ಟಿ20 ಸರಣಿ: ಆಫ್ರಿಕಾಗೆ ಸುಲಭ ತುತ್ತಾದ ಪಾಕಿಸ್ತಾನ

By Suvarna NewsFirst Published Apr 13, 2021, 8:57 AM IST
Highlights

ಪಾಕಿಸ್ತಾನ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಜೋಹಾನ್ಸ್‌ಬರ್ಗ್(ಏ.13)‌: ಪಾಕಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. 

ಸೋಮವಾರ(ಏ.12) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 9 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿತು. ನಾಯಕ ಬಾಬರ್‌ ಆಜಂ(50) ಅರ್ಧಶತಕ ಬಾರಿಸಿದರು. ಬಾಬರ್‌ ಅಜಂ ಹೊರತುಪಡಿಸಿ ಉಳಿದ್ಯಾವ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಆಕರ್ಷಕ ಬೌಲಿಂಗ್‌ ಪ್ರದರ್ಶಿಸಿದ ಜಾರ್ಜ್ ಲಿಂಡೆ ಹಾಗೂ ಲಿಜಾರ್ಡ್‌ ವಿಲಿಯಮ್ಸ್‌ ತಲಾ 3 ವಿಕೆಟ್‌ ಕಬಳಿಸಿದರು. 

South Africa win!

A thorough performance from the hosts, restricting Pakistan to 140/9 before chasing it down to win by six wickets.

They've levelled the four-match series 1-1 👏 ➡️ https://t.co/uOFBElCNIl pic.twitter.com/9QwB7o4NSu

— ICC (@ICC)

ಪಾಕ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ಪತ್ರಕರ್ತನಿಗೂ ತಿರುಗೇಟು ನೀಡಿದ ವೆಂಕಟೇಶ್ ಪ್ರಸಾದ್!

ಇನ್ನು ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಏಯ್ಡನ್‌ ಮಾರ್ಕ್‌ರಮ್‌‌(54) ಹಾಗೂ ನಾಯಕ ಹೆನ್ರಿಚ್‌ ಕ್ಲಾಸೆನ್‌ (ಅಜೇಯ 36) ಆಕರ್ಷಕ ಬ್ಯಾಟಿಂಗ್‌ ಮೂಲಕ ನೆರವಾದರು. ಕೇವಲ 14 ಓವರಲ್ಲಿ ದ.ಆಫ್ರಿಕಾ ಗುರಿ ತಲುಪಿತು. ಆಲ್ರೌಂಡ್‌ ಆಟ ಪ್ರದರ್ಶಿಸಿದ ಜಾರ್ಜ್‌ ಲಿಂಡೆ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.

3 wickets 👏
3 catches 🔥
20* off 10 balls 😲

George Linde was the Player of the Match after South Africa's series-levelling victory. pic.twitter.com/1xBJz2iJ96

— ICC (@ICC)

ಸ್ಕೋರ್‌: 
ಪಾಕಿಸ್ತಾನ 140/9
ದ.ಆಫ್ರಿಕಾ 141/4
 

click me!