T20 World Cup ಬಾಬರ್ ಅಜಂ ನೇತೃತ್ವದ ಪಾಕಿಸ್ತಾನಕ್ಕಿಂದು Do or Die ಪಂದ್ಯ..!

By Naveen Kodase  |  First Published Oct 30, 2022, 9:54 AM IST

ಪಾಕಿಸ್ತಾನ ತಂಡಕ್ಕಿಂದು ಪರ್ತ್‌ನಲ್ಲಿ ನೆದರ್‌ಲೆಂಡ್ಸ್ ಸವಾಲು
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಬಾಬರ್ ಅಜಂ ಪಡೆ
ಗೆಲುವಿನ ಖಾತೆ ತೆರೆಯಲು ಹಾತೊರೆಯುತ್ತಿದೆ ಪಾಕಿಸ್ತಾನ


ಪರ್ತ್(ಅ.30): ಭಾರತ, ಜಿಂಬಾಬ್ವೆ ವಿರುದ್ಧ ಕೊನೆ ಎಸೆತದಲ್ಲಿ ಸೋಲುಂಡು ಆಘಾತಕ್ಕೊಳಗಾಗಿರುವ ಪಾಕಿಸ್ತಾನ, ಟಿ20 ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಭಾನುವಾರ ನೆದರ್‌ಲೆಂಡ್ಸ್‌ ವಿರುದ್ಧ ಗೆಲ್ಲಬೇಕಿದೆ. ತಂಡದ ಭವಿಷ್ಯ ಸಂಪೂರ್ಣವಾಗಿ ತನ್ನ ಕೈಯಲ್ಲೇ ಇಲ್ಲ ಎನ್ನುವ ಅರಿವು ತಂಡಕ್ಕಿದೆ. ಹೀಗಾಗಿ ತಾನು ಗೆಲ್ಲುವುದರ ಜೊತೆಗೆ ಉಳಿದ ಪಂದ್ಯಗಳ ಫಲಿತಾಂಶಗಳು ತನ್ನ ಪರವಾಗಿ ಬರಬೇಕು ಎನ್ನುವುದು ಬಾಬರ್‌ ಅಜಂ ಪಡೆಗೆ ಗೊತ್ತಿದೆ.

ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿರುವ ಬಾಬರ್‌ ಹಾಗೂ ಮೊಹಮದ್‌ ರಿಜ್ವಾನ್‌ ಮಂಕಾಗಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ. ವೇಗಿ ಶಾಹೀನ್‌ ಅಫ್ರಿದಿ ಮೊನಚು ಕಳೆದುಕೊಂಡಿರುವುದು ಕೂಡ ತಂಡದ ತಲೆನೋವು ಹೆಚ್ಚಿಸಿದೆ. ಮತ್ತೊಂದೆಡೆ ನೆದರ್‌ಲೆಂಡ್ಸ್ ಆಚ್ಚರಿ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ವರ್ಷ ಆಗಸ್ಟಲ್ಲಿ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನಕ್ಕೆ ಡಚ್‌ ತಂಡ ಪ್ರಬಲ ಪೈಪೋಟಿ ನೀಡಿತ್ತು ಎನ್ನುವುದನ್ನು ಮರೆಯುವಂತಿಲ್ಲ.

Latest Videos

undefined

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಶಾನ್ ಮಸೂದ್, ಇಫ್ತಿಕಾರ್ ಅಹಮದ್, ಶಾದಾಬ್ ಖಾನ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ.

ನೆದರ್‌ಲೆಂಡ್ಸ್‌: ವಿಕ್ರಂಜಿತ್ ಸಿಂಗ್, ಮ್ಯಾಕ್ಸ್‌ ಒ'ಡೌಡ್, ಬಾಸ್ ಡೆ ಲೀಡೆ, ಕಾಲಿನ್ ಅಕರ್‌ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್‌(ನಾಯಕ&ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೊಗನ್‌ ವ್ಯಾನ್ ಬೀಕ್, ಶೆರಿಜ್ ಅಹಮದ್, ಫ್ರೆಡ್ ಕ್ಲಾಸೇನ್, ಪೌಲ್ ವ್ಯಾನ್ ಮೀಕ್ರೆನ್‌.

