T20 World Cup ಪಾಕಿಸ್ತಾನಕ್ಕೆ ಆರಂಭದಲ್ಲೇ ಶಾಕ್, ಬಾಬರ್ ಅಜಂ ಶೂನ್ಯಕ್ಕೆ ಔಟ್..!

By Naveen KodaseFirst Published Oct 23, 2022, 1:56 PM IST
Highlights

ಎರಡನೇ ಓವರ್‌ನಲ್ಲೇ ವಿಕೆಟ್‌ ಕಳೆದುಕೊಂಡ ಪಾಕಿಸ್ತಾನ
ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿದ ಪಾಕ್ ನಾಯಕ ಬಾಬರ್ ಅಜಂ
ಟಿ20 ವಿಶ್ವಕಪ್‌ನಲ್ಲಿ ತಾವೆಸೆದ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಆರ್ಶದೀಪ್ ಸಿಂಗ್

ಮೆಲ್ಬರ್ನ್‌(ಅ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡಕ್ಕೆ ಅರಂಭದಲ್ಲೇ ಆಘಾತ ಎದುರಾಗಿದ್ದು ನಾಯಕ ಬಾಬರ್ ಅಜಂ ಖಾತೆ ತೆರೆಯುವ ಮುನ್ನವೇ ಆರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಭಾರತ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಮೊದಲ ಯಶಸ್ಸು ಗಳಿಸಿದೆ. ಇದಾದ ಬಳಿಕ ಮರು ಓವರ್‌ನಲ್ಲಿ ಆರ್ಶದೀಪ್ ಸಿಂಗ್, ಪಾಕಿಸ್ತಾನದ ಮತ್ತೋರ್ವ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೊದಲ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ಅನುಭವಿ ಭುವನೇಶ್ವರ್ ಕುಮಾರ್ ಕೇವಲ ಒಂದು ರನ್ ಮಾತ್ರ ನೀಡಿದರು. ಇನ್ನು ಮೊದಲ ಟಿ20 ವಿಶ್ವಕಪ್ ಆಡುತ್ತಿರುವ ಯುವ ವೇಗಿ ಆರ್ಶದೀಪ್ ಸಿಂಗ್ ತಾವೆಸೆದ ಮೊದಲ ಬಾಲ್‌ನಲ್ಲೇ ಪಾಕ್‌ ನಾಯಕ ಬಾಬರ್ ಅಜಂ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

A dream start ft. Arshdeep Singh! 🔥

Keep watching Star Sports & Disney+Hotstar to enjoy the LIVE action from the ICC Men's 2022! pic.twitter.com/zquAPT8EOf

— Star Sports (@StarSportsIndia)

ಆರಂಭದಲ್ಲೇ ಪಿಚ್ ಸ್ವಿಂಗ್ ಬೌಲಿಂಗ್‌ಗೆ ಸ್ಪಂದಿಸುತ್ತಿದ್ದು, ಪಾಕಿಸ್ತಾನ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಆರ್ಶದೀಪ್ ವೇಗವನ್ನು ಗುರುತಿಸಲಾಗದೇ ಫುಲ್ ಮಾಡುವ ಯತ್ನದಲ್ಲಿ ರಿಜ್ವಾನ್, ಭುವನೇಶ್ವರ್ ಕುಮಾರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.ಮೊದಲ 4 ಓವರ್ ಅಂತ್ಯದ ವೇಳೆಗೆ ಪಾಕಿಸ್ತಾನ ಎರಡು ವಿಕೆಟ್ ಕಳೆದುಕೊಂಡು ಕೇವಲ 15 ರನ್‌ ಗಳಿಸಲಷ್ಟೇ ಶಕ್ತವಾಗಿದೆ.

T20 World Cup: ಇಂಡೋ-ಪಾಕ್ ಕದನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ..!

ಪಿಚ್‌ ರಿಪೋರ್ಚ್‌

ಎಂಸಿಜಿ ಪಿಚ್‌ ಬ್ಯಾಟಿಂಗ್‌ ಯೋಗ್ಯವಾಗಿದ್ದರೂ ವೇಗಿಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಕೊನೆ 3 ಟಿ20 ಪಂದ್ಯಗಳಲ್ಲಿ 28ರಲ್ಲಿ 23 ವಿಕೆಟ್‌ಗಳು ವೇಗಿಗಳ ಪಾಲಾಗಿವೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್‌್ಸ ಮೊತ್ತ 145. ಕಳೆದ 3 ಪಂದ್ಯಗಳಲ್ಲೂ ಚೇಸಿಂಗ್‌ ಮಾಡಿದ ತಂಡ ಜಯಿಸಿದೆ.

ತಂಡಗಳು ಹೀಗಿವೆ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌, ಅಕ್ಷರ್‌ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ, ಆರ್ಶದೀಪ್‌ ಸಿಂಗ್.

ಪಾಕಿಸ್ತಾನ: ಬಾಬರ್‌ ಆಜಂ(ನಾಯಕ), ಮೊಹಮ್ಮದ್ ರಿಜ್ವಾನ್‌, ಶಾನ್ ಮಸೂದ್‌, ಹೈದರ್‌ ಅಲಿ, ಇಫ್ತಿಕಾರ್‌ ಅಹಮ್ಮದ್, ಆಸಿಫ್‌ ಅಲಿ, ಮೊಹಮ್ಮದ್ ನವಾಜ್‌, ಶಾದಾಬ್‌ ಖಾನ್, ನಸೀಂ ಶಾ, ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್
ಸ್ಥಳ: ಎಂಸಿಜಿ

click me!