ಕ್ರಿಕೆಟ್‌ನಲ್ಲೂ ಗ್ಯಾರೆಂಟಿ ಸದ್ದು, ವಿಶ್ವಕಪ್ ಪಾಲ್ಗೊಳ್ಳುವಿಕೆ ಖಚಿತಪಡಿಸಲು ಪಾಕಿಸ್ತಾನಕ್ಕೆ ಐಸಿಸಿ ಸೂಚನೆ!

By Suvarna NewsFirst Published Jun 2, 2023, 7:42 PM IST
Highlights

ಕರ್ನಾಟಕದ ಐದು ಉಚಿತ ಗ್ಯಾರೆಂಟಿ ಭಾರತದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಈ ಗ್ಯಾರೆಂಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದೆ. ಪಾಕಿಸ್ತಾನ ತಂಡದ ಬಳಿ ಐಸಿಸಿ ಗ್ಯಾರೆಂಟಿ ಕೇಳಿದೆ. 

ದುಬೈ(ಜೂ.02): ಕರ್ನಾಟಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿ ಯೋಜನೆ ಜಾರಿ ಮಾಡಿದೆ. ಭಾರಿ ತಲೆನೋವಾಗಿದ್ದ ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಇದೀಗ ಗ್ಯಾರೆಂಟಿ ಟ್ರೆಂಡ್ ಆಗುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಗ್ಯಾರೆಂಟಿ ಸದ್ದು ಮಾಡಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಐಸಿಸಿ ಪಾಕಿಸ್ತಾನ ತಂಡದ ಬಳಿಕ ಗ್ಯಾರೆಂಟಿ ಕೇಳಿದೆ. ಭಾರತ ಆತಿಥ್ಯವಹಿಸಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಈಗಲೇ ಖಚಿತತೆ ನೀಡಲು ಐಸಿಸಿ ಸೂಚಿಸಿದೆ.

ಐಸಿಸಿ ಕೂಡ ಗ್ಯಾರೆಂಟಿ ಕೇಳಲು ಒಂದು ಕಾರಣವಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನದ ಆತಿಥ್ಯ. ಆದರೆ ಭದ್ರತಾ ಕಾರಣದಿಂದ ಟೀಂ ಇಂಡಿಯಾ ಆಟಾಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದರ ನಡುವೆ ತಟಸ್ಥ ಸ್ಥಳದಲ್ಲೆ ಪಂದ್ಯ ಆಯೋಜನೆ, ಭಾರತದ ಪಂದ್ಯಗಳನ್ನು ದುಬೈನಲ್ಲಿ ಆಯೋಜನೆ ಸೇರಿದಂತೆ ಹಲವು ಇತರ ಮಾರ್ಗಗಳ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಏಷ್ಯಾಕಪ್ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಿದಿದ್ದರೆ, ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತ ಪ್ರವಾಸ ಮಾಡುವುದಿಲ್ಲ ಎಂದಿತ್ತು. ಈ ಗೊಂದಲದಿಂದ ಇದೀಗ ಐಸಿಸಿ ನೇರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ವಿಶ್ವಕಪ್ ಪಾಲ್ಗೊಳ್ಳುವಿಕೆ ಕುರಿತು ಗ್ಯಾರೆಂಟಿ ಕೇಳಿದೆ ಎಂದು ಮೂಲಗಳು ಹೇಳಿವೆ.

ಶೀಘ್ರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ..!

ಹೈಬ್ರಿಡ್ ಮಾಡೆಲ್ ಮೂಲಕ ಏಷ್ಯಾಕಪ್ ಟೂರ್ನಿ ಆಯೋಜಿಸಲು ಪ್ಲಾನ್ ರೆಡಿ ಮಾಡಿದೆ. ಭಾರತದ ಪಂದ್ಯಗಳನ್ನು ದುಬೈನಲ್ಲಿ ಹಾಗೂ ಇತರ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಮಾಡೆಲ್ ರೆಡಿ ಮಾಡಿದೆ. ಈ ಪ್ಲಾನ್ ಬಿಸಿಸಿಐ ಒಪ್ಪಿಕೊಂಡರೆ, ಐಸಿಸಿಗೆ ಸಂಕಷ್ಟ ಎದುರಾಗಲಿದೆ. ಕಾರಣ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಇದೇ ಹೈಬ್ರಿಡ್ ಮಾಡೆಲ್ ಅನುಸರಿಸಲು ಪಾಕಿಸ್ತಾನ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಐಸಿಸಿ ಅಧಿಕಾರಿಗಳ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ. ಪಾಕ್ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಐಸಿಸಿ ಮುಂದಾಗಿದೆ. ಇದೇ ವೇಳೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ ಕುರಿತು ಖಚಿತತೆ ಪಡೆಯಲು ಮುಂದಾಗಿದೆ.

