Ranji Trophy ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ: ಬಿಹಾರದ ಗನಿ ವಿಶ್ವದಾಖಲೆ

Kannadaprabha News   | Asianet News
Published : Feb 19, 2022, 09:52 AM ISTUpdated : Feb 19, 2022, 10:04 AM IST
Ranji Trophy ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ: ಬಿಹಾರದ ಗನಿ ವಿಶ್ವದಾಖಲೆ

ಸಾರಾಂಶ

* ಪ್ರಥಮ ದರ್ಜೆ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲೇ ವಿಶ್ವದಾಖಲೆ ಬರೆದ ಶಕೀಬುಲ್‌ ಗನಿ * ಶಕೀಬುಲ್‌ ಗನಿ ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ * ಮಿಜೋರಾಂ ವಿರುದ್ಧದ ಪಂದ್ಯದಲ್ಲಿ 405 ಎಸೆತಗಳಲ್ಲಿ 341 ರನ್‌ ಬಾರಿಸಿದ ಶಕೀಬುಲ್‌ ಗನಿ

ಕೋಲ್ಕತಾ(ಫೆ.19): ಬಿಹಾರದ ಯುವ ಬ್ಯಾಟರ್‌ ಶಕೀಬುಲ್‌ ಗನಿ (Sakibul Gani) ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. 22 ವರ್ಷ ಗನಿ ರಣಜಿ ಟ್ರೋಫಿಯ (Ranji Trophy) ಪ್ಲೇಟ್‌ ಗುಂಪಿನ ಮಿಜೋರಾಂ ವಿರುದ್ಧದ ಪಂದ್ಯದಲ್ಲಿ 405 ಎಸೆತಗಳಲ್ಲಿ 341 ರನ್‌ ಬಾರಿಸಿದ್ದು, ಪ್ರಥಮ ದರ್ಜೆ ಪಾದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಇದುವರೆಗೆ ಮಧ್ಯಪ್ರದೇಶದ ಅಜಯ್‌ ರೊಹೇರಾ ಹೆಸರಲ್ಲಿತ್ತು. ಅವರು 2018-19ರಲ್ಲಿ ಹೈದರಾಬಾದ್‌ ವಿರುದ್ಧ 267 ರನ್‌ ಸಿಡಿಸಿದ್ದರು. ಗನಿ 4ನೇ ವಿಕೆಟ್‌ಗೆ ಬಾಬುಲ್‌ ಕುಮಾರ್‌(229) ಜೊತೆ 538 ರನ್‌ ಜೊತೆಯಾಟವಾಡಿದ್ದು, ತಂಡ 5 ವಿಕೆಟ್‌ಗೆ 686 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಗೌತಮ್‌ ಆಲ್ರೌಂಡ್‌ ಆಟ: ಉತ್ತಮ ಸ್ಥಿತಿಯಲ್ಲಿ ಕರ್ನಾಟಕ

ಚೆನ್ನೈ: ಕೆ.ಗೌತಮ್‌ ಆಲ್ರೌಂಡ್‌ ಆಟದ ನೆರವಿನಿಂದ ಕರ್ನಾಟಕ ತಂಡ (Karnataka Cricket Team) ರಣಜಿ ಟ್ರೋಫಿಯ ರೈಲ್ವೇಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಎಲೈಟ್‌ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ 481 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿತು. ಆದರೆ ರೈಲ್ವೇಸ್‌ ತಂಡ ಪ್ರತಿರೋಧ ತೋರಿದ್ದು, 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 213 ರನ್‌ ಗಳಿಸಿದೆ. ತಂಡ ಇನ್ನೂ 256 ರನ್‌ ಹಿನ್ನಡೆಯಲ್ಲಿದೆ. ಮೃನಾಲ್‌ ದೇವ್‌ಧಾರ್‌(56), ವಿವೇಕ್‌ ಸಿಂಗ್‌(59) ತಲಾ ಅರ್ಧಶತಕ ಸಿಡಿಸಿದ್ದು, ಅರಿಂಧಾಮ್‌ ಘೋಷ್‌ (ಔಟಾಗದೆ 78) 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಗೌತಮ್‌ 71 ರನ್‌ಗೆ 3 ವಿಕೆಟ್‌ ಪಡೆದಿದ್ದಾರೆ.

