ಯುವಿ, ಭಜ್ಜಿ, ರೈನಾ ಮೇಲೆ ಪೊಲೀಸ್ ಕೇಸ್‌ ದಾಖಲು! ಕ್ಷಮಿಸಿಬಿಡಿ: ಕೈಮುಗಿದು ಬೇಡಿಕೊಂಡ ಹರ್ಭಜನ್ ಸಿಂಗ್.!

By Naveen Kodase  |  First Published Jul 16, 2024, 3:06 PM IST

ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಹಾಗೂ ಗುರ್‌ಕೀರತ್‌ ಸಿಂಗ್‌ ಮಾನ್‌ ವಿರುದ್ಧ ಅಂಗವಿಕಲರ ಉದ್ಯೋಗ ಪ್ರಚಾರದ ರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿರುವ ಅರ್ಮಾನ್‌ ಅಲಿ ನೀಡಿದ ದೂರಿನನ್ವಯ ಅಮರ್‌ ಕಾಲೊನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ನವದೆಹಲಿ: ಲೆಜೆಂಡ್ಸ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಅಂಗವಿಕಲರಂತೆ ಅಭಿನಯಿಸಿದ ಭಾರತದ ನಾಲ್ವರು ಮಾಜಿ ಕ್ರಿಕೆಟಿಗರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಹಾಗೂ ಗುರ್‌ಕೀರತ್‌ ಸಿಂಗ್‌ ಮಾನ್‌ ವಿರುದ್ಧ ಅಂಗವಿಕಲರ ಉದ್ಯೋಗ ಪ್ರಚಾರದ ರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿರುವ ಅರ್ಮಾನ್‌ ಅಲಿ ನೀಡಿದ ದೂರಿನನ್ವಯ ಅಮರ್‌ ಕಾಲೊನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲು ಅನುಮತಿ ನೀಡಿದ್ದಕ್ಕೆ ಮೆಟಾ ಸಂಸ್ಥೆಯ ಸಂಧ್ಯಾ ದೇವನಾಥನ್‌ ವಿರುದ್ಧವೂ ಕೇಸ್‌ ದಾಖಲಿಸಲಾಗಿದೆ.

Latest Videos

undefined

ಇನ್ನು ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಮೂಲಕ ಕೈಮುಗಿದು ಕ್ಷಮೆಯಾಚಿಸಿದ್ದಾರೆ. ತೌಬಾ ತೌಬಾ ವಿಡಿಯೋ ಕುರಿತಂತೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸುವವರಿಗೆ ಒಂದಂತೂ ಸ್ಪಷ್ಪಪಡಿಸಲು ಬಯಸುತ್ತೇನೆ. ಲೆಜೆಂಡ್ಸ್‌ ಚಾಂಪಿಯನ್‌ಶಿಪ್‌ ಜಯಿಸಿದ ಬಳಿಕ ನಾವು ಇಲ್ಲೇ ಇಂಗ್ಲೆಂಡ್‌ನಲ್ಲಿದ್ದು, ನಮಗೆ ಯಾರೊಬ್ಬರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ. ನಾವು ಪ್ರತಿ ವ್ಯಕ್ತಿ ಹಾಗೂ ಸಮುದಾಯವನ್ನು ಗೌರವಿಸುತ್ತೇವೆ. ಈ ವಿಡಿಯೋ, ನಾವು ಕಳೆದ 15 ದಿನಗಳಿಂದ ನಿರಂತರವಾಗಿ ಕ್ರಿಕೆಟ್ ಆಡಿದ್ದರಿಂದ ನಮ್ಮ ದೇಹ ನೋವಿನಿಂದ ಹೇಗಾಗಿದೆ ಎನ್ನುವುದನ್ನು ತೋರಿಸುವುದಾಗಿತ್ತು. ನಾವು ಯಾರನ್ನೂ ಅವಮಾನಿಸಬೇಕು ಎನ್ನುವ ಉದ್ದೇಶ ಹೊಂದಿರಲಿಲ್ಲ. ಇದರ ಹೊರತಾಗಿಯೂ ನಮ್ಮ ಈ ವಿಡಿಯೋದಿಂದ ನೋವಾಗಿದ್ದರೇ, ನನ್ನ ಕಡೆಯಿಂದ ಎಲ್ಲರಿಗೂ ಸಾರಿ. ಇದನ್ನು ಇಲ್ಲಿಗೆ ಬಿಟ್ಟು ಮುಂದುವರೆಯೋಣ. ಎಲ್ಲರೂ ಖುಷಿಯಾಗಿ, ಆರೋಗ್ಯವಾಗಿರಿ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.

ಪಾಕ್ ನಿದ್ದೆ ಕೆಡಿಸಿದ ಯುವಿ, ರೈನಾ, ಬಜ್ಜಿ; ಸೋಲಿನಿಂದ ಮೊದಲೇ ಕಂಗೆಟ್ಟಿವೆ ಸಾಕ್ ಬಿಡಿ ಎಂದ ಫ್ಯಾನ್ಸ್

🙏🙏 pic.twitter.com/mCMCquRbbZ

— Harbhajan Turbanator (@harbhajan_singh)

ಹೀಗಿತ್ತು ನೋಡಿ ಮಾಜಿ ಕ್ರಿಕೆಟಿಗರ ಡ್ಯಾನ್ಸ್

This was hilarious pic.twitter.com/rA7IzYaNxv

— Vinay Kumar Dokania (@VinayDokania)

ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಶಿಪ್‌ ಟಿ20 ಕ್ರಿಕೆಟ್‌ ಟೂರ್ನಿ: ಯುವಿ ನೇತೃತ್ವದ ಭಾರತ ಚಾಂಪಿಯನ್‌

ಚೊಚ್ಚಲ ಆವೃತ್ತಿಯ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಶಿಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ ಗೆಲುವು ಸಾಧಿಸಿತು.

ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದಿದ್ದವು. ಬಳಿಕ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಿದ್ದರೆ, ವೆಸ್ಟ್‌ಇಂಡೀಸ್‌ ವಿರುದ್ಧ ಗೆದ್ದು ಪಾಕಿಸ್ತಾನ ಫೈನಲ್‌ಗೇರಿತ್ತು.
 

click me!