Ind vs SA: ಅಸ್ಸಾಂನಲ್ಲಿ ಫೆಂಟಾಸ್ಟಿಕ್‌ ಫೋರ್‌ ವೈಲೆಂಟ್‌, ಇಂಡಿಯಾ ಆಟಕ್ಕೆ ಹರಿಣಗಳು ಸೈಲೆಂಟ್‌!

Published : Oct 02, 2022, 11:13 PM IST
Ind vs SA: ಅಸ್ಸಾಂನಲ್ಲಿ ಫೆಂಟಾಸ್ಟಿಕ್‌ ಫೋರ್‌ ವೈಲೆಂಟ್‌, ಇಂಡಿಯಾ ಆಟಕ್ಕೆ ಹರಿಣಗಳು ಸೈಲೆಂಟ್‌!

ಸಾರಾಂಶ

ಟೀಮ್‌ ಇಂಡಿಯಾದ ಯಶಸ್ಸಿಗೆ ಅಗ್ರ ಕ್ರಮಾಂಕದ ಫೆಂಟಾಸ್ಟಿಕ್‌ ಫೋರ್‌ ಎನಿಸಿಕೊಂಡಿರುವ ಕೆಎಲ್‌ ರಾಹುಲ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಆಟವೇ ಇಂಪಾರ್ಟೆಂಟ್‌. ತೀರಾ ಅಪರೂಪ ಎನ್ನುವಂತೆ ಈ ನಾಲ್ವರೂ ಆಟಗಾರರು ಗುವಾಹಟಿಯಲ್ಲಿ ಬ್ಯಾಟಿಂಗ್‌ ವೈಭವ ತೋರಿದ್ದರಿಂದ ಟೀಮ್‌ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್‌ಗಳಿಂದ ಮಣಿಸಿ ಸರಣಿ ವಶಪಡಿಸಿಕೊಂಡಿದೆ.

ಗುವಾಹಟಿ (ಅ.2): ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಫೆಂಟಾಸ್ಟಿಕ್‌ ಫೋರ್‌, ಕೆಎಲ್‌ ರಾಹುಲ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್‌ ಏಕಕಾಲದಲ್ಲಿ ಮಿಂಚಿದರೆ, ಕ್ರಿಕೆಟ್‌ ಸ್ಟೇಡಿಯಂನಲ್ಲಿ ಎಂಥಾ ರನ್‌ ಓಕುಳಿ ಆಗಬಹುದು ಎನ್ನುವುದಕ್ಕೆ ಟ್ರೇಲರ್‌ನಂತಿತ್ತು ಗುವಾಹಟಿ ಟಿ20. ರೋಹಿತ್‌ ಶರ್ಮ 7 ರನ್‌ ಗಳಿಂದ ಹಾಗೂ  ವಿರಾಟ್‌ ಕೊಹ್ಲಿ 1 ರನ್‌ನಿಂದ ಅರ್ಧಶತಕ ವಂಚಿತರಾದರೂ, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆಎಲ್‌ ರಾಹುಲ್‌ ಬಾರಿಸಿದ ಸ್ಪೋಟಕ ಅರ್ಧಶತಕಗಳ ಸಾಹಸದಿಂದ ಟೀಮ್‌ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್‌ಗಳಿಂದ ಮಣಿಸಿದೆ. ಅದರೊಂದಿಗೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದುಕೊಂಡಿದೆ. ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ, ಫೆಂಟಾಸ್ಟಿಕ್‌ ಫೋರ್‌ ಬ್ಯಾಟಿಂಗ್‌ ಸಾಹಸದಿಂದ 3 ವಿಕೆಟ್‌ಗೆ 237 ರನ್‌ ಬಾರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್‌ ಡಿ ಕಾಕ್‌ ಹಾಗೂ ಡೇವಿಡ್‌ ಮಿಲ್ಲರ್‌ ಬಾರಿಸಿದ ಅರ್ಧಶತಕದ ಹೊರತಾಗಿಯೂ 3 ವಿಕೆಟ್‌ಗೆ 221 ರನ್‌ ಬಾರಿಸಿ ಸೋಲು ಕಂಡಿತು. ಡೇವಿಡ್‌ ಮಿಲ್ಲರ್‌ (106*ರನ್‌, 47 ಎಸೆತ, 8 ಬೌಂಡರಿ, 7 ಸಿಕ್ಸರ್‌)ಟಿ20ಯಲ್ಲಿ ಬಾರಿಸಿದ 2ನೇ ಶತಕದ ನಡುವೆಯೂ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು.

