ಆಸ್ಟ್ರೇಲಿಯಾಗೆ ಗೆಲುವಿನ ಜೋಶ್‌! ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ರನ್‌ ಚೇಸ್‌ ಮಾಡಿ ಗೆದ್ದ ಕಾಂಗರೂ ಪಡೆ!

Published : Feb 23, 2025, 09:20 AM ISTUpdated : Feb 23, 2025, 09:37 AM IST
ಆಸ್ಟ್ರೇಲಿಯಾಗೆ ಗೆಲುವಿನ ಜೋಶ್‌! ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ರನ್‌ ಚೇಸ್‌ ಮಾಡಿ ಗೆದ್ದ ಕಾಂಗರೂ ಪಡೆ!

ಸಾರಾಂಶ

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದಿದೆ. ಇಂಗ್ಲೆಂಡ್ 50 ಓವರ್‌ಗಳಲ್ಲಿ 351 ರನ್ ಗಳಿಸಿತು. ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಅವರ ಶತಕದ ನೆರವಿನಿಂದ 47.3 ಓವರ್‌ಗಳಲ್ಲಿ 356 ರನ್ ಗಳಿಸಿ ಜಯ ಸಾಧಿಸಿತು. ಇದು ಐಸಿಸಿ ಏಕದಿನ ಟೂರ್ನಿಗಳಲ್ಲಿ ಗರಿಷ್ಠ ರನ್ ಚೇಸ್ ಆದ ದಾಖಲೆಯಾಗಿದೆ. ಈ ಹಿಂದೆ ಪಾಕಿಸ್ತಾನ 345 ರನ್ ಚೇಸ್ ಮಾಡಿತ್ತು.

ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿಯಲ್ಲಿ ತನ್ನ ಪ್ರಮುಖ ವೇಗಿಗಳಿಲ್ಲದೆ ಕಣಕ್ಕಿಳಿದರೂ, ಬ್ಯಾಟರ್‌ಗಳ ಸಾಹಸದಿಂದ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಜೋಶ್‌ ಇಂಗ್ಲಿಸ್‌ರ ಸ್ಫೋಟಕ ಶತಕ, ಬದ್ಧವೈರಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಲು ನೆರವಾಯಿತು.

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಬೆನ್‌ ಡಕೆಟ್‌ರ ಆಕರ್ಷಕ ಶತಕದ ನೆರವಿನಿಂದ 50 ಓವರಲ್ಲಿ 8 ವಿಕೆಟ್‌ಗೆ 351 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಇನ್ನೂ 15 ಎಸೆತ ಬಾಕಿ ಇರುವಂತೆಯೇ ಗೆದ್ದು ಸಂಭ್ರಮಿಸಿತು.

ಇಂಗ್ಲೆಂಡ್‌ ತನ್ನ ಮೊದಲೆರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ, ಡಕೆಟ್‌ ಹಾಗೂ ಜೋ ರೂಟ್‌ರ ಜೊತೆಯಾಟದ ನೆರವಿನಿಂದ ಚೇತರಿಸಿಕೊಂಡಿತು. 68 ರನ್‌ ಗಳಿಸಿದ ರೂಟ್‌, 3ನೇ ವಿಕೆಟ್‌ಗೆ 158 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಆರಂಭಿಕನಾಗಿ ಕಣಕ್ಕಿಳಿದ ಡಕೆಟ್‌ 48ನೇ ಓವರ್‌ ವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ 143 ಎಸೆತದಲ್ಲಿ 17 ಬೌಂಡರಿ, 3 ಸಿಕ್ಸರ್‌ನೊಂದಿಗೆ 165 ರನ್‌ ಚಚ್ಚಿದರು. ಆಸ್ಟ್ರೇಲಿಯಾ 7 ಬೌಲರ್‌ಗಳನ್ನು ಬಳಕೆ ಮಾಡಿತು.

