ಕ್ರಿಕೆಟ್ ಅಂಪೈರ್ ಆಗೋದು ಇಷ್ಟು ಸುಲಭ ನಾ? ಒಂದು ಮ್ಯಾಚ್‌ಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಡೀಟೈಲ್ಸ್‌

By Naveen Kodase  |  First Published Sep 12, 2024, 5:36 PM IST

ಕ್ರಿಕೆಟ್‌ನಲ್ಲಿ ಆಟಗಾರರು ಎಷ್ಟು ಮುಖ್ಯವೋ ಅಂಪೈರ್‌ಗಳು ಕೂಡಾ ಅಷ್ಟೇ ಮುಖ್ಯ. ಅಂಪೈರ್ ಆಗೋದು ಹೇಗೆ? ಏನೆಲ್ಲಾ ಅರ್ಹತೆ ಇರಬೇಕು? ಅಂಪೈರ್‌ಗೆ ಒಂದು ಮ್ಯಾಚ್‌ಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್


ಬೆಂಗಳೂರು: ಕ್ರಿಕೆಟ್ ಕ್ರೀಡೆಯನ್ನು ಭಾರತದಲ್ಲಿ ಒಂದು ಧರ್ಮದಂತೆ ಆರಾಧಿಸುವ ದೊಡ್ಡ ವರ್ಗವೇ ಇದೆ. ಪ್ರತಿಯೊಬ್ಬ ಯುವ ಕ್ರಿಕೆಟಿಗನೂ ಒಂದಲ್ಲಾ ಒಂದು ದಿನ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂದು ಕನಸು ಕಾಣುತ್ತಿರುತ್ತಾನೆ. ಕ್ರಿಕೆಟ್‌ನಲ್ಲಿರುವ ಹಣ ಹಾಗೂ ಗ್ಲಾಮರ್ ನೋಡಿ ಎಲ್ಲರೂ ಬಹುಬೇಗ ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗಿಬಿಡುತ್ತಾರೆ. ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರಿಕೆಟಿಗೂ ಕೋಟಿ ಲೆಕ್ಕದಲ್ಲಿ ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಇನ್ನು ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲೂ ಆಟಗಾರರ ಮೇಲೆ ಹಣದ ಹೊಳೆಯನ್ನೇ ಹರಿಸಲಾಗುತ್ತದೆ.

ಅಂದಹಾಗೆ ಕ್ರಿಕೆಟ್ ಮೈದಾನದಲ್ಲಿ ಕೇವಲ ಕ್ರಿಕೆಟಿಗರು ಮಾತ್ರ ಇರುವುದಿಲ್ಲ, ಬದಲಾಗಿ ಆಟಗಾರರ ಜತೆಗೆ ಅಂಪೈರ್‌ಗಳು ಕೂಡಾ ಕ್ರಿಕೆಟ್ ಪಂದ್ಯದಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಾರೆ. ಕ್ರಿಕೆಟ್ ನೋಡುವ ಬಹುತೇಕ ಮಂದಿಗೆ ಈ ಅಂಪೈರ್‌ಗಳು ಹೇಗೆ ಆಗುತ್ತಾರೆ?. ಅವರಿಗೆ ಒಂದು ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದರೆ ಎಷ್ಟು ಸಂಬಳ ಸಿಗುತ್ತದೆ? ಅಂಪೈರ್‌ ಆಗಲು ಇರುವ ಅರ್ಹತೆಗಳೇನು? ಎಂದು ನಿಮಗೂ ಅನಿಸಿರಬಹುದು. ಬನ್ನಿ ನಾವಿಂದು ನಿಮ್ಮ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ.

Latest Videos

undefined

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ಕೊಹ್ಲಿ, ಧೋನಿಗಿಲ್ಲ ಮೊದಲ ಸ್ಥಾನ!

ಕೇವಲ ಮಾಜಿ ಕ್ರಿಕೆಟಿಗರು ಮಾತ್ರ ಅಂಪೈರ್ ಆಗ್ತಾರಾ?

