ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವಧಿಯನ್ನು ವಿಸ್ತರಿಸಬೇಕು ಅನ್ನೋ ಕೂಗಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಧನಿಗೂಡಿಸಿದ್ದಾರೆ.
ನವದೆಹಲಿ(ನ.13): ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವಧಿ ಕೇವಲ 10 ತಿಂಗಳು ಮಾತ್ರ. ಇದಲ್ಲಿ 1 ತಿಂಗಲು ಈಗಾಗಲೇ ಮುಗಿದು ಹೋಗಿದೆ. ಗಂಗೂಲಿ ಅಧಿಕಾರವಧಿ ವಿಸ್ತರಿಸಬೇಕು ಅನ್ನೋ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದೀಗ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಶಾಸಕ ಗೌತಮ್ ಗಂಭೀರ್ ಗಂಗೂಲಿ ಅವಧಿ ವಿಸ್ತರಿಸಲು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಸಭೆಯ ಡೇಟ್ ಫಿಕ್ಸ್..!
ಖಾಸಗಿ ಮಾಧ್ಯಮಕ್ಕೆ ಬರೆದಿರುವ ಅಂಕಣದಲ್ಲಿ ಗಂಭೀರ್, ಗಂಗೂಲಿ ಅವಧಿ ವಿಸ್ತರಿಸಬೇಕು ಎಂದಿದ್ದಾರೆ. 10 ತಿಂಗಳ ಬಳಿಕ ಗಂಗೂಲಿ ಬಿಸಿಸಿಐನಿಂದ ನಿರ್ಗಮಿಸಿದರೆ ಅದಕ್ಕಿಂತ ದೊಡ್ಡ ನಷ್ಟ ಬೇರೊಂದಿಲ್ಲ. ಗಂಗೂಲಿಯಂತ ವ್ಯಕ್ತಿ ಭಾರತೀಯ ಕ್ರಿಕೆಟ್‌ಗೆ ಅವಶ್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗ್ಳೂರಲ್ಲಿ ಗಂಗೂಲಿ-ದ್ರಾವಿಡ್ ಸುದೀರ್ಘ ಚರ್ಚೆ; NCAಗೆ ಹೊಸ ರೂಪ!
ಬಿಸಿಸಿಐ ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿದೆ. ಇದೇ ವೇಳೆಯಲ್ಲಿ ಗಂಗೂಲಿ ಅವಧಿ ಮುಗಿದರೆ ಬಿಸಿಸಿಐ ಆಡಳಿತ ಹಳ್ಳ ಹಿಡಿಯಲಿದೆ. ಗಂಗೂಲಿಗೆ ಹೊಸದಾಗಿ 2 ವರ್ಷ ನೀಡಿದರೆ ಉತ್ತಮ. ಇದಕ್ಕಾಗಿ ಲೋಧ ಸಮಿತಿಯ ಶಿಫಾರಸುಗಳನ್ನು ಬದಲಾಯಿಸಬೇಕು ಎಂದು ನಾನು ಹೇಳುತ್ತಿಲ್ಲ. ನಿಯಮ ಸಡಿಸಿಲಿ ಗಂಗೂಲಿಗೆ ಹೆಚ್ಚಿನ ಸಮಯ ನೀಡಿದರೆ ಭಾರತೀಯ ಕ್ರಿಕೆಟ್ ಅಭಿವೃದ್ದಿ ಸಾಧ್ಯ ಎಂದು ಗಂಭೀರ್ ಹೇಳಿದ್ದಾರೆ.