
ಡುಬ್ಲಿನ್ (ಜೂನ್ 27): ಆತಿಥೇಯ ಐರ್ಲೆಂಡ್ (Ireland) ವಿರುದ್ಧ ಭಾರತ (India) ಮೊದಲ ಟಿ20 (First T20I)ಪಂದ್ಯವನ್ನು ಗೆದ್ದಿರಬಹುದು, ಆದರೆ, ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ, ಅದ್ಭುತವಾಗಿ ಚೇತರಿಕೆ ಕಂಡ ಐರ್ಲೆಂಡ್ ತಂಡದ ಆಟಕ್ಕೆ ಕ್ರಿಕೆಟ್ ಪಂಡಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಹ್ಯಾರಿ ಟೆಕ್ಟರ್ (Harry Tector) ಆಟ ಗಮನಸೆಳೆದಿತ್ತು. ತಲಾ 12 ಓವರ್‌ಗಳ ಪಂದ್ಯದಲ್ಲಿ 22 ರನ್‌ಗೆ ಪ್ರಮುಖ ಮೂರು ವಿಕಟ್ ಕಳೆದುಕೊಂಡಿದ್ದ ಐರ್ಲೆಂಡ್, ಹ್ಯಾರಿ ಟೆಕ್ಟರ್ ಬಾರಿಸಿದ 33 ಎಸೆತಗಳ 64 ರನ್ ನೆರವಿನಿಂದ 4 ವಿಕೆಟ್‌ಗೆ 108 ರನ್‌ಗಳ ದೊಡ್ಡ ಮೊತ್ತ ಪೇರಿಸುವಲ್ಲಿ ಯಶ ಕಂಡಿತ್ತು.
ಈ ಸರಣಿಗೆ ಭಾರತ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ (Hardik Pandya), 22 ವರ್ಷದ ಹ್ಯಾರಿ ಟೆಕ್ಟರ್ ಆಟವನ್ನು ತಾವಯ ಮೆಚ್ಚಿದ್ದಾಗಿ ಹೇಳಿದರು. ಇದಕ್ಕಾಗಿಯೇ ಆತನಿಗೆ ತಮ್ಮ ಬ್ಯಾಟ್‌ಅನ್ನು ಗಿಫ್ಟ್ ಆಗಿ ನೀಡಿದ್ದೇನೆ ಎಂದು ಬಹಿರಂಗಪಡಿಸಿದರು. "ಹೌದು ಹ್ಯಾರಿ ಟೆಕ್ಟರ್ ಅತ್ಯದ್ಭುತವಾದ ಶಾಟ್‌ಗಳನ್ನು ಬಾರಿಸಿದರು. ಅದಲ್ಲದೆ, ಆತನಿಗಿನ್ನೂ 22 ವರ್ಷ ವಯಸ್ಸು. ನಾನು ಆತನಿಗೆ ನನ್ನ ಬ್ಯಾಟ್‌ಅನ್ನು ಗಿಫ್ಟ್ ಆಗಿ ನೀಡಿದೆ. ಇದರಿಂದ ಆತ ಮತ್ತಷ್ಟು ರನ್ ಗಳಿಸುವಂತಾಗಲಿ ಮತ್ತಷ್ಟು ಸಿಕ್ಸರ್ ಸಿಡಿಸುವಂತಾಗಲಿ ಆ ಮೂಲಕ ಐಪಿಎಲ್ ಒಪ್ಪಂದ ಪಡೆದುಕೊಳ್ಳಲಿ' ಎಂದು ಡುಬ್ಲಿನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐರ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್ ಟೆಕ್ಟರ್‌ಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ ಮತ್ತು ಅವರು ತಮ್ಮ ಕೈಯಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರಬಹುದು ಎಂದು ಪಾಂಡ್ಯ ಹೇಳಿದರು. " ನಾನು ಅವನಿಗೆ ಅದೃಷ್ಟವನ್ನು ಬಯಸುತ್ತೇನೆ ಮತ್ತು ನಿಮಗೆ ಗೊತ್ತಾ, ಅವನನ್ನು ಹಾಗೂ ಅವನ ಆಟವನ್ನು ಚೆನ್ನಾಗಿ ನೋಡಿಕೊಳ್ಳಿ. ಅವನಿಗೆ ಸರಿಯಾದ ಮಾರ್ಗದರ್ಶನ ನೀಡಿ. ಇದು ಯಾವಾಗಲೂ ಕ್ರಿಕೆಟ್ ಬಗ್ಗೆ ಅಲ್ಲ. ಇದು ನಿಮ್ಮ ಸ್ವಂತ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಪಾಯದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು. ನೀವು ಅದನ್ನು ನಿರ್ವಹಿಸಬಹುದಾದರೆ, ನಾನು ಅವರು ಐಪಿಎಲ್‌ನಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಲೀಗ್‌ಗಳಲ್ಲಿಯೂ ಇರುತ್ತಾರೆ ಎನ್ನುವುದು ಖಚಿತ' ಎಂದು ಪಾಂಡ್ಯ ಹೇಳಿದ್ದಾರೆ.
