17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲೇ ಮುಗ್ಗರಿಸುವ ಮೂಲಕ ಮತ್ತೊಮ್ಮೆ ಬರಿಗೈನಲ್ಲೇ ವಾಪಾಸ್ಸಾಯಿತು.
ಮುಂಬೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಜೂನ್ 01ರಿಂದ ಆರಂಭವಾಗಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೇಲೆ ನೆಟ್ಟಿದೆ. ಈಗಾಗಲೇ ಭಾರತದ ತಂಡದ ಮುಕ್ಕಾಲು ಭಾಗದಷ್ಟು ಆಟಗಾರರು ಅಮೆರಿಕಗೆ ತೆರಳಿದ್ದು, ಇದೀಗ ವಿರಾಟ್ ಕೊಹ್ಲಿ ಕೂಡಾ ಗುರುವಾರ ಸಂಜೆ, ಮುಂಬೈ ಏರ್‌ಪೋರ್ಟ್ ಮೂಲಕ ನ್ಯೂಯಾರ್ಕ್‌ನತ್ತ ಪ್ರಯಾಣ ಬೆಳೆಸಿದರು. ಟೀಂ ಇಂಡಿಯಾ ಮಾಜಿ ನಾಯಕ ನ್ಯೂಯಾರ್ಕ್‌ಗೆ ಹಾರುವ ಮುನ್ನ ಕೂಡಾ ಮಡದಿ ಅನುಷ್ಕಾ ಶರ್ಮಾ ಅವರನ್ನು ನೆನಪಿಸಿಕೊಂಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲೇ ಮುಗ್ಗರಿಸುವ ಮೂಲಕ ಮತ್ತೊಮ್ಮೆ ಬರಿಗೈನಲ್ಲೇ ವಾಪಾಸ್ಸಾಯಿತು. ಇನ್ನು ಗಂಡು ಮಗುವಿನ ತಂದೆಯಾದ ಬೆನ್ನಲ್ಲೇ ಪಾಪರಾಜಿಗಳಿಗೆ ವಿಶೇಷ ಮನವಿಯೊಂದಿಗೆ ಗಿಫ್ಟ್ ಕಳಿಸಿಕೊಟ್ಟಿದ್ದಕ್ಕೆ ಪಾಪರಾಜಿಯೊಬ್ಬ ಧನ್ಯವಾದ ಅರ್ಪಿಸಿದಾಗ, ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಇಂಡೋ-ಪಾಕ್ ಪಂದ್ಯದ ಮೇಲೆ 'ಒಂಟಿ ತೋಳ' ಉಗ್ರ ಭೀತಿ..! ಏನಿದು ಲೋನ್ ವೂಲ್ಫ್ ಅಟ್ಯಾಕ್?
ಈ ತಿಂಗಳ ಮಧ್ಯಭಾಗದಲ್ಲಿ ಅಂದರೆ ಮೇ 14ರಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಪಾಪರಾಜಿಗಳಿಗೆ, ತಮ್ಮ ಮಗುವಿನ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದರು. ವಿರುಷ್ಕಾ ದಂಪತಿ ಫೆಬ್ರವರಿ 15ರಂದು ಲಂಡನ್‌ನಲ್ಲಿ ಅಕಾಯ್ ಎನ್ನುವ ಗಂಡು ಮಗುವನ್ನು ಸ್ವಾಗತಿಸಿದ್ದರು. ಈ ಕಾರಣಕ್ಕಾಗಿಯೇ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಭಾರತಕ್ಕೆ ವಾಪಾಸ್ಸಾಗಿದ್ದರು. ಭಾರತಕ್ಕೆ ಬಂದ ಬಳಿಕ ತಮ್ಮ ಮಗಳು ವಮಿಕಾಳಂತೆ ತಮ್ಮ ಗಂಡು ಮಗು ಅಕಾಯ್ ಅವರ ಫೋಟೋವನ್ನು ಯಾರೂ ತೆಗೆಯಬೇಡಿ ಎಂದು ವಿರುಷ್ಕಾ ದಂಪತಿ ಸೋಷಿಯಲ್ ಮೀಡಿಯಾ ಮೂಲಕವೇ ಮನವಿ ಮಾಡಿಕೊಂಡಿದ್ದರು. ಇದರ ಜತೆಗೆ ಪಾಪಾರಾಜಿಗಳಿಗೆ ಒಂದು ಗಿಫ್ಟ್ ಕೂಡಾ ಕಳಿಸಿಕೊಟ್ಟಿದ್ದರು.
Kohli ~ "Mam ne diya" 😂 refering Anushka . off to US for WC pic.twitter.com/0XcPoaNBqG
— `` (@KohlifiedGal)ಇದೀಗ ಓರ್ವ ಪಾಪರಾಜಿ, ತಮಗೆ ವಿರುಷ್ಕಾ ದಂಪತಿ ಗಿಫ್ಟ್ ಕಳಿಸಿಕೊಟ್ಟಿದ್ದಕ್ಕೆ ಮುಂಬೈ ಏರ್‌ಪೋರ್ಟ್‌ನಲ್ಲಿ ವಿರಾಟ್ ಕೊಹ್ಲಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, "ಆ ಗಿಫ್ಟ್ ಅನ್ನು ಅನುಷ್ಕಾ ಶರ್ಮಾ ಕೊಟ್ಟಿದ್ದು, ನಾನಲ್ಲ" ಎಂದು ಹೇಳಿದ್ದಾರೆ.
'ಪಾಕ್ ಎದುರು ಆಡುವುದಕ್ಕಿಂತ ಐಪಿಎಲ್ ಆಡೋದು ಬೆಸ್ಟ್ ಇತ್ತು': ಮೈಕಲ್ ವಾನ್ ಸಮರ್ಥಿಸಿಕೊಂಡ ಪಾಕ್ ಮಾಜಿ ಕ್ರಿಕೆಟಿಗ..!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದ ಅಮೆರಿಕದಲ್ಲಿ ಆರಂಭವಾಗಲಿದೆ. ಈ ಚುಟುಕು ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಮರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಿವೆ. ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳುತ್ತಿದ್ದು, ಟೀಂ ಇಂಡಿಯಾ ಜೂನ್ 05ರಂದು ಐರ್ಲೆಂಡ್ ಎದುರು ಮೊದಲ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.