ಟಿ20 ವಿಶ್ವಕಪ್ ವೇಳಾಪಟ್ಟಿ ಖಚಿತಪಡಿಸಿದ ಐಸಿಸಿ

By Suvarna NewsFirst Published Jun 29, 2021, 5:23 PM IST
Highlights

* ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿ ಬಹಿರಂಗ

* ಭಾರತದಿಂದ ಯುಎಇಗೆ ಟಿ20 ವಿಶ್ವಕಪ್ ಟೂರ್ನಿ ಎತ್ತಂಗಡಿ

* ಅಕ್ಟೋಬರ್ 17ರಿಂದ ನವೆಂಬರ್ 14 ರ ವರೆಗೆ ನಡೆಯಲಿದೆ ಟಿ20 ವಿಶ್ವಕಪ್

ದುಬೈ(ಜೂ.29): ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಟೂರ್ನಿಯು ಯುಎಇ ಹಾಗೂ ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14 ರ ವರೆಗೆ ನಡೆಯಲಿದೆ ಎಂದು ಐಸಿಸಿ ಖಚಿತಪಡಿಸಿದೆ.

ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಬಿಸಿಸಿಐ ಉಳಿಸಿಕೊಂಡಿದ್ದು, ದುಬೈ ಅಂತಾರಾಷ್ಟ್ರೀಯ ಮೈದಾನ, ಅಬುಧಾಬಿಯ ಶೇಕ್ ಜಾಯೆದ್ ಮೈದಾನ, ಶಾರ್ಜಾ ಮೈದಾನ ಹಾಗೂ ಓಮನ್ ಕ್ರಿಕೆಟ್ ಅಕಾಡಮಿ ಹೀಗೆ 4 ಮೈದಾನಗಳಲ್ಲಿ ಟಿ20 ವಿಶ್ವಕಪ್ ಪಂದ್ಯಾಟ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ 8 ತಂಡಗಳು 4 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್ 12ಗೆ ಅರ್ಹತೆ ಪಡೆಯಲಿವೆ.

ನಮ್ಮ ಮೊದಲ ಆಧ್ಯತೆಯೇನಿದ್ದರೂ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಚ್ಚುಕಟ್ಟಾಗಿ ಹಾಗೂ ಸುರಕ್ಷಿತವಾಗಿ ಆಯೋಜಿಸುವುದಾಗಿದೆ. ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿಯು ಆಯೋಜನೆಯಾಗದೇ ಇರುವುದಕ್ಕೆ ನಮಗೆ ಬೇಸರವಿದೆ. ನಾವು ಬಿಸಿಸಿಐ ಜತೆ ನಿಕಟ ಸಂಬಂಧವನ್ನು ಹೊಂದಿದ್ದೇವೆ. ಯುಎಇ ಹಾಗೂ ಓಮನ್‌ ಕ್ರಿಕೆಟ್ ಸಂಸ್ಥೆಗಳು ಕ್ರಿಕೆಟ್ ಹಬ್ಬವನ್ನು ಅದ್ದೂರಿಯಾಗಿ ಸಂಭ್ರಮಿಸಲು ಎಲ್ಲಾ ಸಹಕಾರ ನೀಡಲಿದೆ ಎನ್ನುವ ವಿಶ್ವಾಸವಿದೆ ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್‌ ಅಲ್ಲಾರ್ಡ್ಸಿ ಹೇಳಿದ್ದಾರೆ.

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಐಸಿಸಿ ಟಿ20 ವಿಶ್ವಕಪ್‌ ಆರಂಭದ ದಿನಾಂಕ ಪ್ರಕಟ..!

🚨 ANNOUNCEMENT 🚨

Details 👉 https://t.co/FzfXTKb94M pic.twitter.com/8xEzsmhWWN

— ICC (@ICC)

ಸೋಮವಾರವಷ್ಟೇ(ಜೂ.28) ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಗೆ ತಿಳಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗಿದೆ.

click me!