ವಿಶ್ವಕಪ್ ಗೆದ್ದ ನಾಯಕ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ..?
ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಗಮನಸೆಳೆದರು. ಐರ್ಲೆಂಡ್ ತಂಡದ ಆರಂಭಿಕ ಆಟಗಾರ ಪೌಲ್ ಸ್ಟಿರ್ಲಿಂಗ್ ವಿಕೆಟ್ ಉರುಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಕೆಟ್ ಪಡೆದ ಭಾರತದ ಮೊದಲ ನಾಯಕ ಎನಿಸಿಕೊಂಡರು. ಆ ಬಳಿಕ ಬ್ಯಾಟಿಂಗ್ ವೇಳೆ 12 ಎಸೆತಗಳಲ್ಲಿ 24 ರನ್ ಸಿಡಿಸಿದ್ದಲ್ಲದೆ, ದೀಪಕ್ ಹೂಡಾ ಜೊತೆ ಅಮೂಲ್ಯವಾದ 64 ರನ್ ಜೊತೆಯಾಟವಾಡಿದರು. ಇದರಿಂದಾಗಿ ಭಾರತ 9.1 ಓವರ್ ಗಳಲ್ಲಿ 109 ರನ್ ಸಿಡಿಸುವ ಮೂಲಕ ಗೆಲುವು ಕಂಡಿತು. ಆ ಮೂಲಕ 2 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಕಂಡಿತು. ಭಾರತ ಹಾಗೂ ಐರ್ಲೆಂಡ್ ತಂಡಗಳು ಡುಬ್ಲಿನ್‌ನಲ್ಲಿಯೇ ಮಂಗಳವಾರ 2ನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!
22 ವರ್ಷದ ಬಲಗೈ ಬ್ಯಾಟ್ಸ್ ಮನ್ ಹ್ಯಾರಿ ಟೆಕ್ಟರ್, ಮೈದಾನದಲ್ಲಿದ್ದಷ್ಟು ಹೊತ್ತು ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಕೊನೆಯವರೆಗೂ ಅಜೇಯವಾಗಿ ಉಳಿದಿದ್ದ ಟೆಕ್ಟರ್ ತಮ್ಮ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ್ದರು. ಅಕ್ಸರ್ ಪಟೇಲ್ ಎಸೆದ ಐದನೇ ಓವರ್‌ನಲ್ಲಿ ಸತತ ಬೌಂಡರಿಗಳನ್ನು ಸಿಡಿಸಿ ಅಬ್ಬರಿಸಿದ್ದರು. ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ ವೇಗು ಉಮ್ರಾನ್ ಮಲೀಕ್ ಅವರ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗಟ್ಟಿದರು. ಇವರು ಎಸೆದ ಒಂದೇ ಓವರ್ ನಲ್ಲಿ 1 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದರು. ಸ್ಲಾಗ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಆವೇಶ್ ಖಾನ್‌ರನ್ನು ಭರ್ಜರಿಯಾಗಿ ದಂಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.