ರೋಹಿತ್-ದ್ರಾವಿಡ್‌ಗೆ ICC ಕಪ್ ಗೆಲ್ಲಲು ಲಾಸ್ಟ್ ಚಾನ್ಸ್..! ಆದ್ರೆ ತಂಡಕ್ಕೆ ಕೊಹ್ಲಿಯದ್ದೇ ಚಿಂತೆ..!

By Naveen KodaseFirst Published Apr 28, 2024, 1:29 PM IST
Highlights

ಈ ಬಾರಿಯ IPLನಲ್ಲಿ ಕೊಹ್ಲಿ ಈವರೆಗೂ ಅತಿಹೆಚ್ಚು ರನ್ಗಳಿಸಿ, ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಆದ್ರೆ, ಇಷ್ಟಾದ್ರೂ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಟೀಕೆಗೆ ಗುರಿಯಾಗಿದೆ. ಅದಕ್ಕೆ ಕಾರಣ ಕೊಹ್ಲಿಯ ಸ್ಟ್ರೈಕ್ರೇಟ್. T20 ಕ್ರಿಕೆಟಲ್ಲಿ ವಿರಾಟ್ ಒನ್ಡೇಯಂತೆ ಬ್ಯಾಟಿಂಗ್ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಜಸ್ಟ್ 118.60ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಅದ್ರೆ, ಅದೇ ಪಿಚ್ನಲ್ಲಿ ಬೇರೆ ಬ್ಯಾಟರ್ಸ್ 150ಕ್ಕೂ ಹೆಚ್ಚಿನ ಸ್ಟ್ರೈಕ್ರೇಟಲ್ಲಿ ಆಡಿದ್ರು.

ಬೆಂಗಳೂರು(ಏ.28) :ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೂ ವಿರಾಟ್ ಕೊಹ್ಲಿ ಅತಿಹೆಚ್ಚು ರನ್‌ಗಳಿಸಿದವ್ರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಆ ಮೂಲಕ ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಇಷ್ಟಾದ್ರೂ ಅದೊಂದು ಕಾರಣಕ್ಕೆ ವಿರಾಟ್ ಬ್ಯಾಟಿಂಗ್ ಟೀಕೆಗೆ ಗುರಿಯಾಗಿದೆ. ಯಾವುದು ಆ ಕಾರಣ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

T20 ವಿಶ್ವಕಪ್ ಗೆಲ್ಲಲೇಬೇಕು ಅಂತ BCCI ಪಣ..! 

ಸದ್ಯ IPL ಸಮರ ಜೋರಾಗಿದೆ. ಐಪಿಎಲ್ ಮುಗಿದ ನಂತರ T20 ವಿಶ್ವಕಪ್ ಟೂರ್ನಿ ನಡೆಯಲಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಕೈಚೆಲ್ಲಿದ್ದ ಟೀಂ ಇಂಡಿಯಾ, ಈಗ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಶತಾಯ ಗತಾಯ ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕು ಅಂತ ಫಿಕ್ಸ್ ಆಗಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ಗೆ ನಡುವೆ ವಿರಾಟ್ ಕೊಹ್ಲಿಯದ್ದೇ ದೊಡ್ಡ ಚಿಂತೆಯಾಗಿದೆ.

ಯೆಸ್, ಈ ಬಾರಿಯ IPLನಲ್ಲಿ ಕೊಹ್ಲಿ ಈವರೆಗೂ ಅತಿಹೆಚ್ಚು ರನ್ಗಳಿಸಿ, ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಆದ್ರೆ, ಇಷ್ಟಾದ್ರೂ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಟೀಕೆಗೆ ಗುರಿಯಾಗಿದೆ. ಅದಕ್ಕೆ ಕಾರಣ ಕೊಹ್ಲಿಯ ಸ್ಟ್ರೈಕ್ರೇಟ್. T20 ಕ್ರಿಕೆಟಲ್ಲಿ ವಿರಾಟ್ ಒನ್ಡೇಯಂತೆ ಬ್ಯಾಟಿಂಗ್ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಜಸ್ಟ್ 118.60ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಅದ್ರೆ, ಅದೇ ಪಿಚ್ನಲ್ಲಿ ಬೇರೆ ಬ್ಯಾಟರ್ಸ್ 150ಕ್ಕೂ ಹೆಚ್ಚಿನ ಸ್ಟ್ರೈಕ್ರೇಟಲ್ಲಿ ಆಡಿದ್ರು.

IPL 2024 ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದು ಸನ್‌ರೈಸರ್ಸ್ ಹೈದರಾಬಾದ್ ಚಾಲೆಂಜ್

ಪವರ್ ಪ್ಲೇನಲ್ಲಿ ಆರ್ಭಟ, ಮಿಡಲ್ ಓವರ್‍‌ಗಳಲ್ಲಿ ಪರದಾಟ..!

