ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಪಾಂಡ್ಯ: ಯಾರಾಗ್ತಾರೆ ಮುಂಬೈ ಇಂಡಿಯನ್ಸ್ ನಾಯಕ..?

By Suvarna News  |  First Published Dec 24, 2023, 12:48 PM IST

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಥೆ ಇಂಗು ತಿಂದ ಮಂಗನಂತಾಗಿದೆ. ಸುಮ್ಮನಿಲ್ಲದವರು ಇರುವೆ ಬಿಟ್ಟುಕೊಂಡ್ರು ಅಂತರಲ್ಲ. ಹಾಗೆ ಆಗಿದೆ ಮುಂಬೈ ಇಂಡಿಯನ್ಸ್. ಮುಂಬೈ ಬಿಟ್ಟು ಹೋಗಿದ್ದ ಹಾರ್ದಿಕ್ ಪಾಂಡ್ಯನನ್ನ ವಾಪಾಸ್ ಕರೆತಂದು ತಂಡದಲ್ಲಿದ್ದ ಪ್ರಶಾಂತತೆಯನ್ನ ಕೆಡೆಸಿದ್ದ ಫ್ರಾಂಚೈಸಿ, ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮುಂಬೈ ಇಂಡಿಯನ್ಸ್ ತಂಡವನ್ನ ಕ್ರಿಕೆಟ್ ದೇವರೇ ಕಾಪಾಡಬೇಕು.


ಬೆಂಗಳೂರು(ಡಿ.24) ಮುಂಬೈ ಇಂಡಿಯನ್ಸ್ ತಂಡ ಈಗ ಸಂಕಷ್ಟಕ್ಕೆ ಸಿಲುಕಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅಂತರಲ್ಲ. ಹಾಗೆ ಆಗಿದೆ ಮುಂಬೈ ಕಥೆ. ಈಗ ಮುಂದಿನ ಐಪಿಎಲ್ನಲ್ಲಿ ನಾಯಕನೇ ಆಡೋದು ಅನುಮಾನವಾಗಿದೆ. ಮತ್ತೊಬ್ಬ ಸ್ಟಾರ್ ಆಟಗಾರ ಇಂಜುರಿ ಆಗಿದ್ದಾನೆ. ಅಲ್ಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನ ಕ್ರಿಕೆಟ್ ದೇವರೇ ಕಾಪಾಡಬೇಕು.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಥೆ ಇಂಗು ತಿಂದ ಮಂಗನಂತಾಗಿದೆ. ಸುಮ್ಮನಿಲ್ಲದವರು ಇರುವೆ ಬಿಟ್ಟುಕೊಂಡ್ರು ಅಂತರಲ್ಲ. ಹಾಗೆ ಆಗಿದೆ ಮುಂಬೈ ಇಂಡಿಯನ್ಸ್. ಮುಂಬೈ ಬಿಟ್ಟು ಹೋಗಿದ್ದ ಹಾರ್ದಿಕ್ ಪಾಂಡ್ಯನನ್ನ ವಾಪಾಸ್ ಕರೆತಂದು ತಂಡದಲ್ಲಿದ್ದ ಪ್ರಶಾಂತತೆಯನ್ನ ಕೆಡೆಸಿದ್ದ ಫ್ರಾಂಚೈಸಿ, ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮುಂಬೈ ಇಂಡಿಯನ್ಸ್ ತಂಡವನ್ನ ಕ್ರಿಕೆಟ್ ದೇವರೇ ಕಾಪಾಡಬೇಕು.