ದಕ್ಷಿಣ ಆಫ್ರಿಕಾ ತಂಡ ಚೇಸಿಂಗ್‌ ಆರಂಭಿಸುವ ಮುನ್ನವೇ ಸೋಲು ಕಂಡಂತಿತ್ತು. ತಂಡದ ಮೊತ್ತ 1 ರನ್‌ ಆಗುವ ವೇಳೆಗಾಗಲೇ ನಾಯಕ ಟೆಂಬಾ ಬವುಮಾ ಹಾಗೂ ರಿಲ್ಲಿ ರಸೌ ವಿಕೆಟ್‌ ಅನ್ನು ದಕ್ಷಿಣ ಆಫ್ರಿಕಾ ಕಳೆದುಕೊಂಡಿತ್ತು. ಈ ಎರಡೂ ವಿಕೆಟ್‌ಗಳನ್ನು ಉರುಳಿಸಿದ ಆರ್ಶ್‌ದೀಪ್‌ ಸಿಂಗ್‌ ಭಾರತಕ್ಕೆ ದೊಡ್ಡ ಯಶಸ್ಸು ನೀಡಿದ್ದರು. 1 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಅನುಭವಿ ಕ್ವಿಂಟನ್‌ ಡಿ ಕಾಕ್‌ (69*ರನ್,‌ 48 ಎಸೆತ, 3 ಬೌಂಡರಿ, 4 ಸಿಕ್ಸರ್‌) ಜೊತೆಯಾದ ಏಡೆನ್‌ ಮಾರ್ಕ್ರಮ್‌ (33 ರನ್‌, 19 ಎಸೆತ, 4 ಬೌಂಡರಿ, 1 ಸಿಕ್ಸರ್‌) 3ನೇ ವಿಕೆಟ್‌ಗೆ ಅಮೂಲ್ಯ 46 ರನ್‌ ಜೊತೆಯಾಟವಾಡಿದರು. ಪವರ್‌ ಪ್ಲೇ ಹಂತದಲ್ಲಿ ದಕ್ಷಿಣ ಆಫ್ರಿಕಾ 45 ರನ್‌ ಬಾರಿಸಿತ್ತು. ಇನ್ನೇನು ತಂಡ ಚೇತರಿಕೆ ಕಾಣುತ್ತಿದ್ದ ಹಂತದಲ್ಲಿ ಅಕ್ಸರ್‌ ಪಟೇಲ್‌, ಮಾರ್ಕ್ರಮ್‌ ವಿಕೆಟ್‌ ಉರುಳಿಸುವ ಮೂಲಕ ಆಘಾತ ನೀಡಿದರು. ಸರಿಯಾಗಿ 10 ಓವರ್‌ ವೇಳೆಗೆ ದಕ್ಷಿಣ ಆಫ್ರಿಕಾ ತಂಡ 70 ರನ್‌ ಗೆ 3 ವಿಕೆಟ್‌ ಕಳೆದುಕೊಂಡಿದ್ದರೆ, ಗೆಲುವು ಕಾಣಲು ಇನ್ನೂ 168 ರನ್‌ಗಳು 60 ಎಸೆತಗಳಿಂದ ಬೇಕಿದ್ದವು.

