ಶುರುವಾಯ್ತು RCBಯ ಪ್ಲೇ ಆಫ್ ಲೆಕ್ಕಾಚಾರ..? ನಾಕೌಟ್ ಹಂತಕ್ಕೆ ಪ್ರವೇಶ ಹೇಗೆ ಸಾಧ್ಯ..?

By Suvarna News  |  First Published Apr 15, 2024, 11:58 AM IST

ಈಗಾಗ್ಲೇ ಹೇಳಿದಂತೆ, ಲೀಗ್ನಲ್ಲಿ RCB ಇದುವರೆಗೆ 6 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ಪ್ರತಿ ತಂಡವೂ 14 ಪಂದ್ಯಗಳನ್ನಾಡಲಿದೆ. RCBಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಇದರ ಪ್ರಕಾರ RCB ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ. ಅದ್ರೆ, ಪ್ಲೇ ಆಫ್ ಸ್ಟೇಜ್ಗೆ ಎಂಟ್ರಿ ನೀಡಬೇಕಾದ್ರೆ ಡು ಪ್ಲೆಸಿಸ್ ಪಡೆ, ಮುಂದಿನ 8ರಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ.


ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರತಿವರ್ಷ RCB ಅಭಿಮಾನಿಗಳು ಯಾವುದು ನಡೆಯಬಾರದೂ ಅಂತ ಅನ್ಕೋತಾರೋ, ಅದೇ ನಡೆಯುತ್ತೆ. ಈ ಬಾರಿಯೂ ಅದೇ ಆಗಿದೆ. ಅದೇ ಕಣ್ರಿ, RCBಯ ಪ್ಲೇ ಆಫ್ ಲೆಕ್ಕಾಚಾರಾ..? ಬನ್ನಿ ಹಾಗಿದ್ರೆ, ಸೋತು ಸುಣ್ಣವಾಗಿರೋ RCB ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಅಂತ ನೋಡ್ಕೊಂಡು ಬರೋಣ.. 

ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಎಂಟ್ರಿಗೆ ಏನ್ ಮಾಡ್ಬೇಕು..? 

Tap to resize

Latest Videos

ಈ ಬಾರಿಯ IPLನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿದೆ. ಈವರೆಗೂ ಆಡಿರೋ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲವು ಕಂಡಿದೆ. ಇದ್ರಿಂದ ಅಭಿಮಾನಿಗಳು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಮುಗಿಬಿದಿದ್ದಾರೆ. ಅಲ್ಲದೇ, RCB ಎಲ್ಲಿ ಎಡವುತ್ತಿದೆ, ಯಾಕೆ ಸೋಲಾಗ್ತಿದೆ ಅಂತ ತಾವೇ ಕಾರಣಗಳನ್ನ ಹುಡುಕುತ್ತಿದ್ದಾರೆ. ಅಲ್ಲದೇ, ಪ್ಲೇ ಆಫ್ ಲೆಕ್ಕಚಾರವೂ ಶುರುವಾಗಿದೆ. 

ಪವಾಡ ನಡೆದ್ರೆ ಮಾತ್ರ ನಾಕೌಟ್ ಹಂತಕ್ಕೆ ಪ್ರವೇಶ ಸಾಧ್ಯ..! 

ಈಗಾಗ್ಲೇ ಹೇಳಿದಂತೆ, ಲೀಗ್ನಲ್ಲಿ RCB ಇದುವರೆಗೆ 6 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ಪ್ರತಿ ತಂಡವೂ 14 ಪಂದ್ಯಗಳನ್ನಾಡಲಿದೆ. RCBಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಇದರ ಪ್ರಕಾರ RCB ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ. ಅದ್ರೆ, ಪ್ಲೇ ಆಫ್ ಸ್ಟೇಜ್ಗೆ ಎಂಟ್ರಿ ನೀಡಬೇಕಾದ್ರೆ ಡು ಪ್ಲೆಸಿಸ್ ಪಡೆ, ಮುಂದಿನ 8ರಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾದಾಗ ಮಾತ್ರ, RCB 16 ಪಾಯಿಂಟ್ಗಳೊಂದಿಗೆ ಪ್ಲೇ ಆಫ್ಗೇರಬಹುದಾಗಿದೆ. 

ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್‌ ವಿರುದ್ಧ ಗೆದ್ದು ಜಂಟಿ ಅಗ್ರಸ್ಥಾನಕ್ಕೇರಿದ ಗುಕೇಶ್‌

ಈಗಾಗಲೇ ಒಂದು ಪಂದ್ಯ ಗೆದ್ದಿರುವ RCB ಇನ್ನು 7 ಪಂದ್ಯ ಗೆದ್ದರೆ, ಒಟ್ಟು 8 ಗೆಲುವುಗಳಿಂದ 16 ಪಾಯಿಂಟ್ ಗಳಿಸಲಿದೆ. ಕಳೆದ ಎರಡು  ಸೀಸನ್ಗಳಲ್ಲೂ 16 ಅಂಕ ಪಡೆದಿದ್ದ ತಂಡಗಳು ಪ್ಲೇ ಆಫ್ಗೇರಿದ್ವು. RCB ಕೂಡ 2022ರ IPLನಲ್ಲಿ 16 ಅಂಕ ಪಡೆದು ನಾಕೌಟ್ ಹಂತಕ್ಕೆ ಎಂಟ್ರಿ ಕೊಟ್ಟಿತ್ತು 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡವೂ 16 ಪಾಯಿಂಟ್ಗಳೊಂದಿಗೆ ಪ್ಲೇ ಆಫ್ ಆಡಿತ್ತು.