ಈ ತಂಡ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಲಿದೆ: ಭವಿಷ್ಯ ನುಡಿದ ಮಿಕಿ ಆರ್ಥರ್

ಅಕ್ಟೋ​ಬ​ರ್‌-ನವೆಂಬ​ರ್‌​ನಲ್ಲಿ ಭಾರ​ತ​ದಲ್ಲಿ ನಡೆ​ಯ​ಲಿ​ರುವ ಏಕ​ದಿನ ವಿಶ್ವ​ಕಪ್‌ನಲ್ಲಿ ಪಾಲ್ಗೊ​ಳ್ಳುವ ಬಗ್ಗೆ ಹಾಗೂ ತನ್ನ ಪಂದ್ಯ​ಗ​ಳಿಗೆ ಹೈಬ್ರೀಡ್‌ ಮಾದ​ರಿಗೆ ಒತ್ತಾ​ಯಿ​ಸು​ವು​ದಿಲ್ಲ ಎಂಬು​ದರ ಖಾತರಿ ಪಡೆ​ದು​ಕೊ​ಳ್ಳಲು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಕೌನ್ಸಿ​ಲ್‌​(ಐಸಿಸಿ​) ಅಧಿ​ಕಾ​ರಿ​ಗ​ಳು ಪಾಕಿ​ಸ್ತಾ​ನಕ್ಕೆ ತೆರ​ಳಿ​ದ್ದಾರೆ. ವರ​ದಿ​ಗಳ ಪ್ರಕಾ​ರ ಐಸಿಸಿ ಮುಖ್ಯಸ್ಥ ಗ್ರೆಗ್‌ ಬಾಕ್ಲೇರ್‍ ಹಾಗೂ ಸಿಇಒ ಜೆಫ್‌ ಆ್ಯಲರ್ರ್ಡೆಸ್‌ ಲಾಹೋ​ರ್‌ಗೆ ತೆರಳಿ ಪಾಕ್‌ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಅಧಿ​ಕಾ​ರಿ​ಗಳ ಜೊತೆ ಚರ್ಚಿಸಿ, ವಿಶ್ವ​ಕ​ಪ್‌​ನಲ್ಲಿ ಆಡುವ ಬಗ್ಗೆ ಭರ​ವಸೆ ಪಡೆ​ದು​ಕೊಂಡಿ​ದ್ದಾರೆ ಎನ್ನ​ಲಾ​ಗಿದೆ. ಏಷ್ಯಾ​ಕಪ್‌ ಆಡಲು ಭಾರತ ತಂಡ ಪಾಕಿ​ಸ್ತಾ​ನಕ್ಕೆ ಬರ​ದಿ​ದ್ದರೆ, ನಾವು ಕೂಡಾ ಭಾರ​ತ​ದಲ್ಲಿ ವಿಶ್ವ​ಕಪ್‌ ಆಡು​ವು​ದಿಲ್ಲ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಇತ್ತೀ​ಚೆಗೆ ಎಚ್ಚ​ರಿ​ಸಿ​ದ್ದ​ರು. ಅಲ್ಲದೇ, ಏಕ​ದಿನ ವಿಶ್ವ​ಕ​ಪ್‌ನ ತನ್ನ ಪಂದ್ಯ​ಗ​ಳನ್ನು ಭಾರ​ತದ ಹೊರ​ಗಡೆ ನಡೆಸಲು ಒತ್ತಾ​ಯಿ​ಸಿ​ದ್ದಾಗಿ ವರ​ದಿ​ಯಾ​ಗಿತ್ತು.
 

click me!