T20 World Cup: ನಿಸ್ಸಾಂಕ ಏಕಾಂಗಿ ಹೋರಾಟ, ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ

By Suvarna News  |  First Published Oct 30, 2021, 5:23 PM IST

* ಶಾರ್ಜಾದಲ್ಲಿ ದಕ್ಷಿಣ ಆಫ್ರಿಕಾಗೆ 143 ರನ್‌ಗಳ ಗುರಿ ನೀಡಿದ ಶ್ರೀಲಂಕಾ

* ಹರಿಣಗಳೆದುರು ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಂಕಾ ಮಧ್ಯಮ ಕ್ರಮಾಂಕ

* ಆಕರ್ಷಕ ಅರ್ಧಶತಕ ಬಾರಿಸಿದ ಪತುಮ್‌ ನಿಸ್ಸಾಂಕ 


ಶಾರ್ಜಾ(ಅ.30): ತಬ್ರೀಜ್ ಸಂಶಿ (Tabraiz Shamsi), ಡ್ವೇನ್ ಪ್ರಿಟೋರಿಯಸ್‌ ಮಾರಕ ದಾಳಿಯ ಹೊರತಾಗಿಯೂ, ಆರಂಭಿಕ ಬ್ಯಾಟ್ಸ್‌ಮನ್ ಪತುಮ್‌ ನಿಸ್ಸಾಂಕ (72) ಏಕಾಂಗಿ ಹೋರಾಟದ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket Team) ವು 142 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ (South Africa Cricket Team) ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಕುಸಾಲ್ ಪರೆರಾ (Kusal Perera) ಕೇವಲ 7 ರನ್ ಬಾರಿಸಿ ಏನ್ರಿಚ್ ನೊಕಿಯೆ (Anrich Nortje) ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿಸ್ಸಾಂಕ ಹಾಗೂ ಚರಿತ್ ಅಸಲಂಕಾ ಜೋಡಿ ಎರಡನೇ ವಿಕೆಟ್‌ಗೆ 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಅಸಲಂಕಾ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 21 ರನ್ ಸಿಡಿಸಿದ್ದರು. ಆದರೆ ಇಲ್ಲದ ರನ್‌ ಕದಿಯಲು ಹೋಗಿ ರನೌಟ್ ಆದರು. ಇದಾದ ಬಳಿಕ ಲಂಕಾ ಪತನದ ಹಾದಿ ಆರಂಭವಾಯಿತು. 

Sri Lanka end up with a total of 142.

Will South Africa chase this down? | | https://t.co/bJIWWFNtds pic.twitter.com/ycqRNiA18J

— T20 World Cup (@T20WorldCup)

Tap to resize

Latest Videos

undefined

ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಲಂಕಾದ ಏಳು ಬ್ಯಾಟರ್‌ಗಳು: ಮತ್ತೊಮ್ಮೆ ಶ್ರೀಲಂಕಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಅನಾವರಣವಾಯಿತು. ಲಂಕಾದ ಒಟ್ಟು 7 ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಭಾನುಕ ರಾಜಪಕ್ಸಾ ಶೂನ್ಯ ಸುತ್ತಿದರೆ, ಆವಿಷ್ಕಾ ಫರ್ನಾಂಡೋ ಆಟ ಕೇವಲ 3 ರನ್‌ಗಳಿಗೆ ಸೀಮಿತವಾಯಿತು. ಇನ್ನು ವನಿಂದು ಹಸರಂಗ (Wanindu Hasaranga) 4 ರನ್‌ ಬಾರಿಸಿ ಸಂಶಿಗೆ ಎರಡನೇ ಬಲಿಯಾದರು. ನಾಯಕ ದಶುನ್ ಶನಕ (Dasun Shanaka) 11 ರನ್‌ ಬಾರಿಸಿದ್ದು ಬಿಟ್ಟರೆ, ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟರ್‌ ಸಹ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

T20 World Cup: ಲಂಕಾ ಎದುರು ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್‌ ಆಯ್ಕೆ

ನಿಸ್ಸಾಂಕ ಏಕಾಂಗಿ ಹೋರಾಟ: ಒಂದು ಕಡೆ ನಿರಂತರವಾಗಿ ವಿಕೆಟ್ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಆರಂಭಿಕ ಬ್ಯಾಟ್ಸ್‌ಮನ್ ನಿಸ್ಸಾಂಕ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ನಿಸ್ಸಾಂಕ ಒಟ್ಟು 58 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 72 ರನ್‌ ಬಾರಿಸಿ ಎಂಟನೆಯವರಾಗಿ ವಿಕೆಟ್ ಒಪ್ಪಿಸಿದರು. ಒಂದು ವೇಳೆ ನಿಸ್ಸಾಂಕ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಕ್ಕಿದ್ದರೆ ಶ್ರೀಲಂಕಾ ಕ್ರಿಕೆಟ್ ತಂಡವು ಅನಾಯಾಸವಾಗಿ 160ರ ಗಡಿ ದಾಟಬಹುದಿತ್ತು. 

ICC T20 World Cup: ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

ಮಿಂಚಿದ ಸಂಶಿ-ಪ್ರಿಟೋರಿಸ್‌: ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ತಬ್ರೀಜ್ ಸಂಶಿ ಹಾಗೂ ಡ್ವೇನ್ ಪ್ರಿಟೋರಿಯಸ್‌ ತಲಾ 17 ರನ್‌ ನೀಡಿ 3 ವಿಕೆಟ್‌ ಕಬಳಿಸುವ ಮೂಲಕ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಇನ್ನು ವೇಗಿ ಏನ್ರಿಚ್ ನೊಕಿಯೆ 27 ರನ್‌ ನೀಡಿ 2 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 142/10
ಪತುಮ್ ನಿಸ್ಸಾಂಕ: 72
ತಬ್ರೀಜ್ ಸಂಶಿ: 17/3

(* ಶ್ರೀಲಂಕಾ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)

click me!