
ಬೆಂಗಳೂರು: ಹಾರ್ದಿಕ್ ಪಾಂಡ್ಯ ಎಲ್ಲಿದ್ದಾರೆ.. ಶ್ರೀಲಂಕಾ ಒನ್ಡೇ ಸಿರೀಸ್ ಆಡದೆಯೇ ಎಲ್ಲಿಗೆ ಹೋದ್ರು.. ಅವರು ಗ್ರೀಸ್ ಟೂರ್ನಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತು.. ಆದ್ರೆ ಅವರೊಬ್ಬರೇ ಗ್ರೀಸ್‌ಗೆ ಹೋಗಿಲ್ಲ. ಹೊಸ ಗರ್ಲ್ಸ್ ಫ್ರೆಂಡ್ ಜೊತೆ ಹೋಗಿದ್ದಾರೆ. ಯಾರಾಕಿ ಅನ್ನೋದನ್ನ ನೀವೇ ನೋಡಿ.
ವಿದೇಶಿ ಹುಡುಗಿಯರ ಹಿಂದೆ ಬೀಳ್ತಿದ್ದಾರೆ ಹಾರ್ದಿಕ್..!
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಬಳಿಕ ರೆಸ್ಟ್‌ಗೆ ಜಾರಿದ್ದರು.. ಶ್ರೀಲಂಕಾ ಟಿ20 ಸಿರೀಸ್ ಆಡಿ ಒನ್ಡೇ ಸಿರೀಸ್‌ಗೆ ಚಕ್ಕರ್ ಕೊಟ್ಟಿದ್ದರು. ವೈಯಕ್ತಿಕ ಕಾರಣ ನೀಡಿ ಏಕದಿನ ಸರಣಿ ಆಡಿರಲಿಲ್ಲ. ಒನ್ಡೇ ಸಿರೀಸ್ ಆಡೋ ಬದಲು ಪಾಂಡ್ಯ ಎಲ್ಲಿಗೆ ಹೋಗಿದ್ರು. ಗ್ರೀಸ್‌ಗೆ. ಯಾಕೆ ಗೊತ್ತಾ..? ಹೊಸ ಗರ್ಲ್ಸ್ ಫ್ರೆಂಡ್ ಜೊತೆ ಡೇಟಿಂಗ್ ನಡೆಸಲು. ನತಾಶಾ ಸ್ಟ್ಯಾಂಕೋವಿಚ್ ಅವರಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಬೇರೆ ಹುಡುಗಿ ಜೊತೆ ಹಾರ್ದಿಕ್ ಡೇಟ್ ಮಾಡುತ್ತಿದ್ದಾರೆ ಎಂದು ಭಾರಿ ಸುದ್ದಿಯಾಗಿದೆ. ಆಲ್‌ರೌಂಡರ್ ಸದ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಡೇಟ್ ಮಾಡ್ತಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಈ ಅನುಮಾನಕ್ಕೆ ಕಾರಣ ಈ ವಿಡಿಯೋ.
ಒಂದೇ ಹೊಟೇಲ್‌ನಲ್ಲಿ ಪಾಂಡ್ಯ-ಜಾಸ್ಮಿನ್
ಇತ್ತೀಚೆಗೆ ಗ್ರೀಸ್ ದೇಶಕ್ಕೆ ಟೂರ್‌ಗೆ ಹೋಗಿದ್ದ ಹಾರ್ದಿಕ್ ಪಾಂಡ್ಯ, ಅಲ್ಲಿನ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂರು ದಿನಗಳ ಹಿಂದೆ ಹಂಚಿಕೊಂಡಿದ್ದರು. ಇದಕ್ಕೂ ಐದು ದಿನಗಳ ಹಿಂದೆ ಜಾಸ್ಮಿನ್ ಕೂಡ ಕೆಲ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಇವರಿಬ್ಬರ ವಿಡಿಯೋ ಹಾಗೂ ಫೋಟೋ ಬ್ಯಾಕ್‌ಗ್ರೌಂಡ್ ಒಂದೇ ರೀತಿ ಇತ್ತು. ಈಜುಕೊಳ, ಸಮುದ್ರ, ಕಲ್ಲಿನ ಬಂಡೆ.
ಇನ್ನೂ ವಿಶೇಷ ಅಂದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಪಾಂಡ್ಯ ಹಂಚಿಕೊಂಡಿದ್ದ ವಿಡಿಯೋವನ್ನು ಜಾಸ್ಮಿನ್ ಲೈಕ್ ಮಾಡಿದ್ದರು. ಇದರಿಂದ ಈ ಇಬ್ಬರೂ ಇದೇ ಸ್ಥಳದಲ್ಲಿ ಇದ್ದರು ಎಂಬುದಕ್ಕೆ ಪಕ್ಕಾ ಆಯ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಜಾಸ್ಮಿನ್ ವಾಲಿಯಾ ಹಂಚಿಕೊಂಡಿದ್ದ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನೀವು ಜೊತೆಯಲ್ಲಿದ್ದೀರಿ. ಗ್ರೀಸ್‌ನಲ್ಲಿ ಹೊಸ ಹಕ್ಕಿಗಳು ಆನಂದಿಸುತ್ತಿವೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಹಾಕಿದರೆ, ಮತ್ತೊರ್ವ ಅಭಿಮಾನಿ, ಪಾಂಡ್ಯ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾನೆ.