Tap to resize

Latest Videos

ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಿಮ್ಮಡಿ ನೋವಿಗೆ ತುತ್ತಾಗಿದ್ದರು. ಬಳಿಕ ಅವರು ವರ್ಲ್ಡ್‌ಕಪ್‌ನಿಂದ ಮಾತ್ರವಲ್ಲ, ನಾಲ್ಕೈದು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್ನಿಂದಲೂ ಹೊರಗುಳಿದಿದ್ದರು. ಐಪಿಎಲ್ ವೇಳೆಗೆ ಫಿಟ್ ಆಗಲಿದ್ದಾರೆ ಅನ್ನೋ ಸುದ್ದಿಯೂ ಬಂದಿತ್ತು. ಆದ್ರೀಗ ಅವರು ಐಪಿಎಲ್ ವೇಳೆಗೆ ಫಿಟ್ ಆಗೋದು ಅನುಮಾನ ಅಂತ ಸುದ್ದಿ ಬಂದಿದೆ. ಈ ಸುದ್ದಿಯನ್ನ ಬಿಸಿಸಿಐ ಅಧಿಕಾರಿಯೊಬ್ರು ಹೇಳಿದ್ದಾರೆ. ಈಗ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿರೋದು ಟೀಂ ಇಂಡಿಯಾ ಅಲ್ಲ. ಬದಲಿಗೆ ಐಪಿಎಲ್‌ನ ಮುಂಬೈ ಇಂಡಿಯನ್ಸ್.

ಶೀಘ್ರವೇ ಬೆಂಗ್ಳೂರು ಸ್ಪೋರ್ಟ್ಸ್‌ ಹಬ್‌ ಆಗಲಿದೆ: ಕ್ರೀಡಾ ಸಚಿವ ಅನುರಾಗ್‌ ಠಾಕೂರ್

ಪಾಂಡ್ಯ ಆಗಮನದಿಂದ ಮೂವರು ಅಸಮಾಧಾನ..!

ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ, ಒಂದು ಬಾರಿ ಚಾಂಪಿಯನ್ ಮತ್ತೊಂದು ಬಾರಿ ರನ್ನರ್ ಅಪ್ ಮಾಡಿದ್ದರು. ಆದ್ರೀಗ ಅವರನ್ನ ಟ್ರೇಡ್ ಮೂಲ್ಕ ಮುಂಬೈ ಇಂಡಿಯನ್ಸ್ ಮತ್ತೆ ಪಡೆದುಕೊಂಡಿತ್ತು. ಜೊತೆಗೆ ರೋಹಿತ್ ಶರ್ಮಾ ಅವರನ್ನ ಕಿಕೌಟ್ ಮಾಡಿ, ಪಾಂಡ್ಯಗೆ ನಾಯಕತ್ವ ಪಟ್ಟ ನೀಡಲಾಗಿತ್ತು. ಇದಕ್ಕೆ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ವು. ಕೇವಲ ಒಂದು ಗಂಟೆಯನ್ನೇ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ 4 ಲಕ್ಷ ಫಾಲೋವರ್ಸ್ ಕಳೆದುಕೊಂಡಿತ್ತು.

ಪಾಂಡ್ಯ ಕಾಪ್ಟನ್ ಮಾಡಿದಕ್ಕೆ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅಸಮಧಾನ ವ್ಯಕ್ತಪಡಿಸಿದ್ದರು. ನನಗೆ ಹೇಳದೆಯೇ ನಾಯಕತ್ವದಿಂದ ತೆಗೆದುಹಾಕಲಾಗಿದೆ ಅಂತ ರೋಹಿತ್ ಶರ್ಮಾ ಹೇಳಿಕೊಂಡಿದ್ದರು. ಒಟ್ನಲ್ಲಿ ಪಾಂಡ್ಯ ಆಗಮನದಿಂದ ಮುಂಬೈ ಇಂಡಿಯನ್ಸ್ನಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಆದ್ರೂ ಫ್ರಾಂಚೈಸಿ ಮಾತ್ರ ಪಾಂಡ್ಯನನ್ನ ನಾಯಕ ಎಂದು ಘೋಷಿಸಿ ಸೆಲೈಂಟಾಗಿತ್ತು. ಆದ್ರೀಗ ಅವರೇ ಐಪಿಎಲ್ ಆಡೋದು ಅನುಮಾನವಾಗಿದೆ.