ಬರೀ ಗೆದ್ದರೆ ಸಾಲಲ್ಲ.. ಭಾರಿ ರನ್‌ರೇಟ್ನೊಂದಿಗೆ ಗೆಲ್ಲಬೇಕು..!

RCB ಉಳಿದ 8 ಪಂದ್ಯಗಳನ್ನು ಗೆದ್ದರೆ ಒಟ್ಟು 18 ಅಂಕ ಗಳಿಸಲಿದೆ. ಇದು ಸಾಧ್ಯವಾದರೆ ಸುಲಭವಾಗಿ ಪ್ಲೇ ಆಫ್ಗೇರಲಿದೆ. ಅಲ್ಲದೆ RCB ಒಂದು ಪಂದ್ಯದಲ್ಲಿ ಸೋತ್ರೂ 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಅವಕಾಶವಿರಲಿದೆ. ಆದ್ರೆ, ಉಳಿದ 8 ಪಂದ್ಯಗಳಲ್ಲಿ 2ರಲ್ಲಿ ಸೋತರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಯಾಕಂದ್ರೆ, 7 ಗೆಲುವುಗಳೊಂದಿಗೆ 14 ಪಾಯಿಂಟ್  ಸಿಗಲಿದೆ. 14 ಪಾಯಿಂಟ್ಸ್ ಇದ್ರೂ ಪ್ಲೇಆಫ್ ತಲುಪಬಹುದು. ಆಗ, ತಂಡದ ನೆಟ್ ರನ್‌ರೇಟ್‌  ಮುಖ್ಯವಾಗಲಿದೆ. 

ರೋಹಿತ್ ಶರ್ಮಾ ಶತಕ ಸಿಡಿಸಿದ್ರೂ, ವಾಖೇಡೆಲಿ ಚೆನ್ನೈ ಗೆ ಶರಣಾದ ಮುಂಬೈ..!

ಮುಂಬೈ ಇಂಡಿಯನ್ಸ್ ವಿರುದ್ಧ RCB 7 ವಿಕೆಟ್‌ಗಳ ಹೀನಾಯ  ಸೋಲು ಕಂಡಿದ್ದರಿಂದ ತಂಡದ ನೆಟ್ ರನ್ ರೇಟ್‌ನಲ್ಲಿಯೂ ಭಾರಿ  ಕುಸಿತ ಕಂಡಿದೆ. ಇದು   ನಿರ್ಣಾಯಕ ಹಂತದಲ್ಲಿ RCBಗೆ ಅಡ್ಡಿಯಾಗೋ ಸಾಧ್ಯತೆಗಳಿವೆ. ಇದರಿಂದ RCB ತನ್ನ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಸಾಧಿಸಿದರೆ ಮಾತ್ರ ಸಾಲದು. ಭಾರಿ ಅಂತರದಲ್ಲಿ ಗೆಲ್ಲಬೇಕು. ಇದ್ರಿಂದ ತಂಡದ ನೆಟ್ ರನ್‌ರೇಟ್  ಹೆಚ್ಚಲಿದೆ. ಪ್ಲೇ ಆಫ್ ಲೆಕ್ಕಾಚಾರದ ವೇಳೆ ಸಹಾಯಕವಾಗಲಿದೆ.

ಬೇರೆ ತಂಡಗಳ ಪ್ರದರ್ಶನ ಮೇಲೂ RCB ಭವಿಷ್ಯ ನಿರ್ಧಾರ

ನಾವು ಇಷ್ಟೊತ್ತು ಹೇಳಿದ್ದು ಕೇವಲ ಸಾಧ್ಯ ಸಾಧ್ಯತೆಗಳಷ್ಟೇ. ಒಂದು ವೇಳೆ RCBಗಿಂತ ಬೇರೆ ತಂಡಗಳು ಅದ್ಭುತ ಪ್ರದರ್ಶನ ನೀಡಿದ್ರೆ, RCB ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ. ಇದ್ರಿಂದ RCB ಪ್ಲೇ ಆಫ್ ಎಂಟ್ರಿ, ಬೇರೆ ತಂಡಗಳ ಪ್ರದರ್ಶನದ ಮೇಲೂ ಡಿಪೆಂಡ್ ಆಗಿದೆ. ಇದೆಲ್ಲವನ್ನೂ ಮೀರಿ RCB ಪ್ಲೇ ಆಫ್ ಆಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!