ದುಬೈನಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಕದನ!

Published : Feb 23, 2025, 09:34 AM ISTUpdated : Feb 23, 2025, 09:41 AM IST
ದುಬೈನಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಕದನ!

ಸಾರಾಂಶ

ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಭಾನುವಾರ ನಡೆಯಲಿದೆ. ಬಿಸಿಸಿಐ ಮತ್ತು ಪಿಸಿಬಿ ತಿಕ್ಕಾಟದ ನಡುವೆಯೂ ಈ ಪಂದ್ಯ ಕುತೂಹಲ ಕೆರಳಿಸಿದೆ. ಭಾರತ ಗೆಲ್ಲುವ ನೆಚ್ಚಿನ ತಂಡವಾದರೂ, ಪಾಕಿಸ್ತಾನದ ಬೌಲಿಂಗ್ ಪಡೆಯನ್ನು ಎದುರಿಸುವುದು ಸವಾಲಾಗಿದೆ. ಕೊಹ್ಲಿ 14,000 ರನ್ ಗಳಿಸಲು 15 ರನ್ ಬಾಕಿ ಇದ್ದು, ದುಬೈ ಕ್ರೀಡಾಂಗಣ ಭಾರತಕ್ಕೆ ಅದೃಷ್ಟ ತಾಣವಾಗಿದೆ. ಪಿಚ್ ನಿಧಾನಗತಿಯಲ್ಲಿರಲಿದ್ದು, ಸ್ಪಿನ್ನರ್ ಗಳು ನಿರ್ಣಾಯಕರಾಗಲಿದ್ದಾರೆ.

ದುಬೈ: ಕೇವಲ ಐಸಿಸಿ, ಏಷ್ಯಾ ಕ್ರಿಕೆಟ್‌ ಟೂರ್ನಿಗಳಲ್ಲಷ್ಟೇ ಸಿಗುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿಗೆ ಇದೀಗ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಚಾಂಪಿಯನ್ಸ್‌ ಟ್ರೋಫಿಯ ಬಹುನಿರೀಕ್ಷಿತ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಬದ್ಧವೈರಿಗಳ ಕದನ ಕ್ರಿಕೆಟ್‌ ಜಗತ್ತಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಟೂರ್ನಿಗೂ ಮುನ್ನ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಡುವಿನ ತಿಕ್ಕಾಟ, ಈ ಪಂದ್ಯಕ್ಕೆ ಮತ್ತಷ್ಟು ಕಿಚ್ಚು ಹಚ್ಚಲಿದೆ.

ಬಿಸಿಸಿಐನಿಂದಾಗಿ ಭಾರತ-ಪಾಕ್‌ ಪಂದ್ಯ ದುಬೈಗೆ ಸ್ಥಳಾಂತರಗೊಂಡಿದೆ ಎನ್ನುವ ಸಿಟ್ಟು ಪಿಸಿಬಿಗಿದ್ದು, ಟೂರ್ನಿಯಲ್ಲಿ ಚಾಂಪಿಯನ್‌ ಆಗದಿದ್ದರೂ ತೊಂದರೆಯಿಲ್ಲ, ಭಾರತ ವಿರುದ್ಧ ಗೆಲ್ಲಬೇಕು ಎನ್ನುವ ಮನಸ್ಥಿತಿಯಲ್ಲಿ ಪಾಕ್‌ ಆಟಗಾರರು ಇದ್ದರೂ ಅಚ್ಚರಿಯಿಲ್ಲ.

ಇನ್ನು, ಒಂದೆಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿ, ಸೆಮಿಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ. ಮತ್ತೊಂದೆಡೆ ತಾನೇ ಆತಿಥ್ಯ ವಹಿಸುತ್ತಿರುವ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕ ಎದುರಿಸುತ್ತಿರುವ ಪಾಕಿಸ್ತಾನ. ಈ ದೃಷ್ಟಿಕೋನವು ಪಂದ್ಯದ ರೋಚಕತೆಯನ್ನು ಹೆಚ್ಚಿಸಲಿದೆ.

ಆಸ್ಟ್ರೇಲಿಯಾಗೆ ಗೆಲುವಿನ ಜೋಶ್‌! ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ರನ್‌ ಚೇಸ್‌ ಮಾಡಿ ಗೆದ್ದ ಕಾಂಗರೂ ಪಡೆ!

