ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದುಬೈ: ಭಾರತದ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 99 ರನ್ ಸಿಡಿಸಿದ್ದ ರಿಷಭ್, ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಪ್ರಗತಿ ಸಾಧಿಸಿದರು. ಕೊಹ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭಾರತೀಯ ಬ್ಯಾಟರ್‌ಗಳ ಪೈಕಿ ಶ್ರೇಷ್ಠ ರ್‍ಯಾಂಕಿಂಗ್ ಹೊಂದಿದ್ದು, 4ನೇ ಸ್ಥಾನದಲ್ಲಿದ್ದಾರೆ. ರೋಹಿತ್ 2 ಸ್ಥಾನ ಕುಸಿದು ಜಂಟಿ 15ನೇ ಸ್ಥಾನ ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲೇ ಮುಂದುವರಿದಿದ್ದು, ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ಜಡೇಜಾ(7ನೇ ಸ್ಥಾನ) ಅಗ್ರ ಹತ್ತರಲ್ಲಿರುವ ಮತ್ತೋರ್ವ ಭಾರತೀಯ ಬೌಲರ್.
undefined
ಜಿಂಬಾಬ್ವೆ 344: ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದಾಖಲೆ!
ಕನ್ನಡಿಗ ವಿಜಯ್ ಭಾರಧ್ವಾಜ್ ಡೆಲ್ಲಿ ತಂಡ ಸೇರ್ಪಡೆ
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ವಿಜಯ್ ಭಾರಧ್ವಾಜ್ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರ್ಪಡೆಗೊಂಡಿದ್ದಾರೆ. ಅವರು ಟ್ಯಾಲೆಂಟ್ ಸ್ಕೌಟ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಂಡ ವಿವಿಧ ನಗರಗಳಲ್ಲಿ ನಡೆಸುವ ಶಿಬಿರಗಳ ಮೂಲಕ ಪ್ರತಿಭಾವಂತ ಆಟಗಾರರನ್ನು ಗುರುತಿಸುವ ಕೆಲಸ ಸದ್ಯ ವಿಜಯ್ ಅವರ ಹೆಗಲ ಮೇಲಿದೆ.
49 ವರ್ಷದ ವಿಜಯ್ ಈ ಮೊದಲು ಐಪಿಎಲ್ ಆರಂಭಿಕ 3 ಆವೃತ್ತಿಗಳಲ್ಲಿ ಆರ್‌ಸಿಬಿ ತಂಡ ಸಹಾಯಕ ಕೋಚ್ ಆಗಿದ್ದರು. ಬಳಿಕ ವೀಕ್ಷಣೆ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದಾರೆ.
ಪುಣೆ ಟೆಸ್ಟ್‌ಗೆ ಸ್ಪಿನ್ ಸ್ನೇಹಿ ಪಿಚ್: ಮತ್ತೆ 3 ಸ್ಪಿನ್ನರ್ ಜೊತೆ ಕಣಕ್ಕಿಳಿಯುತ್ತಾ ಭಾರತ?
ಎಮರ್ಜಿಂಗ್ ಏಷ್ಯಾಕಪ್ ಟಿ20: ಭಾರತಕ್ಕೆ ಹ್ಯಾಟ್ರಿಕ್ ಗೆಲುವು
ಮಸ್ಕತ್ (ಒಮಾನ್): ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ 'ಎ' ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 'ಬಿ' ಗುಂಪಿನ ಕೊನೆ ಪಂದ್ಯದಲ್ಲಿ ಬುಧವಾರ ಭಾರತಕ್ಕೆ ಒಮಾನ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದೆ. ಗುಂಪು ಹಂತದಲ್ಲಿ ಅಜೇಯ ವಾಗಿರುವ ಭಾರತ, ಶುಕ್ರವಾರ ಸೆಮಿಫೈನಲ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ.
ಮೊದಲು ಬ್ಯಾಟ್ ಮಾಡಿದ ಒಮಾನ್ 5 ವಿಕೆಟ್‌ಗೆ 140 ರನ್ ಕಲೆಹಾಕಿತು.ಮೊಹಮದ್ ನದೀಂ 41, ಹಮ್ಮಾದ್ ಮಿರ್ಜಾ 28, ವಾಸಿಂ
ಅಲಿ 24 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿಯನ್ನು ಭಾರತ 15.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಆಯುಶ್ ಬದೋನಿ 27 ಎಸೆತಗಳಲ್ಲಿ 51 ರನ್ ಸಿಡಿಸಿದರು. ನಾಯಕ ತಿಲಕ್ ವರ್ಮಾ ಔಟಾಗದೆ 36, ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 34 ರನ್ ಗಳಿಸಿದರು.
ಸ್ಕೋರ್:
ಒಮಾನ್ 20 ಓವರಲ್ಲಿ 140/5 (ನದೀಂ 41, ಹಮ್ಮಾದ್ 28, ರಮನ್‌ದೀಪ್ 1-2)
ಭಾರತ 15.2 ಓವರಲ್ಲಿ 146/4 (ಆಯುಶ್ 51, ತಿಲಕ್ 36,ಕಲೀಂ1-13)