಘನಾ(61) ಹಾಗೂ ಶಫಾಲಿ(51) ಅರ್ಧಶತಕ ಬಾರಿಸಿದರು. ನ್ಯೂಜಿಲೆಂಡ್‌ 35ನೇ ಓವರಲ್ಲಿ 171 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಲಾರೆನ್‌ ಡೌನ್‌ ಔಟಾಗದೆ 65 ರನ್‌ ಗಳಿಸಿ 5 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?