8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥಿ

By Suvarna NewsFirst Published Jun 29, 2021, 4:17 PM IST
Highlights

* ಮಗುವಿನ ಜೀವ ಉಳಿಸುವ ಕಾರ್ಯಕ್ಕೆ ಮುಂದಾದ ಟಿಮ್ ಸೌಥಿ

* ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿರುವ 8 ವರ್ಷದ ಹೆಣ್ಣುಮಗು

* ಕಿವೀಸ್ ಎಲ್ಲಾ ಆಟಗಾರರ ಸಹಿಯಿರುವ ಜೆರ್ಸಿ ಹರಾಜಿಗಿಟ್ಟ ಟಿಮ್‌ ಸೌಥಿ

ಆಕ್ಲೆಂಡ್‌(ಜೂ.29): ಕ್ಯಾನ್ಸರ್ ವಿರುದ್ದ ಜೀವನ್ಮರಣ ಹೋರಾಟ ನಡೆಸುತ್ತಿರುವ 8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ ಮುಂದಾಗಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯೊಂದನ್ನು ಹರಾಜಿಗಿಟ್ಟಿದ್ದಾರೆ.
 
32 ವರ್ಷದ ಸೌಥಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಈ ಜೀವಪರ ಕಾಳಜಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೌಥಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ. ಈ ಜೆರ್ಸಿಯ ಮೇಲೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನಾಡಿದ ಎಲ್ಲಾ ನ್ಯೂಜಿಲೆಂಡ್ ಆಟಗಾರರ ಹಸ್ತಾಕ್ಷರವಿದೆ.

 
 
 
 
 
 
 
 
 
 
 
 
 
 
 

A post shared by Tim Southee (@tim_southee)

ಕೆಲವು ವರ್ಷಗಳ ಹಿಂದೆ ಟಿಮ್ ಸೌಥಿ ಕುಟುಂಬಕ್ಕೆ ಹೋಲಿ ಬಿಟ್ಟೀ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರ ತಿಳಿದಿದೆ. ಪ್ರಸ್ತುತ 8 ವರ್ಷದ ಬಿಟ್ಟೀ ತೀರಾ ಅಪರೂಪದ ಕ್ಯಾನ್ಸರ್ ಎನಿಸಿಕೊಂಡಿರುವ ನ್ಯೂರೋಬ್ಲಾಸ್ಟಮಾ ಎನ್ನುವ ರೋಗವಿರುವುದು 2018ರಲ್ಲಿ ಬೆಳಕಿಗೆ ಬಂದಿದೆ. ಅಲ್ಲಿಂದೀಚಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಟೆಸ್ಟ್‌ ವಿಶ್ವಕಪ್‌ ಗೆದ್ದ ಮೇಲೆ ಕಿವೀಸ್‌ ರಾತ್ರಿಯಿಡೀ ಪಾರ್ಟಿ!

ಇಂತಹ ಸಂಕಷ್ಟದ ಸಂದರ್ಭವನ್ನು ಎದುರಿಸುತ್ತಿರುವ ಬಿಟ್ಟೀ ಕುಟುಂಬಕ್ಕೆ ನೆರವಾಗಲು ಹೆಚ್ಚಿನ ಮೊತ್ತಕ್ಕೆ ಬಿಡ್‌ ಕರೆಯುವ ಮೂಲಕ ನೆರವಾಗಿ ಎಂದು ಟಿಮ್‌ ಸೌಥಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಹೋಲಿ ಬಿಟ್ಟೀ ಸಂಕಷ್ಟಕ್ಕೆ ಮಿಡಿಯುತ್ತಿರುವವರಲ್ಲಿ ಟಿಮ್‌ ಸೌಥಿ ಮೊದಲಿಗರೇನಲ್ಲ. ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ತಾವು ಬಳಸಿದ್ದ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಈ ಮೂಲಕ ಹೋಲಿ ಬಿಟ್ಟೀ ಕುಟುಂಬಕ್ಕೆ ನೆರವಾಗಿದ್ದರು.

ಕಿವೀಸ್‌ ವೇಗಿ ಟಿಮ್‌ ಸೌಥಿ TradeMe ಪೇಜ್‌ ಮೂಲಕ ತಮ್ಮ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ.  150ಕ್ಕೂ ಹೆಚ್ಚು ಮಂದಿ ಈ ಜೆರ್ಸಿ ಖರೀದಿಸಲು ಬಿಡ್‌ ಮಾಡಿದ್ದು, ಸದ್ಯ 7,500 ಡಾಲರ್‌ವರೆಗೂ ಹರಾಜು ಮುಂದುವರೆದಿದೆ.

ಭಾರತ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ವಿರುದ್ದ ನ್ಯೂಜಿಲೆಂಡ್ 8 ವಿಕೆಟ್‌ಗಳ ಗೆಲುವು ಸಾಧಿಸುವಲ್ಲಿ ಟಿಮ್‌ ಸೌಥಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಫೈನಲ್‌ ಪಂದ್ಯದಲ್ಲಿ 112 ರನ್‌ ನೀಡಿ 5 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿ 30 ರನ್ ಚಚ್ಚುವ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವು 32 ರನ್‌ಗಳ ಮುನ್ನಡೆ ಸಾಧಿಸಲು ಮಹತ್ವದ ಪಾತ್ರ ನಿಭಾಯಿಸಿದ್ದರು.

click me!