ಯೆಸ್, ಪವರ್ ಪ್ಲೇನಲ್ಲಿ ಅಬ್ಬರಿಸೋ ವಿರಾಟ್, ಮಿಡಲ್ ಓವರ್ಗಳಲ್ಲಿ ಫುಲ್ ಸೈಲೆಂಟಾಗ್ತಾರೆ. ಬೌಂಡರಿ, ಸಿಕ್ಸರ್ ಬಾರಿಸಲು ಪರದಾಡ್ತಾರೆ. ಸನ್ರೈಸರ್ಸ್ ವಿರುದ್ಧದ ಪಂದ್ಯವೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳಲ್ಲಿ 51 ರನ್ ಬಾರಿಸಿದ್ರು. ಇದರಲ್ಲಿ ಮೊದಲ 6 ಓವರ್ಗಳಲ್ಲಿ 145.45ರ ಸ್ಟೈಕ್ರೇಟ್ನಲ್ಲಿ 32 ರನ್ ಬಾರಿಸಿದ ರನ್ ಮಷಿನ್, ಮಿಡಲ್ ಓವರ್ಗಳಲ್ಲಿ ತೀರಾ ಸ್ಲೋ ಬ್ಯಾಟಿಂಗ್ ಮಾಡಿದ್ರು. 19 ರನ್ ಗಳಿಸಲು 25 ಎಸೆತಗಳನ್ನ ತೆಗೆದುಕೊಂಡ್ರು. 

 ಗುಜರಾತ್‌ಗಿಂದು ಆರ್‌ಸಿಬಿ ಚಾಲೆಂಗ್‌; ಬೆಂಗಳೂರು ತಂಡಕ್ಕೆ ಇನ್ನೂ ಇದೆಯಾ ಪ್ಲೇ ಆಫ್ ಚಾನ್ಸ್?

ಯೆಸ್, ಬುಲೆಟ್ ವೇಗದಲ್ಲಿ ನುಗ್ಗಿಬರೋ ಬಾಲ್ಗಳಲ್ಲಿ ಕೊಹ್ಲಿ ಅದ್ಭುತವಾಗಿ ಬ್ಯಾಟ್ ಬೀಸ್ತಾರೆ ಆದ್ರೆ, ಸ್ಲೋ ಬಾಲ್ ವಿರುದ್ಧ ತಿಣುಕಾಡ್ತಾರೆ. ಈ ಐಪಿಎಲ್ನಲ್ಲಿ ಹಲವು ಬಾರಿ ಇದು ಪ್ರೂವ್ ಆಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಸೆಲ್ ಎಸೆದ ಸ್ಲೋ ಬಾಲ್ಗಳಲ್ಲಿ ಕೊಹ್ಲಿ ವೀಕ್ನೇಸ್ ಬಯಲಾಯ್ತು. 

SRH ಪಂದ್ಯದಲ್ಲೂ ಎಡಗೈ ವೇಗಿ ಜಯದೇವ್ ಉನಾದ್ಕಟ್ ಸ್ಲೋ ಬಾಲ್ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾದ್ರು. ಮೊದಲ ಬಾರಿ ಕೊಹ್ಲಿ ವಿಕೆಟ್ ಬೇಟೆಯಾಡಿದ್ರು. ಸ್ಪಿನ್ನರ್ಗಳ ವಿರುದ್ದವೂ ಕೊಹ್ಲಿ ಒದ್ದಾಡ್ತಾರೆ. ಇದರಿಂದ RCBಗೆ ಮಿಡಲ್ ಓವರ್ಗಳಲ್ಲಿ ರನ್ ಹರಿದು ಬರ್ತಿಲ್ಲ. ಈವರೆಗೂ ಕೊಹ್ಲಿ ಸ್ಪಿನ್ನರ್ಗಳ ಬೌಲಿಂಗ್ನಲ್ಲಿ ಕೇವಲ 123.57ರ ಸರಾಸರಿಯಲ್ಲಿ ರನ್ಳಿಸಿದ್ದಾರೆ. 76 ಬಾಲ್ಗಳಲ್ಲಿ ಜಸ್ಟ್ 13 ಬೌಂಡರಿ ಸಿಡಿಸಿದ್ದಾರೆ. 

ವೆಸ್ಟ್ ಇಂಡೀಸ್ ಸ್ಲೋ ಪಿಚ್ಗಳಲ್ಲಿ ಅಬ್ಬರಿಸುವ ಚಾಲೆಂಜ್..!

ಕೊಹ್ಲಿ ಡೆತ್ ಓವರ್ಗಳಲ್ಲಿ ಅಬ್ಬರಿಸ್ತಾರೆ. ಹೈ ಸ್ಟ್ರೈಕ್ರೇಟ್ನಲ್ಲಿ ಆಡ್ತಾರೆ ಅನ್ನೋದೇನೋ ನಿಜ. ಆದ್ರೆ, ಮಿಡಲ್ ಓವರ್ಗಳಲ್ಲಿ ಔಟಾದ್ರೆ, ಅದರ ಪರಿಣಾಮ ತಂಡದ ಮೇಲೆ ಬೀರುತ್ತೆ. ಮೊನ್ನೆಯ ಪಂದ್ಯದಲ್ಲಿ ಆಗಿದ್ದೂ ಇದೆ. ಕೊಹ್ಲಿ ವೇಗವಾಗಿ ರನ್ ಕಲೆಹಾಕಿದ್ರೆ, ತಂಡದ ಸ್ಕೋರ್ 230ರ ಗಡಿ ದಾಟುತಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. 

T20 ವಿಶ್ವಕಪ್ ಸಮರ ನಡೆಯೋದು ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ. SUPER-8 ಮ್ಯಾಚ್ಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿವೆ. ವೆಸ್ಟ್ ಇಂಡೀಸ್ ಪಿಚ್ಗಳು ಸ್ಲೋ ಪಿಚ್ಗಳಾಗಿವೆ. ಇದ್ರಿಂದ ಈ ಪಿಚ್ಗಳಲ್ಲಿ ಕೊಹ್ಲಿ ಹೇಗೆ ಆಡ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!