ಮುಂಬೈ ನಾಯಕನಾಗಲು ಯಾರು ಗ್ರೀನ್ ಸಿಗ್ನಲ್ ನೀಡ್ತಾರೆ..?

ಪಾಂಡ್ಯ ಐಪಿಎಲ್ ವೇಳೆಗೆ ಫಿಟ್ ಆಗಲ್ಲ. ಫಿಟ್ ಆದ್ರೂ ಐಪಿಎಲ್ ಮಧ್ಯದಲ್ಲಿ ಎಂಟ್ರಿಕೊಡಬಹುದು. ಆದ್ರೀಗ ಪಾಂಡ್ಯ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳೋದು ಯಾರು ಅನ್ನೋ ಪ್ರಶ್ನೆ ಮೂಡಿದೆ. ರೋಹಿತ್ ಕಿಕೌಟ್ ಮಾಡಿರೋದ್ರಿಂದ ಅವರು ಕ್ಯಾಪ್ಟನ್ ಆಗಲು ಒಪ್ಪಿಕೊಳ್ಳಲ್ಲ. ಇನ್ನು ವೈಸ್ ಕ್ಯಾಪ್ಟನ್ ಆಗಿದ್ದ ಸೂರ್ಯ, ಪಾಂಡ್ಯನನ್ನ ಕ್ಯಾಪ್ಟನ್ ಮಾಡಿದಕ್ಕ ಬೇಸರಗೊಂಡಿದ್ದರು. ಜೊತೆಗೆ ಸೂರ್ಯ ಸಹ ಇಂಜುರಿ ಲಿಸ್ಟ್ಗೆ ಸೇರಿದ್ದು, ಫೆಬ್ರವರಿ ವೇಳೆಗೆ ಫಿಟ್ ಆಗ್ತಾರೆ ಅನ್ನೋ ಸುದ್ದಿ ಇದೆ. ಜಸ್ಪ್ರೀತ್ ಬುಮ್ರಾ ಸಹ ಕ್ಯಾಪ್ಟನ್ ರೇಸ್ನಲ್ಲಿದ್ದರು. ಅವರಿಗೆ ಕೊಕ್ ಕೊಟ್ಟು ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟಿತ್ತು. ಅವರಿಗೂ ಅಸಮಾಧಾನವಾಗಿತ್ತು.

ದುಬಾರಿ ವೇಗಿ ಮಿಚೆಲ್ ಸ್ಟಾರ್ಕ್‌ ಪತ್ನಿ ಅಲೀಸಾ ಹೀಲಿ ಗರ್ಭಿಣಿನಾ? ಐಪಿಎಲ್‌ನಲ್ಲಿ ಕೆಕೆಆರ್‌ಗೆ ಕೈ ಕೊಡ್ತಾರಾ ಆಸೀಸ್ ವೇಗಿ?

ಆಕಸ್ಮಾತ್ ಬಿಸಿಸಿಐ ಅಧಿಕಾರಿ ಹೇಳಿದ ನ್ಯೂಸ್ ಪಕ್ಕಾ ಆಗಿ ಪಾಂಡ್ಯ ಐಪಿಎಲ್ ಆಡದಿದ್ದರೆ ಮುಂಬೈ ಇಂಡಿಯನ್ಸ್ ನಾಯಕ ಯಾರಾಗ್ತಾರೆ ಅನ್ನೋದೇ ಈಗಿರುವ ಪ್ರಶ್ನೆ. ರೋಹಿತ್, ಸೂರ್ಯ, ಬುಮ್ರಾ ಬಿಟ್ರೆ ಅಲ್ಲಿ ನಾಯಕರಾಗೋ ತಾಕತ್ತು ಯಾರಿಗೂ ಇಲ್ಲ. ಈ ಮೂವರಲ್ಲಿ ಒಬ್ಬರೂ ಕ್ಯಾಪ್ಟನ್ಸಿ ಒಪ್ಪಿಕೊಳ್ಳೋ ಮನಸ್ಸು ಮಾಡಲ್ಲ. ಹಾಗಾಗಿ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!