Ind vs NZ T20I Series: ಜೈಪುರಕ್ಕೆ ಬಂದಿಳಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ

By Suvarna NewsFirst Published Nov 14, 2021, 9:40 AM IST
Highlights

* ಕಿವೀಸ್ ಎದುರಿನ ಟಿ20 ಸರಣಿಗೆ ಸಜ್ಜಾದ ಟೀಂ ಇಂಡಿಯಾ

* ಮೊದಲ ಟಿ20 ಪಂದ್ಯವನ್ನಾಡಲು ಜೈಪುರಕ್ಕೆ ಬಂದಿಳಿದ ಭಾರತ ತಂಡ

* ರೋಹಿತ್ ಶರ್ಮಾ ನೇತೃತ್ವದ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ಜೈಪುರ(ನ.14): ನವೆಂಬರ್ 17ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ (T20I Series) ಮೊದಲ ಪಂದ್ಯದಲ್ಲಿ ಆಡಲು ಭಾರತ ತಂಡ ಶನಿವಾರ ಜೈಪುರ ತಲುಪಿತು. ಟೀಂ ಇಂಡಿಯಾ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid), ನೂತನ ನಾಯಕ ರೋಹಿತ್‌ ಶರ್ಮಾ (Rohit Sharma) ಸೇರಿದಂತೆ ತಂಡದಲ್ಲಿರುವ ಎಲ್ಲಾ ಆಟಗಾರರು ಬಯೋ ಬಬಲ್‌ ಪ್ರವೇಶಿಸಿದ್ದು, ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಆಟಗಾರರು 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದು, ಮೊದಲ ಪಂದ್ಯಕ್ಕೂ ಮುನ್ನ ಒಂದು ದಿನ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. 

ಟಿ20 ಸರಣಿಯಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿದ್ದು, ಟಿ20 ವಿಶ್ವಕಪ್‌ ಫೈನಲ್‌ (T20 World Cup Final) ಮುಕ್ತಾಯಗೊಂಡ ಬಳಿಕ ಸೋಮವಾರ ನ್ಯೂಜಿಲೆಂಡ್‌ ತಂಡ (New Zealand Cricket Team) ಭಾರತಕ್ಕೆ ಆಗಮಿಸಲಿದೆ. ಮಂಗಳವಾರ ಒಂದು ದಿನ ಅಭ್ಯಾಸ ನಡೆಸಿ, ಬುಧವಾರ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

Start of a new ERA - Captain and Coach have arrived at Jaipur. pic.twitter.com/MB0edLXDjA

— Johns. (@CricCrazyJohns)

Team India Squad:ನ್ಯೂಜಿಲೆಂಡ್ ವಿರುದ್ಧ T20ಗೆ ಬಲಿಷ್ಠ ತಂಡ ಪ್ರಕಟ, ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಸೂಪರ್‌ 12 ಹಂತದ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಸೆಮೀಸ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ಇನ್ನೊಂದೆಡೆ ಕೇನ್‌ ವಿಲಿಯಮ್ಸನ್‌ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು ಸೆಮೀಸ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ, ಇದೀಗ ಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಎದುರು ಸೆಣಸಾಟ ನಡೆಸಲಿದೆ. 

ತಾರಾ ಆಟಗಾರರಿಗೆ ವಿಶ್ರಾಂತಿ: ನಿರಂತರ ಕ್ರಿಕೆಟ್‌ನಿಂದ ಬಳಲಿರುವ ಕೆಲವು ತಾರಾ ಆಟಗಾರರಿಗೆ ಕಿವೀಸ್‌ ಎದುರಿನ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ(Virat Kohli), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಟಿ20 ಸರಣಿಗೆ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನು ರಾಹುಲ್ ದ್ರಾವಿಡ್‌ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ಪಡೆ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

Ind vs NZ ಟಿ20 ಸರಣಿ ವೀಕ್ಷಿಸಲು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ, ಆದರೆ ಷರತ್ತುಗಳು ಅನ್ವಯ..!.

ಯುವ ಆಟಗಾರರಿಗೆ ಮಣೆ: ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿಯು ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರಾಗಿ ಮಣೆಹಾಕಿದೆ. ಈ ಪೈಕಿ ಋತುರಾಜ್ ಗಾಯಕ್ವಾಡ್‌, ಹರ್ಷಲ್ ಪಟೇಲ್‌, ಆವೇಶ್ ಖಾನ್‌, ವೆಂಕಟೇಶ್ ಅಯ್ಯರ್ ಸೇರಿದಂತೆ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದೆ

ಇನ್ನೂ ಸಹಾಯಕ ಕೋಚ್‌ಗಳ ಹೆಸರು ಘೋಷಿಸದ ಬಿಸಿಸಿಐ!

ಕಿವೀಸ್‌ ವಿರುದ್ಧ ಸರಣಿ ಆರಂಭಕ್ಕೆ ಕೇವಲ 3 ದಿನ ಬಾಕಿ ಇದ್ದರೂ ಬಿಸಿಸಿಐ, ಟೀಂ ಇಂಡಿಯಾದ ನೂತನ ಸಹಾಯಕ ಸಿಬ್ಬಂದಿಯ ಹೆಸರನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ ಬ್ಯಾಟಿಂಗ್‌ ಕೋಚ್‌ ಆಗಿ ವಿಕ್ರಂ ರಾಥೋಡ್‌ ಮರು ನೇಮಕಗೊಂಡಿದ್ದು, ನೂತನ ಬೌಲಿಂಗ್‌ ಕೋಚ್‌ ಆಗಿ ಪಾರಸ್‌ ಮ್ಹಾಂಬ್ರೆ, ಫೀಲ್ಡಿಂಗ್‌ ಕೋಚ್‌ ಆಗಿ ಟಿ.ದಿಲೀಪ್‌ ಈಗಾಗಲೇ ನೇಮಕಗೊಂಡಿದ್ದು, ತಂಡದಿಂದ ಜೈಪುರದಲ್ಲಿ ಬಯೋ ಬಬಲ್‌ ಪ್ರವೇಶಿಸಿದ್ದಾರೆ. ಭಾನುವಾರ ಇಲ್ಲವೇ ಸೋಮವಾರ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆ ಇದೆ.

click me!