ಇಂಗ್ಲೆಂಡ್-ಆಸೀಸ್ ಪಂದ್ಯದ ವೇಳೆ ಎಡವಟ್ಟು; ಪಾಕ್ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ! ವಿಡಿಯೋ ವೈರಲ್

ದೊಡ್ಡ ಗುರಿ ಬೆನ್ನತ್ತಲು ಇಳಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ ಎದುರಾಯಿತು. ಅನುಭವಿ ಬ್ಯಾಟರ್‌ಗಳಾದ ಟ್ರ್ಯಾವಿಸ್‌ ಹೆಡ್‌ (06) ಹಾಗೂ ನಾಯಕ ಸ್ಟೀವ್‌ ಸ್ಮಿತ್‌ (05) ಬೇಗನೆ ಔಟಾದರು. 27 ರನ್‌ಗೆ 2 ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ ಆತಂಕಕ್ಕೆ ಸಿಲುಕಿತು. 3ನೇ ವಿಕೆಟ್‌ಗೆ ಮ್ಯಾಥ್ಯೂ ಶಾರ್ಟ್‌ (63) ಹಾಗೂ ಮಾರ್ನಸ್‌ ಲಬುಶೇನ್‌ (47) ಕಲೆಹಾಕಿದ 95 ರನ್‌ ಆಸೀಸ್‌ ಜಯದಾಸೆಯನ್ನು ಜೀವಂತವಾಗಿರಿಸಿತು. ಆದರೆ ಇವರಿಬ್ಬರು ಕೇವಲ 14 ರನ್‌ ಅಂತರದಲ್ಲಿ ವಿಕೆಟ್‌ ಕಳೆದುಕೊಂಡಾ ಆಸೀಸ್‌ ಮತ್ತೊಮ್ಮೆ ಹಿನ್ನಡೆ ಅನುಭವಿಸಿತು.

5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಇಂಗ್ಲಿಸ್‌ ಹಾಗೂ 6ನೇ ಕ್ರಮಾಂಕದಲ್ಲಿ ಅಲೆಕ್ಸ್‌ ಕೇರಿ 5ನೇ ವಿಕೆಟ್‌ಗೆ 146 ರನ್‌ ಸೇರಿಸಿ, ತಂಡವನ್ನು ಜಯದ ಸನಿಹಕ್ಕೆ ತಂದರು. ಕೇರಿ 69 ರನ್‌ ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 15 ಎಸೆತದಲ್ಲಿ 32 ರನ್‌ ಸಿಡಿಸಿ, ಇಂಗ್ಲೆಂಡ್‌ ಗೆಲುವಿಗೆ ನೆರವಾದರು. ಇಂಗ್ಲಿಸ್‌ 86 ಎಸೆತದಲ್ಲಿ 8 ಬೌಂಡರಿ, 6 ಸಿಕ್ಸರ್‌ನೊಂದಿಗೆ 120 ರನ್‌ ಸಿಡಿಸಿ ಔಟಾಗದೆ ಉಳಿದರು.

ಇಂಡೋ-ಪಾಕ್ ಹೈವೋಲ್ಟೇಜ್ ಫೈಟ್; ದುಬೈನಲ್ಲಿ ಪಾಕ್‌ ಎದುರು ಟೀಂ ಇಂಡಿಯಾ ರೆಕಾರ್ಡ್ಸ್ ಹೇಗಿದೆ?

ಸ್ಕೋರ್‌: ಇಂಗ್ಲೆಂಡ್‌ 50 ಓವರಲ್ಲಿ 351/8 (ಡಕೆಟ್‌ 165, ರೂಟ್‌ 68, ಡ್ವಾರ್‌ಷಿಯಸ್‌ 3-66), ಆಸ್ಟ್ರೇಲಿಯಾ 47.3 ಓವರಲ್ಲಿ 356/5 (ಇಂಗ್ಲಿಸ್‌ 120*, ಕೇರಿ 69, ರಶೀದ್‌ 1-47)

ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ರನ್‌ ಚೇಸ್‌!

ಆಸ್ಟ್ರೇಲಿಯಾ 352 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಹೊಸ ದಾಖಲೆ ಬರೆದಿದೆ. ಇದು ಐಸಿಸಿ ಏಕದಿನ ಟೂರ್ನಿಗಳಲ್ಲೇ ಗರಿಷ್ಠ ರನ್‌ ಬೆನ್ನತ್ತಿದ ದಾಖಲೆ ಎನಿಸಿದೆ. 2023ರಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 345 ರನ್‌ ಗುರಿ ಬೆನ್ನತ್ತಿ ಗೆದ್ದಿದ್ದು ಏಕದಿನ ವಿಶ್ವಕಪ್‌ನಲ್ಲಿರುವ ದಾಖಲೆ ಆದರೆ, 2017ರಲ್ಲಿ ಭಾರತ ವಿರುದ್ಧ ಶ್ರೀಲಂಕಾ 322 ರನ್‌ ಬೆನ್ನತ್ತಿ ಗೆದ್ದಿದ್ದು ಚಾಂಪಿಯನ್ಸ್‌ ಟ್ರೋಫಿಯ ದಾಖಲೆ ಎನಿಸಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