ಗಂಭೀರ್‍‌ಗೆ ಇವತ್ತು ಸ್ಪೆಷಲ್ ಡೇ, ಬರೀ ಟೀಕೆ ಮಾಡೋದಲ್ಲ; ಯಾರೂ ಮಾಡಿರದ ಅವರ ಈ ಮೂರು ಸಾಧನೆ ಗೊತ್ತಾ?

Published : Oct 14, 2026, 04:01 PM IST
gautam gambhir

ಸಾರಾಂಶ

ಹೈದರಾಬಾದ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇವತ್ತು ಭಾರತ ಮತ್ತು ವೆಸ್ಟ್ ವಿಂಡೀಸ್ ತಂಡಗಳು 4ನೇ ಟಿ-20ಯಲ್ಲಿ ಮುಖಾಮುಖಿ ಆಗ್ತಿವೆ. ಇವತ್ತಿನ ಪಂದ್ಯವನ್ನು ಗೆಲ್ಲೋದು ಟೀಂ ಇಂಡಿಯಾಗೆ ತುಂಬಾನೇ ಮುಖ್ಯವಾಗಿದೆ. ಯಾಕೆಂದರೆ..

ಇವತ್ತು ಭಾರತ ಗೆದ್ದರೆ ಟಿ-20 ಸಿರೀಸ್ ಭಾರತದ ವಶವಾಗಲಿದೆ. ಜೊತೆಗೆ ತಂಡದ ಹೆಡ್‌ ಮಾಸ್ಟರ್ ಗೌತಮ್ ಗಂಭೀರ್‍‌ಗೆ ಸ್ಮರಣೀಯ ದಿನವಾಗಲಿದೆ. ಯಾಕೆಂದರೆ.. ಇವತ್ತು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರಿಗೆ ಬರ್ತ್‌ಡೇ ಗಿಫ್ಟ್ ಕೊಡಬೇಕು ಅಂದರೆ ಟೀಂ ಇಂಡಿಯಾ ಗೆಲ್ಲಲೇಬೇಕಿದೆ.

ಗಂಭೀರ್ ಅಂದ್ರೆ ನಮ್ಮ ಕಣ್ಣ ಮುಂದೆ ಬರೋದು ಅವರ ಕೋಪ, ಅಗ್ರೆಸೀವ್‌ನೆಸ್, ಸಪ್ಪೆ ಮುಖ. ಇದೇ ಕಾರಣಕ್ಕೆ ಅವರು ಆಗಾಗ ಟೀಕೆಗೆ ಒಳಗಾಗುತ್ತಾರೆ. ಆದರೆ ಅವರು ಯಾವತ್ತೂ ತಮ್ಮ ವೃತ್ತಿ ಜೀವನವನ್ನು ಹಾಳು ಮಾಡಿಕೊಂಡವರಲ್ಲ. ತಮಗೆ ನೀಡಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಗಾಗಿ ನಿಭಾಯಿಸಿದವರು ಗಂಭೀರ್.

ಅಂದ್ಹಾಗೆ ಗಂಭೀರ್ 1981 ಅಕ್ಟೋಬರ್ 14 ರಂದು ದೆಹಲಿಯಲ್ಲಿ ಜನಿಸಿದರು. 2003 ರಿಂದ 2016 ವರೆಗೆ ಟೀಂ ಇಂಡಿಯಾ ಪರವಾಗಿ ಒಟ್ಟು 242 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದರು. ಸದ್ಯ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗಂಭೀರ್ ಮಾಡಿದ ಮೂರು ಸಾಧನೆಗಳು

ಗಂಭೀರ್ ಅವರು ಟೀಂ ಇಂಡಿಯಾದ ನಾಯಕರಾಗಿ ಆರು ಏಕದಿನ ಪಂದ್ಯಗಳನ್ನ ಮುನ್ನಡೆಸಿದ್ದರು. ವಿಶೇಷ ಅಂದರೆ ಅವರು ಆರೂ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಅಂದರೆ ಇವರು ನಾಯಕರಾಗಿ 100 ಶೇಕಡಾವಾರು ಹೊಂದಿದ್ದಾರೆ. ಗಂಭೀರ್ ಹೊರೆತುಪಡಿಸಿ ಕುಂಬ್ಳೆ, ರಹಾನೆ ಮಾತ್ರ ಈ ಸಾಧನೆ ಮಾಡಿದ್ದಾರೆ.

