ಇನ್ನು ಪಂದ್ಯ ಮುಕ್ತಾಯದ ಬಳಿಕ ಪಾಕಿಸ್ತಾನದ ದಿಗ್ಗಜ ಬೌಲರ್ ವಕಾರ್ ಯೂನಿಸ್, ತಮ್ಮನ್ನು ತಾವೇ ತಮಾಷೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಕಾರ್ ಯೂನಿಸ್ ಅವರನ್ನು ಉದ್ದೇಶಿಸಿ ನೀವು ಪಾಕಿಸ್ತಾನಿಯಾಗಿ ಎಂದು ಶೇನ್ ವಾಟ್ಸನ್ ಹಾಗೂ ಆರೋನ್ ಫಿಂಚ್ ಮಾತನಾಡಿದಾಗ ವಕಾರ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಬೆಂಗಳೂರು(ಅ.22): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು ಹೀನಾಯ ಕಂಡಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಆಸೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 367 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಕೇವಲ 305 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು.
ಇನ್ನು ಪಂದ್ಯ ಮುಕ್ತಾಯದ ಬಳಿಕ ಪಾಕಿಸ್ತಾನದ ದಿಗ್ಗಜ ಬೌಲರ್ ವಕಾರ್ ಯೂನಿಸ್, ತಮ್ಮನ್ನು ತಾವೇ ತಮಾಷೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಕಾರ್ ಯೂನಿಸ್ ಅವರನ್ನು ಉದ್ದೇಶಿಸಿ ನೀವು ಪಾಕಿಸ್ತಾನಿಯಾಗಿ ಎಂದು ಶೇನ್ ವಾಟ್ಸನ್ ಹಾಗೂ ಆರೋನ್ ಫಿಂಚ್ ಮಾತನಾಡಿದಾಗ ವಕಾರ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
"ನಾನು ಅರ್ಧ ಆಸೀಸಿಗ, ಹೀಗಾಗಿ ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ" ಎಂದು ಹೇಳಿ ಸುದ್ದಿಯಾಗಿದ್ದಾರೆ.
Waqar Younis said, "I'm a half Aussie, don't just call me a Pakistani". pic.twitter.com/BTErh7D66z
— Mufaddal Vohra (@mufaddal_vohra)ವಕಾರ್ ಯೂನಿಸ್ ಹೀಗೆ ಹೇಳಲು ಕಾರಣವೂ ಇದೆ: ಹೌದು, ವಕಾರ್ ಯೂನಿಸ್ ಹೀಗನ್ನಲು ಕಾರಣವೂ ಇದೆ. ಯಾಕೆಂದರೆ ವಕಾರ್ ಯೂನಿಸ್ ಮದುವೆಯಾಗಿರುವುದು ಪಾಕಿಸ್ತಾನಿ ಮೂಲದ ಆಸ್ಟ್ರೇಲಿಯಾದ ಡಾಕ್ಟರ್ ಪರ್ಯಾಲ್ ಎನ್ನುವವರನ್ನು. ವಕಾರ್ ಯೂನಿಸ್ ಅವರ ಮೂರು ಮಕ್ಕಳು ಹಾಗೂ ಮತ್ತವರ ಕುಟುಂಬ ನ್ಯೂ ಸೌಥ್ ವೇಲ್ಸ್‌ನ ಕ್ಯಾಸಲ್ ಹಿಲ್ ಎನ್ನುವ ನಗರದಲ್ಲಿ ವಾಸವಾಗಿದ್ದಾರೆ. ಈ ಕಾರಣಕ್ಕಾಗಿಯೇ ವಕಾರ್ ತಾವು ಅರ್ಧ ಆಸೀಸಿಗ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; 2 ಮೇಜರ್ ಚೇಂಜ್
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡುವ ಪಾಕಿಸ್ತಾನದ ನಿರ್ಧಾರ ಕೈಹಿಡಿಯಲಿಲ್ಲ. ವಾರ್ನರ್ ಹಾಗೂ ಮಾರ್ಷ್‌ರ ಸ್ಫೋಟಕ ಶತಕಗಳ ನೆರವಿನಿಂದ ಆಸೀಸ್ 50 ಓವರಲ್ಲಿ 9 ವಿಕೆಟ್‌ಗೆ 367 ರನ್ ಚಚ್ಚಿತು. ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ 45.3 ಓವರಲ್ಲಿ 305 ರನ್‌ಗೆ ಆಲೌಟ್ ಆಯಿತು.
ಇಮಾಮ್ ಉಲ್-ಹಕ್ ಹಾಗೂ ಅಬ್ದುಲ್ಲಾ ಶಫೀಕ್ ಮೊದಲ ವಿಕೆಟ್‌ಗೆ 134 ರನ್ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಮಾರ್ಕಸ್ ಸ್ಟೋಯ್ನಿಸ್ ಆರಂಭಿಕರನ್ನು ಪೆವಿಲಿಯನ್‌ಗಟ್ಟಿದರೆ, ಆ್ಯಡಂ ಜಂಪಾ ತಂಡದ ಬ್ಯಾಟಿಂಗ್ ಆಧಾರಸ್ತಂಭಗಳಾದ ಬಾಬರ್ ಆಜಂ, ಮೊಹಮದ್ ರಿಜ್ವಾನ್‌ರನ್ನು ಔಟ್ ಮಾಡುವುದರ ಜೊತೆ ಅಪಾಯಕಾರಿ ಇಫ್ತಿಕಾರ್ ಅಹ್ಮದ್‌ರನ್ನೂ ಔಟ್ ಮಾಡಿ ಆಸೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಾಕಿಸ್ತಾನ ಪೂರ್ತಿ 50 ಓವರ್ ಬ್ಯಾಟ್ ಮಾಡದೆ ಸೋಲೊಪ್ಪಿಕೊಂಡಿತು. ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿ ಮಿಂಚಿದರು.
