T20 World Cup: ಸ್ಕಾಟ್ಲೆಂಡ್‌ ವಿಶ್ವಕಪ್‌ ಜೆರ್ಸಿ ವಿನ್ಯಾಸ ಮಾಡಿದ್ದು 12ರ ಬಾಲೆ!

By Suvarna News  |  First Published Oct 20, 2021, 10:13 AM IST

* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಸ್ಕಾಟ್ಲೆಂಡ್

* ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ ಜೆರ್ಸಿ ಡಿಸೈನ್ ಮಾಡಿದ್ದು 12 ವರ್ಷದ ಬಾಲಕಿ ರೆಬೆಕಾ ಡೌನಿ

* ಅರ್ಹತಾ ಸುತ್ತಿನ ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸ್ಕಾಟ್ಲೆಂಡ್ ತಂಡ


ದುಬೈ(ಅ.20): ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಸೂಪರ್‌-12 ಹಂತಕ್ಕೆ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಸ್ಕಾಟ್ಲೆಂಡ್‌ ಕ್ರಿಕೆಟ್ ತಂಡದ ಜೆರ್ಸಿ (Scotland Cricket Team jersey) ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಚ್ಚರಿಯ ವಿಷಯ ಎಂದರೆ ತಂಡದ ಜೆರ್ಸಿ ವಿನ್ಯಾಸಗೊಳಿಸಿದ್ದು 12 ವರ್ಷದ ಬಾಲಕಿ ರೆಬೆಕಾ ಡೌನಿ (Rebecca Downie).

ಹೌದು, ಸ್ಕಾಟ್ಲೆಂಡ್‌ ಕ್ರಿಕೆಟ್‌ ಸಂಸ್ಥೆಯು ಟಿ20 ವಿಶ್ವಕಪ್‌ ಜೆರ್ಸಿಯನ್ನು ವಿನ್ಯಾಸಗೊಳಿಸುವಂತೆ ಸ್ಪರ್ಧೆಯೊಂದನ್ನು ನಡೆಸಿತ್ತು. ಇದರಲ್ಲಿ ದೇಶಾದ್ಯಂತ 200 ಶಾಲಾ ಮಕ್ಕಳು ಸಲ್ಲಿಸಿದ್ದ ವಿನ್ಯಾಸ ಮಾದರಿಯ ಪೈಕಿ ರೆಬೆಕಾ ನೀಡಿದ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಜೆರ್ಸಿಯು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಲಾಂಛನವಾದ ‘ದಿ ಥಿಸೆಲ್‌’ (ಒಂದು ಬಗೆಯ ಹೂವಿನ ಗಿಡ)ನ ಬಣ್ಣವನ್ನು ಹೊಂದಿದೆ.

Scotland's kit designer 👇

12 year-old Rebecca Downie from Haddington 👋

She was following our first game on TV, proudly sporting the shirt she designed herself 👏

Thank you again Rebecca! 🏴󠁧󠁢󠁳󠁣󠁴󠁿 | 🟣 pic.twitter.com/dXZhf5CvFD

— Cricket Scotland (@CricketScotland)

Latest Videos

undefined

T20 World Cup ಸೂಪರ್‌-12 ರೇಸಲ್ಲಿ ಉಳಿದ ಬಾಂಗ್ಲಾದೇಶ

ತಂಡವು ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಆಡಲು ಒಮಾನ್‌ಗೆ ತೆರಳುವ ಮೊದಲು ಎಡಿನ್ಬರ್ಗ್‌ನಲ್ಲಿ ಆಟಗಾರರನ್ನು ಭೇಟಿ ಮಾಡಿದ್ದ ರೆಬೆಕಾ ತಾವು ವಿನ್ಯಾಸಗೊಳಿಸಿರುವ ಜೆರ್ಸಿಯನ್ನು ಹಸ್ತಾಂತರಿಸಿದ್ದರು. ಜಿಂಬಾಬ್ವೆ ವಿರುದ್ಧ ಎಡಿನ್ಬರ್ಗ್‌ನಲ್ಲಿ ನಡೆದ ಪಂದ್ಯಕ್ಕೆ ರೆಬೆಕಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಜೆರ್ಸಿ ವಿನ್ಯಾಸಕ್ಕೆ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ನಾಯಕ ಕೈಲ್‌ ಕಾಟ್ಜರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂತನ ಜೆರ್ಸಿಯೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಸ್ಕಾಟ್ಲೆಂಡ್ ತಂಡವು ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಬಹುತೇಕ ಸೂಪರ್ 12 ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಸ್ಕಾಟ್ಲೆಂಡ್‌ ತಾನಾಡಿದ ಎರಡು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ

