10 ವರ್ಷ​ದಲ್ಲಿ ಐಸಿಸಿ ಕ್ರಿಕೆಟ್‌ ಮುಗಿ​ಸಿದೆ ಎಂದ ಅಖ್ತರ್‌

By Suvarna NewsFirst Published May 27, 2020, 4:31 PM IST
Highlights

ಐಸಿಸಿ ನಿಯಮಗಳ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಮೇ.27): ನಿಯ​ಮ​ಗ​ಳಲ್ಲಿ ಅನ​ಗತ್ಯ ಬದ​ಲಾ​ವಣೆ, ಟಿ20ಗಾಗಿ ಉಳಿದ ಮಾದ​ರಿ​ಗಳ ಕಡೆ ನಿರ್ಲಕ್ಷ್ಯ ಸೇರಿ​ದಂತೆ ಕಳೆದ 10 ವರ್ಷಗಳಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಕ್ರಿಕೆಟ್‌ ಕ್ರೀಡೆಯನ್ನು ಯಶಸ್ವಿಯಾಗಿ ಮುಗಿ​ಸಿದೆ ಎಂದು ಪಾಕಿ​ಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಆರೋ​ಪಿ​ಸಿ​ದ್ದಾರೆ. 

‘ಐ​ಸಿಸಿ ಏನು ಮಾಡ​ಬೇಕು ಎಂದು​ಕೊಂಡಿತ್ತೋ ಅದನ್ನು ಯಶ​ಸ್ವಿ​ಯಾಗಿ ಮಾಡಿ ಮುಗಿ​ಸಿದೆ. ಮೊದ​ಲಿ​ನಂತೆ ಈಗ ಸ್ಪರ್ಧಾ​ತ್ಮಕ ಆಟ ನೋಡಲು ಸಾಧ್ಯ​ವಿಲ್ಲ. ಸಚಿ​ನ್‌ ವರ್ಸಸ್‌ ಅಖ್ತರ್‌ ಎನ್ನು​ವಂಥ ಸ್ಪರ್ಧೆ ಎಲ್ಲಿದೆ. ಬ್ಯಾಟ್ಸ್‌ಮನ್‌ಗಳಿಗೆ ಅನು​ಕೂ​ಲ​ವಾ​ಗು​ವಂತೆ ಆಟವನ್ನು ಬದ​ಲಿ​ಸ​ಲಾ​ಗಿದೆ’ ಎಂದು ಅಖ್ತರ್‌ ಹೇಳಿ​ದ್ದಾರೆ.

ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ; ವಧುವಿಲ್ಲದೆ ಮದವೆಯಂತೆ ಎಂದ ಅಕ್ತರ್!

ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ, ಒಂದು ಓವರ್‌ಗೆ ಒಂದೇ ಬೌನ್ಸರ್ ನಿಯಮವನ್ನು ಬದಲಿಸಿ ಎಂದು. ಇನ್ನಾದರೂ ಬೌನ್ಸರ್ ಹೆಚ್ಚು ಹಾಕಲು ಅವಕಾಶ ನೀಡುವ ಬಗ್ಗೆ ಐಸಿಸಿ ಗಮನ ಹರಿಸಲಿ. ನಾನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಲ್ಲಿದ್ದಿದ್ದರೆ ಏನಿಲ್ಲವೆಂದರೂ 12 ವೇಗದ ಬೌಲರ್‌ಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದೆ ಎಂದು ಅಖ್ತರ್ ಹೇಳಿದ್ದಾರೆ. 

ಶೋಯೆಬ್‌ ಅಖ್ತರ್‌ ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನಾಡಿ 247 ವಿಕೆಟ್ ಕಬಳಿಸಿದ್ದಾರೆ. ಇನ್ನು 46 ಟೆಸ್ಟ್ ಪಂದ್ಯಗಳನ್ನಾಡಿ 178 ವಿಕೆಟ್ ಪಡೆದಿದ್ದಾರೆ. 15 ಟಿ20 ಪಂದ್ಯಗಳಲ್ಲಿ 19 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗೆ ಅಟ್ಟಿದ್ದಾರೆ.


 

click me!