* ಎಂ ಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿಗೆ 45 ಕೋಟಿ ರುಪಾಯಿ ಪಡೆದಿದ್ದ ಮಾಜಿ ನಾಯಕ
* 2016ರಲ್ಲಿ ತೆರೆ ಕಂಡಿದ್ದ ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾ
* ಧೋನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ, ದಿವಂಗತ ಸುಶಾಂತ್ ಸಿಂಗ್ ರಜ್‌ಪೂತ್‌ಗೆ 2 ಕೋಟಿ ರುಪಾಯಿ ಸಂಭಾವನೆ
ನವದೆಹಲಿ(ಮೇ.27): ವಿಶ್ವ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂ.ಎಸ್.ಧೋನಿಯ ಜೀವನಾಧಾರಿತ ಸಿನಿಮಾವನ್ನು ಬಹುತೇಕ ಎಲ್ಲಾ ಕ್ರಿಕೆಟ್ ಪ್ರೇಮಿಗಳು ನೋಡಿರುತ್ತಾರೆ. 2016ರಲ್ಲಿ ತೆರೆ ಕಂಡಿದ್ದ ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾಕ್ಕೆ ಧೋನಿ ಬರೋಬ್ಬರಿ 45 ಕೋಟಿ ರು. ಪಡೆದಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ತಮ್ಮ ಜೀವನದ ಕುರಿತ ಮಾಹಿತಿ, ವೈಯಕ್ತಿಕ ವಿಚಾರಗಳು, ದಾಖಲೆಗಳು ಹಾಗೂ ಫೋಟೋಗಳು, ಚಿತ್ರದ ಪ್ರಚಾರ ಹಾಗೂ ಮಾರ್ಕೆಟಿಂಗ್‌ನಲ್ಲಿ ಭಾಗಿಯಾಗುವುದಕ್ಕೆ ಧೋನಿಗೆ 45 ಕೋಟಿ ರುಪಾಯಿ ನೀಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ವೇಳೆ ಧೋನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ, ದಿವಂಗತ ಸುಶಾಂತ್ ಸಿಂಗ್ ರಜ್‌ಪೂತ್‌ಗೆ 2 ಕೋಟಿ ರುಪಾಯಿ ಸಂಭಾವನೆ ನೀಡಲಾಗಿತ್ತು ಎನ್ನುವ ವಿಷಯವು ಬೆಳಕಿಗೆ ಬಂದಿದೆ.
ಒಂದು ರುಪಾಯಿಯಿಂದ 45 ಕೋಟಿ ವರೆಗೆ, ತಮ್ಮದೇ ಬಯೋಪಿಕ್‌ಗೆ ಕ್ರೀಡಾಪಟುಗಳು ಪಡೆದ ಹಣವೆಷ್ಟು..?
ಧೋನಿ ಚಿತ್ರಕ್ಕೆ ನಿರ್ಮಾಪಕರು ಒಟ್ಟು 104 ಕೋಟಿ ರುಪಾಯಿ ಖರ್ಚು ಮಾಡಿದ್ದರು. ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಥಿಯೇಟರ್‌ಗಳಲ್ಲೇ ಚಿತ್ರ 216 ಕೋಟಿ ರುಪಾಯಿ ಸಂಗ್ರಹಿಸಿತ್ತು. ಸ್ಯಾಟಿಲೈಟ್ ಹಕ್ಕು, ಗೀತೆಗಳು, ಆನ್‌ಲೈನ್ ಹಕ್ಕು ಸೇರಿ 300 ಕೋಟಿ ರು.ಗೆ ಹೆಚ್ಚು ಸಂಪಾದಿಸಿತ್ತು ಎನ್ನಲಾಗಿದೆ.