Ranji Trophy: ಚೊಚ್ಚಲ ರಣಜಿ ಪಂದ್ಯದಲ್ಲೇ ಯಶ್ ಧುಳ್ ಆಕರ್ಷಕ ಶತಕ

ಗೌತಮ್‌ ಅರ್ಧಶತಕ: ಪಂದ್ಯದ ಮೊದಲ ದಿನ 5 ವಿಕೆಟ್‌ಗೆ 392 ರನ್‌ ಕಲೆ ಹಾಕಿದ್ದ ರಾಜ್ಯ ತಂಡ, ಶುಕ್ರವಾರ 481 ರನ್‌ಗೆ ಆಲೌಟಾಯಿತು. ಕೆ.ವಿ.ಸಿದ್ಧಾರ್ಥ್(146) ಮೊದಲ ದಿನ ಗಳಿಸಿದ್ದ ಮೊತ್ತಕ್ಕೆ ಕೇವಲ 6 ರನ್‌ ಸೇರಿಸಿ ಔಟಾದರು. ಬಳಿಕ ಕೆ.ಗೌತಮ್‌ ಕೇವಲ 32 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸಿದರು. ಯುವರಾಜ್‌ ಸಿಂಗ್‌ 93 ರನ್‌ಗೆ 5 ವಿಕೆಟ್‌ ಕಿತ್ತರು.

ಸ್ಕೋರ್‌:
ಕರ್ನಾಟಕ 481/10(ಸಿದ್ದಾರ್ಥ್‌ 146, ಗೌತಮ್‌ 52, ಯುವರಾಜ್‌ 5-93) 
ರೈಲ್ವೇಸ್‌ 213/3(2ನೇ ದಿನದಂತ್ಯಕ್ಕೆ) ಘೋಷ್‌ 78*, ಗೌತಮ್‌ 3-71)

ಟಿ20: ಲಂಕಾ ವಿರುದ್ಧ ಆಸೀಸ್‌ಗೆ ಭರ್ಜರಿ ಜಯ

ಮೆಲ್ಬರ್ನ್‌: ಶ್ರೀಲಂಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿದ ಆಸ್ಪ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಲಂಕಾ, 8 ವಿಕೆಟ್‌ಗೆ 139 ರನ್‌ ಗಳಿಸಿತು. ಪಥುಮ್‌ ನಿಸ್ಸಾಂಕ 46 ರನ್‌ ಗಳಿಸಿದರೆ, ಜಾಯ್‌ ರಿಚರ್ಡ್‌ಸನ್‌ ಹಾಗೂ ಕೇನ್‌ ರಿಚರ್ಡ್‌ಸನ್‌ ತಲಾ 2 ವಿಕೆಟ್‌ ಕಿತ್ತರು. ಆಸೀಸ್‌ 18.1 ಓವರಲ್ಲಿ 4 ವಿಕೆಟ್‌ಗೆ 143 ಗಳಿಸಿತು. ಮ್ಯಾಕ್ಸ್‌ವೆಲ್‌ ಔಟಾಗದೆ 48, ಜೋಶ್‌ ಇಂಗ್ಲಿಸ್‌ 40 ರನ್‌ ಗಳಿಸಿದರು.

ಕಿವೀಸ್‌ ವಿರುದ್ಧ ದ.ಆಫ್ರಿಕಾಕ್ಕೆ ಇನ್ನಿಂಗ್ಸ್‌ ಸೋಲಿನ ಭೀತಿ

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿದೆ. 2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 34 ರನ್‌ ಗಳಿಸಿದ್ದು, ಇನ್ನೂ 387 ರನ್‌ ಹಿನ್ನಡೆಯಲ್ಲಿದೆ. ಹೆನ್ರಿ ನಿಕೋಲ್ಸ್‌(105)ರ ಶತಕ, ಟಾಮ್‌ ಬಂಡ್ಲೆಲ್‌ರ ಆಕರ್ಷಕ 96 ರನ್‌ಗಳ ಆಟದ ನೆರವಿನಿಂದ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 482 ರನ್‌ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ದ.ಆಫ್ರಿಕಾ 95 ರನ್‌ಗೆ ಆಲೌಟ್‌ ಆಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?