ಐಪಿಎಲ್ ವೇಳೆಯೇ ಡೇಟಿಂಗ್ ನಡೆಸುತ್ತಿದ್ದ ಪಾಂಡ್ಯ
ಈ ಸಲದ ಐಪಿಎಲ್ ವೇಳೆಯೇ ಹಾರ್ದಿಕ್-ಜಾಸ್ಮಿನ್ ಡೇಟಿಂಗ್ ನಡೆಸುತ್ತಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಮುಂಬೈನಲ್ಲಿ ನಡೆದ ಸಿಎಸ್‌ಕೆ-ಮುಂಬೈ ಪಂದ್ಯವನ್ನು ವೀಕ್ಷಿಸಲು ಜಾಸ್ಮಿನ್ ವಾಲಿಯಾ ಹೋಗಿದ್ದು, ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದಲ್ಲದೆ ಪಾಂಡ್ಯ, ಶ್ರೀಲಂಕಾ ಟಿ20 ಸರಣಿ ಆಡಲು ಕೊಲಂಬೋಗೆ ಹೋಗಿದ್ದಾಗ ಜಾಸ್ಮಿನ್ ಲಂಕಾದಲ್ಲೇ ಇದ್ದರು. ಶ್ರೀಲಂಕಾದಲ್ಲಿದ್ದೇನೆ ಎಂದು ಜುಲೈ 27ರಂದು ಜಾಸ್ಮಿನ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
ಆಗಸ್ಟ್ 4ರಂದು ಶ್ರೀಲಂಕಾದಿಂದ ನೇರವಾಗಿ ಗ್ರೀಸ್‌ಗೆ ಪ್ರಯಾಣಿಸಿದ್ದೇನೆ ಎಂದು ಜಾಸ್ಮಿನ್ ವಾಲಿಯಾ ಪೋಸ್ಟ್ ಮಾಡಿದ್ದರು. ಈ ಮೂಲಕ ಜಾಸ್ಮಿನ್ ವಾಲಿಯಾ ಜತೆ ಪಾಂಡ್ಯ ಪ್ರಯಾಣಿಸಿದ್ದಾರೆ. ಈಗ ಇಬ್ಬರು ಗ್ರೀಸ್ನಲ್ಲಿದ್ದಾರೆ. ಇದರೊಂದಿಗೆ ನತಾಶಾ ಜೊತೆ ಬ್ರೇಕ್ ಅಪ್ ಆಗುವ ಮುನ್ನ ಜಾಸ್ಮಿನ್ ವಾಲಿಯಾ ಜೊತೆ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಚರ್ಚೆ ಶುರುವಾಗಿದೆ. ಈ ಡೇಟಿಂಗ್ನಿಂದಲೇ ಪಾಂಡ್ಯ, ನತಾಶಾ ಜೊತೆ ಡಿವೋರ್ಸ್ ಪಡೆದಿದ್ದಾರೆ ಅನ್ನಲಾಗ್ತಿದೆ.
ಯಾರು ಗೊತ್ತಾ ಜಾಸ್ಮಿನ್ ವಾಲಿಯಾ..?
ಜಾಸ್ಮಿನ್ ವಾಲಿಯಾ ಬ್ರಿಟಿಷ್ ಗಾಯಕಿ. ಸಂಗೀತದ ಮೂಲಕ ಅವರು ದೊಡ್ಡ ಹೆಸರು ಮಾಡಿದ್ದಾರೆ. ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದ್ದ ಜಾಸ್ಮಿನ್, ಮೊದಲು ಬ್ರಿಟಿಷ್ ರಿಯಾಲಿಟಿ ಟಿವಿ ಸೀರೀಸ್ 'ದಿ ಓನ್ಲಿ ವೇ ಈಸ್ ಎಸೆಕ್ಸ್ನಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. 2014ರಲ್ಲಿ ಇವರು ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಇದರಲ್ಲಿ ಅವರು ಕವರ್ ಹಾಗೂ ಪ್ರಖ್ಯಾತ ಹಾಡುಗಳನ್ನು ಹಾಕುತ್ತಿದ್ದರು. ಒಲ್ಲೀ ಗ್ರೀನ್, ಇಂಟೆನ್ಸ್-ಟೀ ಹಾಗೂ ಝ್ಯಾಕ್ ನೈಟ್ ಅವರ ಸಂಯೋಜನೆಯಲ್ಲಿ ಹಲವು ಹಾಡುಗಳನ್ನು ಹೊರ ತಂದಿದ್ದಾರೆ.
- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.