ಖಂಡಿತವಾಗಿಯೂ ಇಲ್ಲ. ಅಂಪೈರ್ ಆಗಬೇಕೆಂದರೆ ಆತ ದೇಶಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟಿಗನೇ ಆಗಿರಬೇಕು ಎಂದು ಷರತ್ತುಗಳೇನೂ ಇರುವುದಿಲ್ಲ. ಆದರೆ ಅಂಪೈರ್ ಆಗಬೇಕೆಂದರೆ ಆತನಿಗೆ ಕ್ರಿಕೆಟ್ ರೂಲ್ಸ್‌ ಕುರಿತಾಗಿ ಸ್ಪಷ್ಟ ಮಾಹಿತಿ ಇರಬೇಕಾಗುತ್ತದೆ. ಇದರ ಜತೆಗೆ ಅಂಪೈರ್‌ಗೆ ಫಿಟ್ನೆಸ್ ಕೂಡಾ ಸಾಕಷ್ಟು ಮುಖ್ಯವಾಗಿ ಬೇಕಾಗುತ್ತದೆ. ಅಂಪೈರ್‌ ಆದವರು ಇಡೀ ಪಂದ್ಯ ಮುಗಿಯುವವರೆಗೂ ನಿಂತೇ ಇರಬೇಕಾಗುತ್ತದೆ. ಇದೆಲ್ಲದರ ಜತೆಗೆ ಪ್ರಮುಖವಾಗಿ ಅಂಪೈರ್ ಆದವರಿಗೆ ಕಣ್ಣು ಹಾಗೂ ಕಿವಿ ಶಾರ್ಪ್ ಆಗಿರಬೇಕಾಗುತ್ತದೆ.

ಅಂಪೈರ್ ಆಗೋದು ಹೇಗೆ?

ಅಂಪೈರ್ ಆಗಬೇಕೆಂದರೆ, ಆ ವ್ಯಕ್ತಿಯು ಮೊದಲಿಗೆ ಒಂದು ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯಮಟ್ಟದ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಅನುಭವದ ಆಧಾರದಲ್ಲಿ ಈ ನೋಂದಣಿಯನ್ನು ಮಾಡಲಾಗುತ್ತದೆ. ರಾಜ್ಯಮಟ್ಟದಲ್ಲಿ ನೋಂದಣಿಯಾದ ನಂತರ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಗುತ್ತದೆ. ಇದಾದ ಬಳಿಕ ಅನುಭವದ ಆಧಾರದ ಮೇಲೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಂಪೈರ್‌ಗಾಗಿ ಬಿಸಿಸಿಐಗೆ ನಿಮ್ಮ ಹೆಸರನ್ನು ಶಿಫಾರಸು ಮಾಡುತ್ತದೆ.

ವಿಶ್ವಕಪ್ ಗೆಲ್ಲಲು ಮ್ಯಾಚ್‌ಗೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸೆಕ್ಸ್‌ ಮಾಡಲು ಸಲಹೆ ನೀಡಿದ್ದ ಕೋಚ್!

ಬಿಸಿಸಿಐನಿಂದ ನಡೆಯುತ್ತೆ ಪರೀಕ್ಷೆ:

ರಾಜ್ಯ ಸಂಸ್ಥೆಗಳು ನಿಮ್ಮ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದ ತಕ್ಷಣ, ನೀವು ನ್ಯಾಷನಲ್ ಲೆವೆಲ್ ಅಂಪೈರ್‌ಗಳಾಗುವುದಿಲ್ಲ. ಬಿಸಿಸಿಐ ಲೆವೆಲ್-1 ಅಂಪೈರ್ ಆಗಲು ಪರೀಕ್ಷೆ ಎದುರಿಸಬೇಕಾಗುತ್ತದೆ. ಇದನ್ನು ನೀವು ಪಾಸ್ ಮಾಡಬೇಕಾಗುತ್ತದೆ. ಈ ಪರೀಕ್ಷೆಯನ್ನು ಬಿಸಿಸಿಐ ಪ್ರತಿವರ್ಷ ಆಯೋಜಿಸುತ್ತದೆ. ಈ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಬಿಸಿಸಿಐ ಮೂರು ದಿನಗಳ ಕೋಚಿಂಗ್ ಕ್ಲಾಸ್ ನೀಡುತ್ತದೆ. ಈ ಕೋಚಿಂಗ್ ಕ್ಲಾಸ್‌ನಲ್ಲಿ ಇಂಡಕ್ಷನ್ ಕೋರ್ಸ್‌ ಹಾಗೂ ಅಂಪೈರಿಂಗ್ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ.

