ಟೆಸ್ಟ್ ವಿಶ್ವಕಪ್ ಫೈನಲ್‌ ರೇಸ್‌ನಲ್ಲಿದ್ದ ನ್ಯೂಜಿಲೆಂಡ್‌ ತಂಡಕ್ಕೆ ಐಸಿಸಿ ಬಿಗ್ ಶಾಕ್!

By Naveen Kodase  |  First Published Dec 4, 2024, 1:03 PM IST

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಐಸಿಸಿ ಮತ್ತೊಂದು ಬರೆ ಹಾಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 


ದುಬೈ: ಇಂಗ್ಲೆಂಡ್ ವಿರುದ್ಧ ಕಳೆದ ವಾರ ನಡೆದ ಮೊದಲ ಟೆಸ್ಟ್‌ನಲ್ಲಿ ಸೋಲುಂಡು ಆಘಾತಕ್ಕೊಳಗಾಗಿದ್ದ ನ್ಯೂಜಿಲೆಂಡ್‌ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಮೊದಲ ಟೆಸ್ಟ್‌ನಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 3 ಅಂಕಗಳನ್ನು ಕಡಿತಗೊಳಿಸಿದೆ. ಈ ಪರಿಣಾಮ, ವಿಶ್ವಚಾಂಪಿಯನ್‌ಶಿಪ್ ಫೈನಲ್ ರೇಸ್ ನಿಂದ ನ್ಯೂಜಿಲೆಂಡ್ ಬಹುತೇಕ ಹೊರಬಿದ್ದಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಎರಡೂ ತಂಡಗಳಿಗೆ ತಲಾ 3 ಅಂಕ ಹಾಗೂ ಆಟಗಾರರ ಪಂದ್ಯದ ಸಂಭಾವನೆಯ ಶೇ.15ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಿವೀಸ್‌ಗೆ ಅಂಕ ಕಡಿತಗೊಂಡಿದ್ದು ಭಾರತ ತಂಡಕ್ಕೆ ಖುಷಿಯ ವಿಚಾರವಾಗಿದ್ದು, ಫೈನಲ್ ಹಾದಿಯಲ್ಲಿ ಒಂದು ಪ್ರತಿಸ್ಪರ್ಧಿ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ 61.11 ಗೆಲುವಿನ ಪ್ರತಿಶತ ದೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿದ್ದು, ನ್ಯೂಜಿಲೆಂಡ್ 47.92 ಪ್ರತಿಶತದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ವಿರುದ್ಧ ಬಾಕಿ ಇರುವ ಇನ್ನೆರಡು ಟೆಸ್ಟ್‌ಗೆದ್ದರೂ ಕಿವೀಸ್‌ನ ಗೆಲುವಿನ ಪ್ರತಿಶತ ಗರಿಷ್ಠ 55.36 ತಲುಪಬಹುದು. ದಕ್ಷಿಣ ಆಫ್ರಿಕಾ (59.26), ಆಸ್ಟ್ರೇಲಿಯಾ (57.26) ಹಾಗೂ ಶ್ರೀಲಂಕಾ (50) ಕ್ರಮವಾಗಿ 2, 3 ಹಾಗೂ 4ನೇ ಸ್ಥಾನಗಳಲ್ಲಿವೆ.

Latest Videos

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರ ಊರ್ವಿಲ್ ಪಟೇಲ್, ಟಿ20 ಹೊಸ ದಾಖಲೆ ನಿರ್ಮಾಣ!

ಪಿಂಕ್ ಬಾಲ್ ಟೆಸ್ಟ್‌ಗೆ ಕಠಿಣ ಅಭ್ಯಾಸ ಆರಂಭಿಸಿದ ಭಾರತ

undefined

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಆಡಲು ಮಂಗಳವಾರ ಅಡಿಲೇಡ್‌ಗೆ ಬಂದಿಳಿದ ಭಾರತ ತಂಡ, ಸಮಯ ವ್ಯರ್ಥ ಮಾಡದೆ ನೆಟ್ ಅಭ್ಯಾಸ ಆರಂಭಿಸಿತು. ಕ್ಯಾನ್‌ಬೆರ್ರಾದಲ್ಲಿ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿ ರುವ ಭಾರತ, ಮಂಗಳವಾರ ಕಠಿಣ ಅಭ್ಯಾಸ ನಡೆಸಿತು. ಪ್ರಮುಖವಾಗಿ ನಾಯಕ ರೋಹಿತ್‌ ಶರ್ಮಾ, 4 ಗಂಟೆಗೂ ಹೆಚ್ಚು ಕಾಲ ನೆಟ್‌ನಲ್ಲಿ ಬೆವರಿಳಿಸಿದರು.

ಎಲ್ಲರಿಗಿಂತ 1 ಗಂಟೆ ಮೊದಲೇ ನೆಟ್‌ಗೆ ಆಗಮಿಸಿದ ರೋಹಿತ್ ಶರ್ಮಾ, ನಿರಂತರವಾಗಿ ಬ್ಯಾಟ್ ಮಾಡಿದರು. ಭಾರತ 4 ನೆಟ್‌ಗಳಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿತು. ಮೊದಲ ನೆಟ್‌ನಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ ಆಡಿದರೆ, 2ನೇ ನೆಟ್ಟಿನಲ್ಲಿ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿದರು. 3ನೇ ನೆಟ್ಟಿನಲ್ಲಿ ರೋಹಿತ್‌ ಶರ್ಮಾ ಹಾಗೂ ರಿಷಭ್ ಪಂತ್, 4ನೇ ನೆಟ್ಟಿನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಆಡಿದರು. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಪಿಂಕ್ ಬಾಲ್ ಪಂದ್ಯದಲ್ಲಿ ಭಾರತದ 1-8ರ ವರೆಗಿನ ಬ್ಯಾಟಿಂಗ್ ಕ್ರಮಾಂಕ ಇದೇ ಕ್ರಮದಲ್ಲಿ ಇರಲಿದೆಯೇ ಎನ್ನುವ ಕುತೂಹಲ ಮೂಡಿತು. ಆಕಾಶ್‌ದೀಪ್, ಮುಕೇಶ್ ಕುಮಾರ್, ಹರ್ಷಿತ್ ರಾಣಾ ತಮ್ಮ ವೇಗದ ಬೌಲಿಂಗ್ ನಿಂದ ಬ್ಯಾಟರ್‌ಗಳಿಗೆ ಸವಾಲೆಸೆದರು. ಡಿಸೆಂಬರ್‌ 6ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದೆ.

click me!