ಸೂಪರ್‌ ಸ್ಟಾರ್‌ಗಳಿಂದ ಕೂಡಿರುವ ಭಾರತ ತಂಡ ಸಹಜವಾಗಿಯೇ ಗೆಲ್ಲುವ ಫೇವರಿಟ್‌ ಎನಿಸಿದರೆ, ತನ್ನ ವೇಗದ ಬೌಲಿಂಗ್‌ ಪಡೆಯ ಮೇಲೆ ಅತಿಯಾಗಿ ಅವಲಂಬಿತಗೊಂಡಿರುವ ಪಾಕಿಸ್ತಾನ, ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಲು ಹಪಹಪಿಸುತ್ತಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಆದರೂ ಒಬ್ಬ ಎಡಗೈ ಸ್ಪಿನ್ನರ್‌ ಬದಲು ವಾಷಿಂಗ್ಟನ್‌ಗೆ ಸ್ಥಾನ ಸಿಗಬಹುದು. ಇನ್ನು ಪಾಕಿಸ್ತಾನ ಗಾಯಾಳು ಫಖರ್‌ ಜಮಾನ್‌ ಬದಲಿಗೆ ಇಮಾಮ್‌ ಉಲ್‌-ಹಕ್‌ರನ್ನು ಆಡಿಸಲಿದೆ.

ಒಟ್ಟು ಮುಖಾಮುಖಿ: 153

ಭಾರತ: 57

ಪಾಕಿಸ್ತಾನ: 73

ಫಲಿತಾಂಶವಿಲ್ಲ: 05

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭ್‌ಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್‌ ಯಾದವ್.

ಪಾಕಿಸ್ತಾನ: ಇಮಾಮ್‌ ಉಲ್ ಹಕ್, ಬಾಬರ್‌ ಅಹಮದ್, ಸೌದ್ ಶಕೀಲ್‌, ಮೊಹಮ್ಮದ್ ರಿಜ್ವಾನ್‌ (ನಾಯಕ), ಸಲ್ಮಾನ್‌, ತಯ್ಯಬ್‌, ಖುಷ್‌ದಿಲ್‌, ಶಾಹೀನ್‌ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್‌, ಅಬ್ರಾರ್‌.

'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎದುರು ಪಾಕ್ ಗೆಲ್ಲಲಿ': ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು!

ನೇರ ಪ್ರಸಾರ: ಜಿಯೋ ಹಾಟ್‌ಸ್ಟಾರ್, ಸ್ಟಾರ್ ಸ್ಪೋರ್ಟ್ಸ್

ಸಮಯ: ಮಧ್ಯಾಹ್ನ 2.30

ಪಿಚ್‌ ರಿಪೋರ್ಟ್‌

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಬ್ಬನಿಯ ಸಮಸ್ಯೆ ಎದುರಾಗಲಿಲ್ಲ. ಈ ಪಂದ್ಯದಲ್ಲೂ ಅದೇ ರೀತಿಯ ವಾತಾವರಣ ಇರುವ ನಿರೀಕ್ಷೆ ಇದ್ದು, ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡುವ ಸಾಧ್ಯತೆಯೇ ಹೆಚ್ಚು. ಪಿಚ್‌ ನಿಧಾನಗತಿಯಲ್ಲಿ ವರ್ತಿಸಲಿದ್ದು, ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

14,000 ರನ್‌ ಹೊಸ್ತಿಲಲ್ಲಿ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ 14000 ರನ್‌ ಪೂರೈಸಲು ವಿರಾಟ್‌ ಕೊಹ್ಲಿಗೆ ಕೇವಲ 15 ರನ್‌ ಬೇಕಿದೆ. ಈ ಪಂದ್ಯದಲ್ಲಿ ಆ ಮೈಲಿಗಲ್ಲು ತಲುಪಲು ಕೊಹ್ಲಿ ಕಾತರಿಸುತ್ತಿದ್ದಾರೆ.

ದುಬೈ ಭಾರತದ ಅದೃಷ್ಟ ತಾಣ!

ದುಬೈ ಅಂ.ರಾ. ಕ್ರೀಡಾಂಗಣದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಇಲ್ಲಿ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದೆ. ಮತ್ತೊಂದೆಡೆ ಪಾಕಿಸ್ತಾನ ಇಲ್ಲಿ ಆಡಿರುವ 22ರಲ್ಲಿ 13ರಲ್ಲಿ ಸೋತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

RCB vs CSK: 60 ಸೆಕೆಂಡ್‌ನಲ್ಲೇ ಆರ್‌ಸಿಬಿ-ಚೆನ್ನೈ ಟಿಕೆಟ್‌ ಖಾಲಿ!
IPL 2026: ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!