ಹಾರ್ದಿಕ್ ಪಾಂಡ್ಯ..! ಸದ್ಯ ವಿಶ್ವ ಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಟೀಂ ಇಂಡಿಯಾದ ಕೀ ಪ್ಲೇಯರ್. ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟ ಮ್ಯಾಚ್ ವಿನ್ನರ್. ಆದ್ರೆ, ಇತ್ತೀಚೆಗೆ ಪಾಂಡ್ಯ ಆಟಕ್ಕಿಂತ ಹೆಚ್ಚಾಗಿ ತಮ್ಮ ಆ್ಯಟಿಟ್ಯುಡ್ ಮೂಲಕವೇ ಹೆಚ್ಚು ಸುದ್ದಿಯಾಗ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ, ಐರ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯ.
ಬೆಂಗಳೂರು: ಐಪಿಎಲ್ ಸೀಸನ್ 17ರಲ್ಲಿ ಟೀಂ ಇಂಡಿಯಾದ ಈ ಆಟಗಾರ ತನ್ನ ಆ್ಯಟಿಟ್ಯುಡ್, ಓವರ್ ಬಿಲ್ಡಪ್ ಮೂಲಕ ಟೀಕೆಗೆ ಗುರಿಯಾಗಿದ್ದ. ಈಗ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರವೂ ಅದನ್ನೇ ಮುಂದುವರಿಸಿದ್ದಾನೆ. ಆ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ.
ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಹಾರ್ದಿಕ್ ಪಾಂಡ್ಯ ಗುರಿ..?
ಹಾರ್ದಿಕ್ ಪಾಂಡ್ಯ..! ಸದ್ಯ ವಿಶ್ವ ಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಟೀಂ ಇಂಡಿಯಾದ ಕೀ ಪ್ಲೇಯರ್. ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟ ಮ್ಯಾಚ್ ವಿನ್ನರ್. ಆದ್ರೆ, ಇತ್ತೀಚೆಗೆ ಪಾಂಡ್ಯ ಆಟಕ್ಕಿಂತ ಹೆಚ್ಚಾಗಿ ತಮ್ಮ ಆ್ಯಟಿಟ್ಯುಡ್ ಮೂಲಕವೇ ಹೆಚ್ಚು ಸುದ್ದಿಯಾಗ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ, ಐರ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯ.
ಟಿ20 ವಿಶ್ವಕಪ್ ಪಂದ್ಯಗಳು ನಡೆಯೋ ಸ್ಟೇಡಿಯಂ ಖಾಲಿ ಖಾಲಿ...! ಯಾಕೆ ಹೀಗೆ?
ಯೆಸ್, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ನಿಂದ ಮಿಂಚಿದ್ರು. 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ 3 ವಿಕೆಟ್ ಬೇಟೆಯಾಡಿದ್ರು. ಪಾಂಡ್ಯ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ರು. ಪಾಂಡ್ಯ ಈಸ್ ಬ್ಯಾಕ್ ಅಂತ ಮೆಚ್ಚಿ ಕೊಂಡಾಡಿದ್ರು. ಆದ್ರೀಗ, ಅದೊಂದು ವೀಡಿಯೋ ಕಾರಣಕ್ಕೆ ಪಾಂಡ್ಯ ವಿರುದ್ದ ಕಿಡಿಕಾರ್ತಿದ್ದಾರೆ.
WTF is wrong with Hardik Pandya ??
The way he has thrown that bottle to Shubman Gill is so disrespectful.
People need to watch this.💔 pic.twitter.com/uTOFVZFT6C
ನೋಡಿದ್ರಲ್ಲಾ ಈ ವೀಡಿಯೋವನ್ನ..! ಐರ್ಲೆಂಡ್ ಪಂದ್ಯದಲ್ಲಿ ತಂಡದ ಸ್ಟ್ಯಾಂಡ್‌ಬೈ ಆಟಗಾರ ಶುಭ್‌ಮನ್ ಗಿಲ್, ಬೌಂಡರಿ ಲೈನ್ ಬಳಿ ನಿಂತಿದ್ದ ಹಾರ್ದಿಕ್‌ಗೆ ವಾಟರ್ ಬಾಟಲ್ ನೀಡಿದ್ರು. ನೀರು ಕುಡಿದ ಹಾರ್ದಿಕ್, ಬಾಟಲ್ ಅನ್ನು ಗಿಲ್‌ಗೆ ವಾಪಸ್ ನೀಡದೇ ಕೆಳಗಡೆ ಬಿಸಾಡಿದ್ರು. 17 ಸೆಕೆಂಡ್ಗಳ ಈ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದುರಹಂಕಾರಿ ಪಾಂಡ್ಯ ಅಂತ ಟ್ರೋಲ್ ಮಾಡಲಾಗ್ತಿದೆ. ಬೇಕು ಅಂತಲೇ ಗಿಲ್‌ಗೆ ಅವಮಾನ ಮಾಡಿದ್ದಾರೆ.ಅನ್ನೋ ಮಾತುಗಳು ಕೇಳಿ ಬರ್ತಿವೆ.
