ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!

By Web Desk  |  First Published Nov 1, 2019, 9:57 PM IST

ಬಾಂಗ್ಲಾದೇಶ ಕ್ರಿಕೆಟ್ ತಂಡ ಮಾಸ್ಕ್ ಧರಿಸಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದೇ ವಿಡಿಯೋ ಹಂಚಿಕೊಂಡ ಸಂಸದ ಗೌತಮ್ ಗಂಭೀರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಲೆಳೆದಿದ್ದಾರೆ.


ನವದೆಹಲಿ(ನ.01): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯದಿಂದ ಪಂದ್ಯವನ್ನು ಸ್ಥಳಾಂತರಿಸಲು ಒತ್ತಡ ಕೇಳಿ ಬಂದಿತ್ತು. ಆದರೆ ದಿಢೀರ್ ಬದಲಾವಣೆ ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಪಂದ್ಯ ನಡೆಸಲು ತೀರ್ಮಾನಿಸಿದೆ. ಇದೀಗ ಬಾಂಗ್ಲಾ ಕ್ರಿಕೆಟಿಗರು ಮಾಸ್ಕ್ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವಿಡಿಯೋವನ್ನು ಟ್ವೀಟ್ ಮಾಡಿದ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಲೆಳೆದಿದ್ದಾರೆ. 

ಇದನ್ನೂ ಓದಿ: ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ; ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ!

Tap to resize

Latest Videos

undefined

ನ.3 ರಂದು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಇದಕ್ಕಾಗಿ ಬಾಂಗ್ಲಾ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ವಾಯು ಮಾಲಿನ್ಯದಿಂದ ಬಾಂಗ್ಲಾ ಕ್ರಿಕೆಟಿಗರು ಮಾಸ್ಕ್ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ಗಂಭೀರ್, ಇದೇ ನಿಮ್ಮ(AAP) ದೆಹಲಿ ಎಂದು ಟ್ವೀಟ್ ಮಾಡಿದ್ದಾರೆ.

 

क्या यही है...”AAP” की दिल्ली 😷 pic.twitter.com/qGgJsNI0Ty

— Gautam Gambhir (@GautamGambhir)

ಇದನ್ನೂ ಓದಿ: ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

ಗಂಭೀರ್ ಹಾಗೂ ಆಮ್ ಆದ್ಮಿ ಪಾರ್ಟಿ ಹಲವು ಬಾರಿ ಆರೋಪ-ಪ್ರತ್ಯಾರೋಪ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗಂಭೀರ್ ವಿರುದ್ಧ ಸರಣಿ ಆರೋಪ ಮಾಡಿದ್ದ ಆಮ್ ಆದ್ಮಿ ಪಾರ್ಟಿ, ಚುನಾವಣೆಯಲ್ಲಿ ಸೋಲು ಕಂಡಿತ್ತು. ಇದಾದ ಬಳಿಕ ಗಂಭೀರ್, ಹಲವು ಬಾರಿ ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಲೆಳೆದಿದ್ದರು.

ವಾಯು ಮಾಲಿನ್ಯ ಕಡಿಮೆ ಮಾಡುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ. ಇದರಿಂದ ದೆಹಲಿಯಲ್ಲಿ ಯಾವುದೇ ಕ್ರೀಡೆ ಆಯೋಜಿಸಲು ಕಷ್ಟವಾಗುತ್ತಿದೆ ಅನ್ನೋದನ್ನು ಗಂಭೀರ್ ಸೂಚ್ಯವಾಗಿ ಹೇಳಿದ್ದಾರೆ.  

click me!