ಎಚ್ಚರಿಕೆಯ ಆರಂಭ: ಆಸ್ಟ್ರೇಲಿಯಾ ಮೊದಲ 5 ಓವರ್ ಬಹಳ ಎಚ್ಚರಿಕೆಯಿಂದ ಆಡಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಡಿಆರ್‌ಎಸ್ ವ್ಯರ್ಥ ಮಾಡಿದ ಪಾಕಿಸ್ತಾನ, 5ನೇ ಓವರ್‌ನ 3ನೇ ಎಸೆತದಲ್ಲಿ ವಾರ್ನರ್‌ಗೆ ಜೀವದಾನ ನೀಡಿತು. ಈ ಎರಡು ಸನ್ನಿವೇಶಗಳು ಪಾಕ್ ಆತ್ಮವಿಶ್ವಾಸವನ್ನು ಕುಗ್ಗಿಸಿದರೆ, ಆಸೀಸ್ ತನ್ನ ಅಬ್ಬರವನ್ನು ಆರಂಭಿಸಿತು. 10 ಓವರ್ ಅಂತ್ಯಕ್ಕೆ 82 ರನ್ ಗಳಿಸಿದ ಆಸ್ಟ್ರೇಲಿಯಾ, ಆ ನಂತರ ಹಿಂದಿರುಗಿ ನೋಡಲಿಲ್ಲ.
ಪಾರ್ಲಿಮೆಂಟ್ ಎಲೆಕ್ಷನ್ ಇದ್ರೂ ಭಾರತದಲ್ಲೇ ನಡೆಯಲಿದೆ 2024ರ ಐಪಿಎಲ್..!
ವಾರ್ನರ್ ಹಾಗೂ ಮಾರ್ಷ್, ಪಾಕ್ ಬೌಲರ್‌ಗಳ ಜೀವ ಹಿಂಡಿದರು. ಹ್ಯಾರಿಸ್ ರೌಫ್‌ರ ಮೊದಲ ಓವರಲ್ಲೇ 24 ರನ್ ಚಚ್ಚಿದ ಈ ಇಬ್ಬರು, ನೋಡ ನೋಡುತ್ತಿದ್ದಂತೆ ಶತಕದತ್ತ ದಾಪುಗಾಲಿಟ್ಟರು. ಸತತ ಎಸೆತಗಳಲ್ಲಿ ಶತಕ ಸಂಭ್ರಮ ಆಚರಿಸಿ ತಂಡದ ಮೊತ್ತವನ್ನು 250 ರನ್ ದಾಟಿಸಿದರು.
ಮೊದಲ ವಿಕೆಟ್ ಜೊತೆಯಾಟ 259 ರನ್‌ಗೆ ಕೊನೆಗೊಂಡಿತು. ಮಾರ್ಷ್ 108 ಎಸೆತದಲ್ಲಿ 10 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 121 ರನ್ ಸಿಡಿಸಿ ಕ್ರೀಸ್ ತೊರೆದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಆರ್‌ಸಿಬಿ ತಾರೆ ಮ್ಯಾಕ್ಸ್‌ವೆಲ್ ಮೊದಲ ಎಸೆತದಲ್ಲೇ ಔಟಾದರು. ಸ್ಮಿತ್, ಸ್ಟೋಯ್ನಿಸ್, ಇಂಗ್ಲಿಸ್‌ರಿಂದಲೂ ದೊಡ್ಡ ಆಟ ಮೂಡಿಬರಲಿಲ್ಲ. ದ್ವಿಶತಕದ ನಿರೀಕ್ಷೆಯಲ್ಲಿದ್ದ ವಾರ್ನರ್ 124 ಎಸೆತದಲ್ಲಿ 163 ರನ್ ಚಚ್ಚಿ ವಿಕೆಟ್ ಕಳೆದುಕೊಂಡರು. ಅವರ ಇನ್ನಿಂಗ್ಸಲ್ಲಿ 14 ಬೌಂಡರಿ, 9 ಸಿಕ್ಸರ್‌ಗಳಿದ್ದವು. 400 ರನ್ ದಾಟುವ ನಿರೀಕ್ಷೆ ಮೂಡಿಸಿದ್ದ ಆಸೀಸ್, ಕೊನೆಯ 10 ಓವರಲ್ಲಿ 70 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. ಶಾಹೀನ್ ಶಾ 5, ಹ್ಯಾರಿಸ್ ರೌಫ್ 3 ವಿಕೆಟ್ ಕಿತ್ತರು.