ಅದು ಪಾಂಡ್ಯ ದುರಹಂಕಾರ ಅಲ್ಲ, ಅಲ್ಲಿ ಆಗಿದ್ದೇ ಬೇರೆ..!
ಯೆಸ್, ಮತ್ತೊಂದೆಡೆ ಕೆಲ ಅಭಿಮಾನಿಗಳು ಹಾರ್ದಿಕ್ ಬಾಟಲ್ ಅನ್ನು ಸೊಕ್ಕಿನಿಂದ ಬಿಸಾಡಿಲ್ಲ. ಬಾಟಲ್‌ನ ಕೆಳಗಡೆ ಬಿಸಾಕಿ ಅಲ್ಲೇ ಬಿಡು, ನಾನು ಆಮೇಲೆ ಬೇಕಿದ್ದಾಗ ತಗೋತಿನಿ ಅಂತ ಗಿಲ್‌ಗೆ ಹೇಳಿದ್ದಾರೆ. ಆದ್ರೆ, ಪೂರ್ತಿ ಸತ್ಯ ಗೊತ್ತಿಲ್ಲದೇ ಅವರನ್ನ ಟ್ರೋಲ್ ಮಾಡ್ತಿದ್ದಾರೆ ಅಂತ ಪಾಂಡ್ಯರನ್ನ ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ.
ಅಮೆರಿಕ ಟೀಂ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ; ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯರು..!
ಐಪಿಎಲ್‌ನಲ್ಲಿ ರೋಹಿತ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿ..!
ಯೆಸ್, ಈ ಸಲದ IPLನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಹಾರ್ದಿಕ್ ಶಾಕಿಂಗ್ ನಿರ್ಧಾರಗಳನ್ನ ತೆಗೆದುಕೊಂಡಿದ್ರು. ಅದರಲ್ಲೂ ಜಸ್ಪ್ರೀತ್ ಬುಮ್ರಾಗೆ ಮೊದಲು ಓವರ್ ಬೌಲಿಂಗ್ ನೀಡದೇ, ತಾವೇ ಬೌಲಿಂಗ್ ಮಾಡಿದ್ದು, ಮಾಜಿ ರೋಹಿತ್ ಶರ್ಮಾರನ್ನ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ಗೆ ನಿಲ್ಲಿಸಿ ರೋಹಿತ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ರು. ಅಲ್ಲದೇ, ಟೂರ್ನಿ ಯುದ್ಧಕ್ಕೂ ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ನಲ್ಲಿ ಅಟ್ಟರ್ ಪ್ಲಾಪ್ ಶೋ ನೀಡಿ ಸಾಕಷ್ಟು ಟೀಕೆ ಎದುರಿಸಿದ್ರು.
ಇನ್ನು IPL ನಂತರ ಪಾಂಡ್ಯ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಪಾಂಡ್ಯ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ಮಧ್ಯೆ ಬಿರುಕು ಮೂಡಿತ್ತು. ನತಾಶಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನಿಂದ ಮುಂದಿದ್ದ ಪಾಂಡ್ಯ ಹೆಸರನ್ನ ತೆಗೆದು ಹಾಕಿದ್ದಾರೆ. ಒಟ್ಟಿನಲ್ಲಿ ಸದ್ಯ ಪಾಂಡ್ಯ ಟೈಮೇ ಸರಿ ಇಲ್ಲ ಅನ್ಸುತ್ತೆ. ಏನೇ ಮಾಡಿದ್ರೂ ಪಾಂಡ್ಯ ಪಾಲಿಗೆ ನೆಗೆಟಿವ್ ಅಗ್ತಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್