T20 World Cup: ಐರ್ಲೆಂಡ್ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್‌ ಬ್ಯಾಟಿಂಗ್ ಆಯ್ಕೆ

By Suvarna News  |  First Published Oct 18, 2021, 3:34 PM IST

* ಅರ್ಹತಾ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್‌ಲೆಂಡ್ಸ್‌ ಬ್ಯಾಟಿಂಗ್ ಆಯ್ಕೆ

* ಅಬುಧಾಬಿಯಲ್ಲಿ ನಡೆಯುತ್ತಿದೆ ಐರ್ಲೆಂಡ್-ನೆದರ್‌ಲೆಂಡ್ಸ್‌ ತಂಡಗಳ ಕಾದಾಟ

* ಸೂಪರ್ 12 ಹಂತದ ಮೇಲೆ ಕಣ್ಣಿಟ್ಟಿವೆ ಉಭಯ ತಂಡಗಳು


ಅಬುಧಾಬಿ‌(ಅ.18): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಸೂಪರ್‌ 12 ಹಂತಕ್ಕೆ ಲಗ್ಗೆಯಿಡುವ ನೆಚ್ಚಿನ ತಂಡಗಳೆನಿಸಿರುವ ಐರ್ಲೆಂಡ್ ಕ್ರಿಕೆಟ್ ತಂಡ (Ireland Cricket Team) ಹಾಗೂ ನೆದರ್‌ಲೆಂಡ್ಸ್‌ ಕ್ರಿಕೆಟ್ ತಂಡ (Netherlands Cricket Team) ಗಳ ನಡುವಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್‌ಲೆಂಡ್ಸ್‌ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಉಭಯ ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿವೆ. ಅಬುಧಾಬಿ (Abu Dhabi) ಯ ಶೇಕ್‌ ಜಾಯೆದ್ ಮೈದಾನ (Sheikh Zayed Stadium) ಈ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಗ್ರೂಪ್‌ 'ಎ'ನ ಮೊದಲ ಪಂದ್ಯ ಇದಾಗಿದ್ದು, ಸೂಪರ್‌ 12 ಹಂತಕ್ಕೇರುವ ದೃಷ್ಠಿಯಿಂದ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದೆ. ಟಾಸ್ ಗೆದ್ದ ನೆದರ್‌ಲೆಂಡ್ಸ್‌ ತಂಡದ ನಾಯಕ ಪೀಟರ್ ಸೀಲರ್‌ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. 

Toss news from Abu Dhabi 📰

Netherlands have won the toss and elected to bat first. | | https://t.co/TRm5wxuxrO pic.twitter.com/VETstj7cYZ

— T20 World Cup (@T20WorldCup)

Latest Videos

T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್‌ಗೆ ಶರಣಾದ ಬಾಂಗ್ಲಾದೇಶ

Netherlands will have a bat first after winning the toss in Abu Dhabi 🏏

How many runs will they put on the board? | | https://t.co/WnmnWpc2mN pic.twitter.com/rY9jpLaC8I

— ICC (@ICC)

ನೋಡಲು ವಿಕೆಟ್‌ ಬ್ಯಾಟಿಂಗ್ ಮಾಡಲು ಉತ್ತಮವಾಗಿದ್ದಂತೆ ಕಾಣುತ್ತಿದೆ. ಹೀಗಾಗಿ ಬ್ಯಾಟ್ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇನೆ. ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ಕಲೆಹಾಕುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಹಾಯಕವಾಗಲಿದೆ ಎಂದು ನೆದರ್‌ಲೆಂಡ್ಸ್‌ ತಂಡದ ನಾಯಕ ಪೀಟರ್ ಸೀಲರ್‌ (Pieter Seelaar) ಹೇಳಿದ್ದಾರೆ.

ಇನ್ನು ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬೈರ್ನ್‌ (Andrew Balbirnie), ಟಾಸ್ ಸೋತಿದ್ದು ಅಂತಹ ನಿರಾಸೆಯನ್ನೇನುಂಟು ಮಾಡಿಲ್ಲ. ಪೀಟರ್ ಹೇಳಿದಂತೆ ವಿಕೆಟ್ ಚೆನ್ನಾಗಿದೆ. ಒಟ್ಟು 40 ಓವರ್‌ ಬ್ಯಾಟಿಂಗ್ ಮಾಡಲು ಚೆನ್ನಾಗಿರಲಿದೆ ಎಂದು ಕೊಂಡಿದ್ದೇನೆ. ನಮ್ಮ ಮಧ್ಯಮ ಕ್ರಮಾಂಕ ಕೊಂಚ ಅನನುಭವಿ ಆಟಗಾರರಿಂದ ಕೂಡಿದೆ ನಿಜ, ಆದರೆ ನಮ್ಮ ಹುಡುಗರು ಸವಾಲನ್ನು ಇಷ್ಟಪಡುತ್ತಾರೆ ಎಂದಿದ್ದಾರೆ.

ತಂಡಗಳು ಹೀಗಿವೆ:

ಐರ್ಲೆಂಡ್: ಪೌಲ್ ಸ್ಟೈರ್ಲಿಂಗ್, ಕೆವಿನ್ ಒ ಬ್ರಿಯಾನ್, ಆಂಡ್ರ್ಯೂ ಬಲ್ಬೈರ್ನ್‌, ಗೆರಾತ್ ಡೆಲ್ನೆ, ಹ್ಯಾರಿ ಟೆಕ್ಟರ್, ಕರ್ಟಿಸ್‌ ಚಾಂಪರ್, ನೀಲ್‌ ರಾಕ್‌, ಸಿಮಿ ಸಿಂಗ್, ಮಾರ್ಕ್ ಅಡೈರ್, ಬೆಂಜಮಿನ್ ವೈಟ್‌, ಜೋಸುವ ಲಿಟ್ಲ್‌.

ನೆದರ್‌ಲೆಂಡ್ಸ್‌ :
ಮ್ಯಾಕ್ಸ್ ಓವಡ್‌, ಬೆನ್ ಕೂಪರ್, ಬಾಸ್ ಡೆ ಲೀಡೆ, ಕಾಲಿನ್‌ ಅಕೆಮನ್‌, ರೆಯಾನ್ ಡೆಸ್ಕೆಟೆ, ಸ್ಕಾಟ್ ಎಡ್ವರ್ಡ್‌, ರೋಲೆಫ್‌ ವ್ಯಾನ್ ಡರ್‌ ಮೆರ್ವೆ, ಪೀಟರ್ ಸೀಲರ್, ಲೊಗಾನ್ ವ್ಯಾನ್‌ ಬೀಕ್, ಫ್ರೆಡ್‌ ಕ್ಲಾಸೆನ್‌, ಬ್ರೆಂಡನ್‌ ಗ್ಲೋವರ್
 

click me!