ಸತತ ಐದು ಶತಕ

ಪ್ರಮುಖ ಎರಡು ವಿಶ್ವಕಪ್‌ನಲ್ಲಿ ಗಂಭೀರ್‍‌ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಸತತ ಐದು ಪಂದ್ಯಗಳಲ್ಲಿ ಐದು ಶತಕ ಬಾರಿಸಿದ ಸಾಧನೆ ಇವರದ್ದು. 2009 ಮತ್ತು 2010 ನಡುವೆ ಗಂಭೀರ್ ಈ ಸಾಧನೆ ಮಾಡಿದ್ದಾರೆ. ಡಾನ್ ಬ್ರಾಡ್ಮನ್ ಅವರು ಆರು ಪಂದ್ಯಗಳಲ್ಲಿ ಶತತ ಆರು ಶತಕ ಬಾರಿಸಿದ್ದಾರೆ.

ಸತತ 11 ಅರ್ಧಶತಕ

ಇನ್ನೊಂದು ಅವರ ಸಾಧನೆ ಏನೆಂದರೆ.. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ 11 ಅರ್ಧಶತಕ ಬಾರಿಸಿದ ಹೆಗ್ಗಳಿಕೆ ಇವರದ್ದು. ಸತತ ಅತಿಹೆಚ್ಚು ಅರ್ಧಶತಕ ಬಾರಿಸಿದ ಐತಿಹಾಸಿಕ ದಾಖಲೆಯಲ್ಲಿ ಗೌತಮ್ ಗಂಭೀರ್ ಹೆಸರು ಮೂರನೇ ಸ್ಥಾನದಲ್ಲಿದೆ. 2007 ಮತ್ತು 2011 ರ ವಿಶ್ವಕಪ್‌ನಲ್ಲಿ ಗಂಭೀರ್ ನೀಡಿದ ಕೊಡುಗೆ ಅಪಾರ. 2007 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 75 ರನ್‌ಗಳಿಸಿದ್ದರು. 2011 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 97ರನ್‌ಗಳಿಸಿದ್ದರು.

58 ಟೆಸ್ಟ್ ಪಂದ್ಯಗಳಲ್ಲಿ 4154 ರನ್‌ಗಳಿಸಿದ್ದಾರೆ. ಅದೇ ರೀತಿ 147 ಏಕದಿನ ಪಂದ್ಯದಲ್ಲಿ 5238 ರನ್‌ಗಳಿಸಿದ್ದಾರೆ. 37 ಟಿ-20 ಪಂದ್ಯಗಳಲ್ಲಿ 932 ರನ್‌ಗಳಿಸಿದ್ದಾರೆ. ಗಂಭೀರ್ ಅವರು 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್‌ಗಳಿಸಿದ್ದಾರೆ. ಅದೇ ರೀತಿ 147 ಏಕದಿನ ಪಂದ್ಯದಲ್ಲಿ 5238 ರನ್‌ಗಳಿಸಿದ್ದಾರೆ. 37 ಟಿ-20 ಪಂದ್ಯಗಳಲ್ಲಿ 932 ರನ್‌ಗಳಿಸಿದ್ದಾರೆ. ಒಟ್ಟಾರೆ ಗಂಭೀರ್ ಅವರು ಟೀಂ ಇಂಡಿಯಾದ ಕೋಚ್ ಆಗಿ ಇನ್ನಷ್ಟು ಸಾಧನೆ ಮಾಡಲಿ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಈ 3 ದಾಖಲೆಗಳು ಇಂದಿಗೂ ಅಜೇಯ! ಕೊಹ್ಲಿ, ರೂಟ್‌ಗೂ ಮುರಿಯುವುದು ಅಷ್ಟು ಸುಲಭವಲ್ಲ!
ರೋಹಿತ್ ಶರ್ಮಾ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಮತ್ತೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್