
ಅಹಮ್ಮದಾಬಾದ್ (ಡಿ.19) ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಹಾಗೂ 5ನೇ ಟಿ20 ಪಂದ್ಯ ಕುತೂಹಲ ಘಟ್ಟ ತಲುಪಿದೆ. ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರರ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 232 ರನ್ ಸಿಡಿಸಿದೆ. ಹಾರ್ದಿಕ್ ಪಾಂಡ್ಯ ದಾಖಲೆ ನಿರ್ಮಿಸಿದ್ದಾರೆ. ಸೌತ್ ಆಫ್ರಿಕಾ ತಂಡಕ್ಕೆ ಸರಣಿ ಉಳಿಸಿಕೊಳ್ಳಲು ಪಂದ್ಯ ಗೆಲ್ಲಲಬೇಕು. ನಾಲ್ಕನೇ ಟಿ20 ಪಂದ್ಯ ಮಂಜು ಕಾರಣ ರದ್ದಾಗಿತ್ತು. ಹೀಗಾಗಿ ಇಂದಿನ ಪಂದ್ಯ ಭಾರಿ ಮಹತ್ವ ಪಡೆದಿದೆ. ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ.
ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಇಬ್ಬರು ಸತತ ಬೌಂಡರಿ ಸಿಕ್ಸರ್ ಮೂಲಕ ಸೌತ್ ಆಫ್ರಿಕಾ ಬೌಲರ್ಸ್‌ಗೆ ತಲೆನೋವಾದರು. ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಹಾರ್ಧಿಕ್ ಪಾಂಡ್ಯ ಅರ್ಧಶತಕ ಸಿಡಿಸಿದ್ದಾರೆ. ವಿಶೇಷ ಅಂದರೆ ಹಾರ್ದಿಕ್ ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಭಾರತದ ಪರ ಅತೀವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿ 2ನೇ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ.
ಇತ್ತ ಸಂಜು ಸ್ಯಾಮನ್ಸ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 63 ರನ್ ಸಿಡಿಸಿತ್ತು. ಸ್ಯಾಮ್ಸನ್ 22 ಎಸೆತದಲ್ಲಿ 37 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ 21 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ನಾಯಕ ಸೂರ್ಯ ಕುಮಾರ್ ಯಾದವ್ ನಿರಾಸೆ ಅನುಭವಿಸಿದರು. ಸೂರ್ಯ ಕುಮಾರ್ ಯಾದವ್ ಕೇವಲ 5 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ 63 ರನ್ ಸಿಡಿಸಿದರೆ, ತಿಲಕ್ ವರ್ಮಾ ಅಜೇಯ 73 ರನ್ ಸಿಡಿಸಿ ರನೌಟ್ ಆದರೆ. ಈ ಮೂಲಕ 5 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.