2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯ
ಡಲ್ಲಾಸ್, ನ್ಯೂಯಾರ್ಕ್ ಸೇರಿ 10 ನಗರಗಳಲ್ಲಿ ಪಂದ್ಯ ಆಯೋಜನೆ
ಮುಂದಿನ ಆವೃತ್ತಿಯಲ್ಲಿ ಒಟ್ಟು 20 ತಂಡಗಳು ಭಾಗಿ
ನವದೆಹಲಿ(ಜು.30): ಮುಂದಿನ ವರ್ಷದ ಟಿ20 ವಿಶ್ವಕಪ್ ಜೂನ್ 4ರಿಂದ 30ರ ವರೆಗೂ ನಡೆಯಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯ ವಹಿಸಲಿದ್ದು, ಡಲ್ಲಾಸ್, ನ್ಯೂಯಾರ್ಕ್ ಸೇರಿ 10 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ. ಮುಂದಿನ ಆವೃತ್ತಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ.
ಕಳೆದ ವಾರವಷ್ಟೇ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ಪಪುವಾ ನ್ಯೂಗಿನಿ ತಂಡಗಳು ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಕೊಂಡಿವೆ. ಇನ್ನು ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡ ಎಂಟು ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನೆದರ್‌ಲೆಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ನೇರ ಅರ್ಹತೆಯನ್ನು ಪಡೆದುಕೊಂಡಿವೆ. ಈ ಪೈಕಿ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಶ್ರೇಯಾಂಕದ ಆಧಾರದಲ್ಲಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿವೆ. ಇದರ ಜತೆಗೆ ಟೂರ್ನಿಯ ಆತಿಥ್ಯದ ಹಕ್ಕನ್ನು ಹೊಂದಿರುವ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಕ್ರಿಕೆಟ್ ತಂಡಗಳು ಈಗಾಗಲೇ ನೇರ ಅರ್ಹತೆಗಿಟ್ಟಿಸಿಕೊಂಡಿವೆ.
undefined
Ind vs WI: ವಿಂಡೀಸ್ ಎದುರು ಮಂಡಿಯೂರಿದ ಟೀಂ ಇಂಡಿಯಾ..!
ಟೂರ್ನಿಯ ಮಾದರಿ ಹೇಗೆ?:
ಈ ಹಿಂದೆ 2021-22 ಹಾಗೂ 2022ರಲ್ಲಿ ನಡೆದ ಕಳೆದೆರಡು ಟಿ20 ವಿಶ್ವಕಪ್‌ಗೆ ಹೋಲಿಸಿದರೆ, ಮುಂಬರುವ ಟಿ20 ವಿಶ್ವಕಪ್ ವಿಭಿನ್ನವಾಗಿರಲಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ, ಮೊದಲ ಸುತ್ತಿನ ಬಳಿಕ ಸೂಪರ್ 12 ಹಂತದ ಪಂದ್ಯಗಳು ನಡೆಯಲಿವೆ. 20 ತಂಡಗಳನ್ನು 5 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 8 ಹಂತಕ್ಕೆ ಲಗ್ಗೆಯಿಡಲಿವೆ. ಸೂಪರ್ 8 ಹಂತ ತಲುಪುವ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಸೂಪರ್ 8 ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೆಮೀಸ್‌ನಲ್ಲಿ ಗೆಲುವು ಸಾಧಿಸುವ ತಂಡಗಳು ಫೈನಲ್‌ಗೆ ಲಗ್ಗೆಯಿಡಲಿವೆ.
ಐಪಿಎಲ್‌ಗೆ ಸಮಸ್ಯೆ?:
ವಿಶ್ವಕಪ್ ಜೂನ್ ಮೊದಲ ವಾರದಲ್ಲೇ ಆರಂಭಗೊಳ್ಳಲಿರುವ ಕಾರಣ 2024ರ ಐಪಿಎಲ್ ಮಾರ್ಚ್ 2ನೇ ವಾರ ಆರಂಭಗೊಂಡು ಮೇ ಎರಡು ಅಥವಾ ಮೂರನೇ ವಾರ ಮುಕ್ತಾಯಗೊಳ್ಳಬೇಕಿದೆ. ಇಂಗ್ಲೆಂಡ್ ಟೆಸ್ಟ್ ಸರಣಿ ಮಾ.11ಕ್ಕೆ ಮುಕ್ತಾಯಗೊಳ್ಳಲಿದ್ದು, ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸಲು ಬಿಸಿಸಿಐಗೆ ಸಮಸ್ಯೆಯಾಗಬಹುದು.