ರಾಷ್ಟ್ರೀಯ ಏಕದಿನ: ರಾಜ್ಯಕ್ಕೆ ವೇದಾ ಕೃಷ್ಣಮೂರ್ತಿ ನಾಯಕಿ

ಬೆಂಗಳೂರು: ಅಕ್ಟೋಬರ್ 31ರಿಂದ ಆರಂಭಗೊಳ್ಳಲಿರುವ ರಾಷ್ಟ್ರೀಯ ಹಿರಿಯ ಮಹಿಳಾ ಏಕದಿನ ಟೂರ್ನಿಗೆ ಕರ್ನಾಟಕ ಕ್ರಿಕೆಟ್ ತಂಡ (Karnataka Women's Cricket Team) ಪ್ರಕಟಗೊಂಡಿದೆ. ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ (Veda Krishnamurthy) ತಂಡವನ್ನು ಮುನ್ನಡೆಸಲಿದ್ದಾರೆ. ದಿವ್ಯಾ ಜ್ಞಾನಾನಂದ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ತಂಡವು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಲಿದೆ. ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ಎದುರಾಗಲಿದೆ.

ತಂಡ: ವೇದಾ(ನಾಯಕಿ), ದಿವ್ಯಾ, ರಕ್ಷಿತಾ, ಶುಭಾ, ಪ್ರತ್ಯುಷಾ ಸಿ., ಮೋನಿಕಾ, ರಾಮೇಶ್ವರಿ, ಆಕಾಂಕ್ಷ, ಪ್ರತ್ಯೂಷಾ, ಸಂಜನಾ, ಸಹನಾ, ಶ್ರೇಯಾಂಕಾ, ಚಂದು, ವೃಂದಾ, ಅದಿತಿ, ಅನಘಾ, ನಿಕಿ ಪ್ರಸಾದ್‌, ಸೌಮ್ಯ, ಶಿಶಿರಾ, ಅಶ್ಮೇರಾ.

ಮತ್ತೆ ಮೈದಾನಕ್ಕೆ ನುಗ್ಗಿದ ಜಾರ್ವೊ

ಲಂಡನ್‌: ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯಲ್ಲಿ 3 ಬಾರಿ ಮೈದಾನಕ್ಕೆ ನುಗ್ಗಿದ್ದ ಯೂಟ್ಯೂಬರ್‌ ಡೇನಿಯಲ್‌ ಜಾರ್ವಿಸ್‌ (Jarvo 69) (ಜಾರ್ವೊ 69) ಭಾನುವಾರ ನ್ಯಾಷನಲ್‌ ಫುಟ್ಬಾಲ್‌ ಲೀಗ್‌(ಎನ್‌ಎಫ್‌ಎಲ್‌) ಮೈದಾನಕ್ಕೂ ನುಗ್ಗಿದ ಪ್ರಸಂಗ ನಡೆದಿದೆ. 

T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್‌ಗೆ ಶರಣಾದ ಬಾಂಗ್ಲಾದೇಶ

ಲಂಡನ್‌ನಲ್ಲಿ ಜಾಕ್ಸನ್‌ವಿಲ್ಲೆ ಜಾಗ್ವರ್ಸ್‌ ಹಾಗೂ ಮಯಾಮಿ ಡಾಲ್ಫಿನ್ಸ್‌ ನಡುವಿನ ಪಂದ್ಯದ ವೇಳೆ ಜಾರ್ವೊ ಮೈದಾನಕ್ಕೆ ನುಗ್ಗಿದ್ದಾನೆ. ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಹಾಕಿದ್ದಾರೆ. ಘಟನೆಯ ವಿಡಿಯೋ ಭಾರೀ ವೈರಲ್‌ ಆಗಿದೆ.

click me!