ಏಕದಿನ ರ‍್ಯಾಂಕಿಂಗ್‌‌: 2ನೇ ಸ್ಥಾನದಲ್ಲೇ ಮುಂದುವರೆದ ವಿರಾಟ್‌ ಕೊಹ್ಲಿ

By Suvarna NewsFirst Published May 27, 2021, 11:33 AM IST
Highlights

* ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟ

* ಬೌಲಿಂಗ್ ವಿಭಾಗದಲ್ಲಿ ವೃತ್ತಿಜೀವನದಲ್ಲಿ  2ನೇ ಸ್ಥಾನಕ್ಕೇರಿ ಶ್ರೇಷ್ಠ ಸಾಧನೆ ಮಾಡಿದ ಮೆಹದಿ ಹಸನ್

* ಬ್ಯಾಟಿಂಗ್‌ ವಿಭಾಗದಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ದುಬೈ(ಮೇ.27): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ, ಬುಧವಾರ(ಮೇ.27) ಐಸಿಸಿ ಪ್ರಕಟಿಸಿದ ನೂತನ ಏಕದಿನ ರ‍್ಯಾಂಕಿಂಗ್‌‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್‌ ಆಜಂ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಬ್ಯಾಟಿಂಗ್‌ ವಿಭಾಗದಲ್ಲಿ ಟಾಪ್‌ 10 ಪಟ್ಟಿಯೊಳಗೆ ಯಾವುದೇ ಬದಲಾವಣೆಗಳು ಆಗಿಲ್ಲ. ಬಾಬರ್ ಅಜಂ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿದ್ದರೆ, ರಾಸ್ ಟೇಲರ್ ಹಾಗೂ ಆರೋನ್‌ ಫಿಂಚ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಮೆಗಾ ಹರಾಜಿನಲ್ಲಿ ಕೆಕೆಆರ್ ಈ ಮೂವರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದ ಆಕಾಶ್ ಚೋಪ್ರಾ

ಇನ್ನು ಬೌಲಿಂಗ್‌ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಶ್ರೀಲಂಕಾ ವಿರುದ್ದ ಮೊದಲೆರಡು ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಬಾಂಗ್ಲಾದೇಶ ಆಫ್‌ಸ್ಪಿನ್ನರ್ 3 ಸ್ಥಾನ ಜಿಗಿದು, ವೃತ್ತಿಜೀವನದ ಶ್ರೇಷ್ಠ ಸಾಧನೆಯಾದ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಲಂಕಾ ಎದುರು ಮೆಹದಿ ಮೊದಲ ಪಂದ್ಯದಲ್ಲಿ 30 ರನ್‌ ನೀಡಿ 4 ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ 28 ರನ್‌ ನೀಡಿ 3 ವಿಕೆಟ್ ಪಡೆದಿದ್ದರು. 

⬆️ Mehidy Hasan Miraz climbs to No.2
⬆️ Mustafizur Rahman breaks into top 10

Huge gains for Bangladesh bowlers in the ICC Men’s ODI Player Rankings 👏 pic.twitter.com/nr1PGH0ukT

— ICC (@ICC)

ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್‌ ಬುಮ್ರಾ 5ನೇ ಸ್ಥಾನದಲ್ಲೇ ಉಳಿದಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಮೊದಲ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಮುಜೀಬ್ ಉರ್ ರೆಹಮಾನ್, ಮ್ಯಾಟ್ ಹೆನ್ರಿ ಹಾಗೂ ಬುಮ್ರಾ ಟಾಪ್‌ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. 
 

click me!