IND VS SA: ಗುವಾಹಟಿಯಲ್ಲಿ ರಾಹುಲ್‌ ಸ್ಪೋಟಕ ಆಟ, ಸೂರ್ಯನ ವಿರಾಟ್‌ ರೂಪ..!

ಮಿಲ್ಲರ್‌-ಡಿಕಾಕ್‌ ಶತಕದ ಜೊತೆಯಾಟ: ತಂಡ ಹೀನಾಯ ಸೋಲು ಕಾಣುವಂತಿದ್ದ ಹಂತದಲ್ಲಿ ಜೊತೆಯಾದ ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿಕಾಕ್‌ ಯಾರೂ ನಿರೀಕ್ಷೆಯೇ ಮಾಡದಂಥ ಚೇತರಿಕೆಯನ್ನು ತಂಡಕ್ಕೆ ನೀಡಿದರು. ಇದರಿಂದಾಗಿ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಅಪರೂಪದ ಚೇಸಿಂಗ್‌ ಮಾಡಬಹುದೇನೋ ಎನ್ನುವ ಆತಂಕವೂ ಭಾರತದ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ, 238 ರನ್‌ ಚೇಸಿಂಗ್ ಮಾಡುವಂಥ ಮೊತ್ತವಾಗಿರಲಿಲ್ಲ. ಆದರೂ ಪಟ್ಟು ಬಿಡದ ಈ ಜೋಡಿ, ಕ್ವಿಕ್‌ ಆದ ಅರ್ಧಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರೆ, ಅದಕ್ಕೂ ವೇಗವಾಗಿ ಶತಕದ ಜೊತೆಯಾಟವನ್ನು ಪೂರ್ಣ ಮಾಡಿದರು.

Ind vs SA: ಗುವಾಹಟಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ಹಾವು!

ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇವಿಡ್ ಮಿಲ್ಲರ್‌ 25 ಎಸೆತಗಳಲ್ಲಿ ಅರ್ಧಶತಕ ಪೂರ್ಣ ಮಾಡಿದರು. ಈ ವೇಳೆ ಅವರು ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿ ಸಿಡಿಸಿದ್ದರು. ಅದಾದ ಬಳಿಕ ಕ್ವಿಂಟನ್‌ ಡಿ ಕಾಕ್‌ ಕೂಡ 39 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣ ಮಾಡಿದರು. 16 ಓವರ್‌ಗಳ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 3 ವಿಕೆಟ್‌ಗೆ 156 ರನ್‌ ಬಾರಿಸಿ ಹೋರಾಟ ತೋರಿತ್ತು.
ಆದರೆ, ದೀಪಕ್‌ ಚಹರ್‌ ಎಸೆದ 17ನೇ ಓವರ್‌ನಲ್ಲಿ ಕೇವಲ 8 ರನ್‌ ನೀಡಿ ಚಿತ್ರಣ ಬದಲಾಯಿಸಿದರು. ಬಳಿಕ ಹರ್ಷಲ್‌ ಪಟೇಲ್‌ 18ನೇ ಓವರ್‌ನಲ್ಲಿ 11 ರನ್‌ ನೀಡುವ ಮೂಲಕ ಭಾರತದ ಗೆಲುವನ್ನು ಖಚಿತ ಮಾಡಿದ್ದರು. ಆದರೆ, 19ನೇ ಓವರ್‌ನಲ್ಲಿ ಆರ್ಶ್‌ದೀಪ್‌ ಸಿಂಗ್‌ 26 ರನ್‌ ನೀಡುವ ಮೂಲಕ ದುಬಾರಿ ಎನಿಸಿದರು. ಕೊನೇ ಓವರ್‌ ಎಸೆದ ಅಕ್ಸರ್‌ ಪಟೇಲ್‌ 20 ರನ್‌ ನೀಡಿದರೂ ಭಾರತ ಗೆಲುವು ಕಾಣುವಲ್ಲಿ ಯಶ ಕಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!