ಮೋದಿಯಂಥ ಹಾರ ತಮ್ಮ ಕೊರಳಲ್ಲಿ! ಬೆಂಗಳೂರಿಗರ ಪ್ರೀತಿಗೆ ಹರ್​ಭಜನ್​ ಸಿಂಗ್​ ಫಿದಾ: ಫೋಟೋ ನೀಡಲು ಮನವಿ

Published : Nov 28, 2026, 02:25 PM IST
Harbhajan Singh

ಸಾರಾಂಶ

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಂಡಿಯನ್ ಸಾಫ್ಟ್‌ಬಾಲ್ ಕ್ರಿಕೆಟ್ ಲೀಗ್ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ತಮಗೆ ನೀಡಿದ ಬೃಹತ್ ಹಾರವನ್ನು ಕಂಡು ಪ್ರಧಾನಿ ಮೋದಿಯವರ ಸ್ವಾಗತವನ್ನು ನೆನಪಿಸಿಕೊಂಡು ಅವರು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು: ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್ ಅವರು ಇಂಡಿಯನ್ ಸಾಫ್ಟ್‌ಬಾಲ್ ಕ್ರಿಕೆಟ್ ಲೀಗ್ (ISCL) ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಇಂಡಿಯನ್ ಸಾಫ್ಟ್‌ಬಾಲ್ ಕ್ರಿಕೆಟ್ ಲೀಗ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೇಗದ ಮತ್ತು ಆಕರ್ಷಕ ಸ್ವರೂಪದ ಕ್ರಿಕೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರಾಡಿದ ಮಾತುಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲಿಯೂ ಬೆಂಗಳೂರಿಗರು ಕೊಟ್ಟ ದೊಡ್ಡ ಹಾರದ ಬಗ್ಗೆ ಹೃದಯ ತುಂಬಿ ಮಾತನಾಡಿ, ಬೆಂಗಳೂರಿಗರ ಪ್ರೀತಿಗೆ ಋಣಿಯಾಗಿರುವುದಾಗಿ ಹೇಳಿದ್ದಾರೆ.

ಹರ್​ಭಜನ್​ ಸಿಂಗ್​ ಅವರು, “ನಾನು ಯಾವಾಗಲೂ ಯಾವುದೇ ರೂಪದಲ್ಲಿ ಕ್ರಿಕೆಟ್ ಅನ್ನು ಬೆಂಬಲಿಸುತ್ತೇನೆ. ವೇಗದ ಗತಿಯ ಸ್ವರೂಪ ನನ್ನನ್ನು ರೋಮಾಂಚನಗೊಳಿಸುತ್ತದೆ. ಗಲ್ಲಿ ಟು ಗ್ಲೋರಿ ಪರಿಕಲ್ಪನೆಯು ಸಾಕಷ್ಟು ಕುತೂಹಲಕಾರಿಯಾಗಿದೆ, ಮತ್ತು ನಾನು ಅದರ ಭಾಗವಾಗಲು ಸಂತೋಷಪಡುತ್ತೇನೆ. ನಾನು ಈ ಪರಿಕಲ್ಪನೆಗೆ ಸಂಬಂಧಿಸಿದ್ದೇನೆ ಮತ್ತು ಅನೇಕ ಆಟಗಾರರು ದೇಶವನ್ನು ಪ್ರತಿನಿಧಿಸುವುದನ್ನು ನೋಡಲು ಆಶಿಸುತ್ತೇನೆ ಎಂದರು. ಇದೇ ವೇಳೆ ಅವರು, ಬೆಂಗಳೂರಿನಲ್ಲಿ ದೊರೆತ ಭವ್ಯ ಸ್ವಾಗತಕ್ಕೆ ಖುಷಿ ಪಟ್ಟುಕೊಂಡು, ಈ ಸ್ವಾಗತವು ನನಗೆ ಆಶ್ಚರ್ಯವನ್ನುಂಟು ಮಾಡಿತು ಎಂದರು.

ಪ್ರಧಾನಿಗೆ ಕೊಟ್ಟಂಥ ಹಾರ ಕಂಡು ಬೆರುಗು

ಈ ಸಂದರ್ಭದಲ್ಲಿ ಸಿಂಗ್​ ಅವರಿಗಾಗಿ ಒಂದು ದೈತ್ಯ ಹಾರವನ್ನು ತರಲಾಯಿತು. ಅದನ್ನು ನೋಡಿ ಸಿಂಗ್​ ಅಕ್ಷರಶಃ ಖುಷಿಪಟ್ಟರು. "ಇಷ್ಟು ದೊಡ್ಡ ಹಾರವನ್ನು ನಾನು ಎಂದಿಗೂ ನೋಡಿಲ್ಲ, ನಾನು ನಿರೀಕ್ಷಿಸಿಯೇ ಇರಲಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಗಳೂರಿನಲ್ಲಿ ದೊಡ್ಡ ಹಾರದೊಂದಿಗೆ ಸ್ವಾಗತಿಸಲಾಗುತ್ತಿರುವ ದೃಶ್ಯಗಳನ್ನು ನಾನು ನೋಡಿದ್ದೆ. ಆದರೆ ಅಂಥದ್ದೇ ಹಾರ ನನಗೆ ಅದು ಸಿಗುತ್ತದೆ ಎಂದು ಕಲ್ಪನೆಯನ್ನೂ ಮಾಡಲಿಲ್ಲ ಎಂದ ಹರ್​ಭಜನ್​ ಸಿಂಗ್​ ಫೋಟೋಗ್ರಫರ್​ ಬಳಿ ತಿರುಗಿ ನನಗೆ ಈ ಹಾರದೊಂದಿಗೆ ಫೋಟೋ ತೆಗೆದು ಕೊಡಿ ಎಂದು ಕೇಳಿಕೊಂಡರು!ಹರ್ಭಜನ್ ಕೂಡ ಮೈದಾನಕ್ಕಿಳಿದು ಆಡಿದರು.

ಅಂದಹಾಗೆ ಹರ್​ಭಜನ್​ ಸಿಂಗ್​ ಅವರು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಯುವ ಆಫ್-ಸ್ಪಿನ್ನರ್‌ಗಳಿಗೆ ವಿಶೇಷ ತರಬೇತಿ ಶಿಬಿರವನ್ನು ನಡೆಸಿಕೊಟ್ಟಿದ್ದಾರೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (1998) ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, 2000ನೇ ಇಸವಿಯಲ್ಲಿ ಬೆಂಗಳೂರಿನ ಎನ್‌ಸಿಎ (NCA) ಕುರಿತ ತಮ್ಮ ಹಳೆಯ ಅನುಭವವನ್ನೂ ಇತ್ತೀಚೆಗೆ ನೆನಪಿಸಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ ಮತ್ತೆ ನಾಯಕನಾಗಲು ಒಪ್ಪಿಕೊಂಡಿದ್ದೇಕೆ? ಅವಮಾನಿಸಿದ ಮುಂಬೈ ಇಂಡಿಯನ್ಸ್ ತಂಡದ ಇನ್‌ಸೈಡ್ ಮಾಹಿತಿ ಬಿಚ್ಚಿಟ್ಟ ಹಿಟ್‌ಮ್ಯಾನ್
300 ಮ್ಯಾಚ್ ಆಡಿದ್ದೇನೆ, ನಾನೇನು ಮುಟ್ಟಾಳನಾ..? ಕ್ಯಾಪ್ಟನ್ ಕೂಲ್ ಧೋನಿ ಸಿಟ್ಟಾದ ಘಟನೆ ನೆನಪಿಸಿಕೊಂಡ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್..!