ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬರದ ಕಾರಣ ಇದೀಗ ಟಿ20 ವಿಶ್ವಕಪ್ ಆಯೋಜನೆ ಕ್ರಿಕೆಟ್ ಆಸ್ಟ್ಕೇಲಿಯಾಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೂರ್ನಿ ಮುಂದೂಡಲು ಐಸಿಸಿಗೆ ಆಸೀಸ್ ಮನವಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೊರೋನಾ ವೈರಸ್‌ನಿಂದ ಮುಕ್ತವಾಗಿರುವ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲು ಮುಂದೆ ಬಂದಿದೆ.
ನ್ಯೂಜಿಲೆಂಡ್(ಜೂ.16): ಟಿ20 ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲಾ ತಯಾರಿ ಪೂರ್ಣಗೊಳಿಸಿತ್ತು. ಆದರೆ ಕೊರೋನಾ ವೈರಸ್ ವಕ್ಕರಿಸಿ ಇದೀಗ ಟೂರ್ನಿ ಆಯೋಜನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಹರಸಾಹಸ ಪಡುತ್ತಿದೆ. ಐಸಿಸಿ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೆ ಟೂರ್ನಿ ಆಯೋಜಿಸಲಾಗಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಇದೀಗ ಎಲ್ಲರ ಚಿತ್ತ ಕೊರೋನಾ ಮುಕ್ತ ನ್ಯೂಜಿಲೆಂಡ್ ದೇಶದತ್ತ ನೆಟ್ಟಿದೆ.
ಯುಎಇನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್..
ಕುರಿತು ನ್ಯೂಜಿಲೆಂಡ್ ಕ್ರೀಡಾ ಸಚಿವ ರಾಬರ್ಟ್ಸನ್ ಟಿ20 ವಿಶ್ವಕಪ್ ಆಯೋಜನೆ ಕುರಿತು ಮಾತನಾಡಿದ್ದಾರೆ. ನ್ಯೂಜಿಲೆಂಡ್ 2021ರ ಮಹಿಳಾ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಇದೀಗ ಹಲವು ಕ್ರಿಕೆಟಿಗರು ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಹೇಳಿದ್ದಾರೆ. ಈ ಕುರಿತು ಐಸಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಐಸಿಸಿ ಟೂರ್ನಿಯನ್ನು ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್‌ಗೆ ಸ್ಥಳಾಂತರಸಿದರೆ ಎಲ್ಲಾ ನೆರವು ನೀಡಲಿದ್ದೇವೆ ಎಂದಿದ್ದಾರೆ.
ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!..
ನ್ಯೂಜಿಲೆಂಡ್ ಕೊರೋನಾ ವೈರಸ್‌ನಿಂದ ಮುಕ್ತವಾಗಿದೆ. ಇನ್ನು ದೇಶದ ಗಡಿ ಭಾಗಗಳನ್ನು ಮುಚ್ಚಲಾಗಿದೆ. ಸದ್ಯ ನ್ಯೂಜಿಲೆಂಡ್‌ನಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆಯುತ್ತಿಲ್ಲ. ಅಕ್ಟೋಬರ್, ನವೆಂಬರ್ ವೇಳೆಗೆ ಕ್ರಿಕೆಟ್ ಪುನರ್ ಆರಂಭಗೊಳ್ಳಲಿದೆ ಎಂದು ರಾಬರ್ಟ್ಸನ್ ಹೇಳಿದ್ದಾರೆ.
ಆಟಗಾರರು, ಪ್ರೇಕ್ಷಕರ ಆರೋಗ್ಯ ಸುರಕ್ಷತೆ ಮುಖ್ಯ. ಹೀಗಾಗಿ ಯಾವುದೇ ದುಡುಕಿನ ನಿರ್ಧಾರ ನ್ಯೂಜಿಲೆಂಡ್ ಕೈಗೊಳ್ಳುವುದಿಲ್ಲ. ಕೊರೋನಾ ವೈರಸ್ ನಿರ್ನಾಮ ಮಾಡುವುದೇ ಮೊದಲ ಗುರಿಯಾಗಬೇಕಿದೆ ಎಂದುು ರಾಬರ್ಟ್ಸನ್ ಹೇಳಿದ್ದಾರೆ.