ಇನ್ನು ಇದಾದ ಬಳಿಕ ಪ್ರಾಕ್ಟಿಕಲ್ ಹಾಗೂ ಮೌಖಿಕ ಪರೀಕ್ಷೆ ಕೂಡಾ ನಡೆಯುತ್ತದೆ. ಈ ಪರೀಕ್ಷೆಗಳು ಪಾಸ್ ಮಾಡಿದವರು, ಬಿಸಿಸಿಐ ಲೆವೆಲ್-2 ಅಂಪೈರ್‌ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ. ಇದಾದ ಬಳಿಕ ಮೆಡಿಕಲ್ ಟೆಸ್ಟ್‌ಗೆ ಒಳಗಾಗಬೇಕಾಗುತ್ತದೆ. ಲೆವೆಲ್-2 ಅಂಪೈರಿಂಗ್ ಪರೀಕ್ಷೆ ಪಾಸ್ ಆದ ಬಳಿಕ ಅವರು ಬಿಸಿಸಿಐ ಅಂಪೈರ್ ಆಗಿ ನೇಮಕವಾಗುತ್ತಾರೆ.

ಎಷ್ಟಿರತ್ತೆ ಅಂಪೈರ್‌ಗಳ ಸಂಬಳ?

ಯಾವುದೇ ಟೂರ್ನಿ ಯಶಸ್ವಿಯಾಗಿ ನಡೆಯಬೇಕೆಂದರೆ ಅಲ್ಲಿ ಅಂಪೈರ್‌ಗಳ ತೀರ್ಪು ಸಾಕಷ್ಟು ಮಹತ್ವದ್ದೆನಿಸುತ್ತದೆ. ಬಿಸಿಸಿಐ ಅಂಪೈರ್‌ಗಳಿಗೆ ಅವರ ಅನುಭವ ಹಾಗೂ ಸೀನಿಯಾರಿಟಿ ಆಧಾರದಲ್ಲಿ ಬೇರೆ ಬೇರೆ ಗ್ರೇಡ್‌ನ ಸಂಬಳವನ್ನು ನೀಡುತ್ತಾ ಬಂದಿದೆ. ಮಾಧ್ಯಮಗಳ ವರದಿಯ ಪ್ರಕಾರ, ಪ್ರಥಮದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಗ್ರೇಡ್‌ 'ಎ' ಹೊಂದಿದ ಅಂಪೈರ್‌ಗೆ ದಿನವೊಂದಕ್ಕೆ 40 ಸಾವಿರ ರುಪಾಯಿ, ಗ್ರೇಡ್‌ 'ಬಿ' ಅಂಪೈರ್‌ಗೆ ದಿನವೊಂದಕ್ಕೆ 30 ಸಾವಿರ ರುಪಾಯಿ ಸಂಬಳ ನೀಡುತ್ತದೆ.

ಇನ್ನು ಬಿಸಿಸಿಐ ಅಂಪೈರ್‌ ಆಗಿ ಕರಾರುವಕ್ಕಾದ ತೀರ್ಪು ನೀಡುವುದು ಕಂಡು ಬಂದರೆ, ನಿಮ್ಮ ಟ್ರ್ಯಾಕ್ ರೆಕಾರ್ಡ್‌ ಚೆನ್ನಾಗಿದ್ದರೇ ಐಸಿಸಿ ತನ್ನ ಅಂಪೈರ್‌ ಪ್ಯಾನಲ್‌ಗೆ ಸೇರಿಸಿಕೊಳ್ಳುತ್ತದೆ. ಮೀಡಿಯಾ ವರದಿಗಳ ಪ್ರಕಾರ ಹೇಳುವುದಾದರೇ, ಐಸಿಸಿ ಪ್ಯಾನಲ್ ಅಂಪೈರ್ ಆದವರು ಪ್ರತಿ ಮ್ಯಾಚ್‌ಗೆ 1.50 ಲಕ್ಷ ರುಪಾಯಿಯಿಂದ ಹಿಡಿದು 2.20 ಲಕ್ಷ ರುಪಾಯಿ ಸಂಬಳ ಪಡೆಯುತ್ತಾರೆ.  ಇದು ಮ್ಯಾಚ್‌ ಒಂದಕ್ಕೆ ಪಡೆಯುವ ಸಂಭಾವನೆಯಾದರೆ, ಐಸಿಸಿ ಪ್ಯಾನಲ್ ಅಂಪೈರ್‌ಗಳ ವಾರ್ಷಿಕ ಸಂಬಳ ಸರಾಸರಿ 75 ಲಕ್ಷ ರುಪಾಯಿ ಇರುತ್ತದೆ. ಇದಷ್ಟೇ ಅಲ್ಲದೇ ಅಂಪೈರ್‌ಗಳು ಕೆಲವು ಸ್ಪಾನ್ಸರ್‌ಶಿಪ್‌ನಿಂದಲೂ ಉತ್ತಮ ಮೊತ್ತವನ್ನು ಜೇಬಿಗಿಳಿಸಿಕೊಳ್ಳುತ್ತಾರೆ.
 

click me!