ಪಂದ್ಯ: ಮಧ್ಯಾಹ್ನ 12.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಗುಂಪು-2ರ ಸೆಮೀಸ್‌ ಲೆಕ್ಕಾಚಾರ ಹೇಗೆ?

ಭಾರತ 2 ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಸೆಮಿಫೈನಲ್‌ ಪ್ರವೇಶಿಸಲು ಕನಿಷ್ಠ 2 ಗೆಲುವು ಬೇಕಿದೆ. ತಂಡ ಒಂದು ಜಯ ಕಂಡು 6 ಅಂಕಗಳೊಂದಿಗೂ ಸೆಮೀಸ್‌ಗೇರಬಹುದು. ಆದರೆ ಉಳಿದ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕು. ಇನ್ನು ದಕ್ಷಿಣ ಆಫ್ರಿಕಾ ಮಳೆಯಿಂದಾಗಿ ಜಿಂಬಾಬ್ವೆ ವಿರುದ್ಧ 1 ಅಂಕ ಕಳೆದುಕೊಂಡಿತು. ತಂಡಕ್ಕೆ ಮುಂದಿನ 2 ಪಂದ್ಯಗಳಲ್ಲಿ ಬಲಿಷ್ಠ ಎದುರಾಗಳಿಗಳು ಕಾಯುತ್ತಿವೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಸೋತು ನೆದರ್‌ಲೆಂಡ್ಸ್‌ ವಿರುದ್ಧ ಗೆದ್ದರೂ ಸೆಮೀಸ್‌ ಸ್ಥಾನ ಕೈಗೆಟುಕುವುದಿಲ್ಲ. ಭಾರತ, ಪಾಕ್‌ ವಿರುದ್ಧ ಒಂದರಲ್ಲಿ ಗೆದ್ದರೂ ಸೆಮೀಸ್‌ ಹಾದಿ ಸಲೀಸಾಗಲಿದೆ.

T20 World Cup:ಬೌಲ್ಟ್ ಬಿರುಗಾಳಿ, ಕಿವೀಸ್ ಎದುರು ಲಂಕಾಗೆ ಹೀನಾಯ ಸೋಲು..!

ಇನ್ನು ಪಾಕಿಸ್ತಾನ ಎರಡೂ ಪಂದ್ಯಗಳನ್ನು ಕೊನೆ ಎಸೆತದಲ್ಲಿ ಸೋತಿರುವ ಕಾರಣ ನೆಟ್‌ ರನ್‌ರೇಟ್‌ಗೆ ಹೆಚ್ಚು ಪೆಟ್ಟು ಬಿದ್ದಿಲ್ಲ. ಮುಂದಿನ 3 ಪಂದ್ಯಗಳನ್ನು ಗೆದ್ದರೆ ಸೆಮೀಸ್‌ಗೇರಬಹುದು. ಆದರೆ ಭಾರತ ಹಾಗೂ ನೆದರ್‌ಲೆಂಡ್‌್ಸ ವಿರುದ್ಧ ದ.ಆಫ್ರಿಕಾ ಗೆದ್ದು, ಬಾಂಗ್ಲಾದೇಶ, ಜಿಂಬಾಬ್ವೆಯನ್ನು ಭಾರತ ಸೋಲಿಸಿದರೆ ಪಾಕಿಸ್ತಾನ ಹಿಂದುಳಿಯಬಹುದು. ಜಿಂಬಾಬ್ವೆ ಸಹ ರೇಸ್‌ನಲ್ಲಿ ಉಳಿದಿದ್ದು, ಬಾಕಿ ಇರುವ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಬೇಕಿದೆ. ನೆದರ್‌ಲೆಂಡ್‌್ಸ ಹಾಗೂ ಬಾಂಗ್ಲಾದೇಶದ ಹಾದಿ ಕಠಿಣವಾಗಿದೆ.

click me!