
ರಾಂಚಿ(ನ.01): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ತಂಡದಲ್ಲಿ ಇಲದ್ದಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ ಯಾವಾಗ ತಂಡ ಸೇರಿಕೊಳ್ಳುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದರ ಬೆನ್ನಲ್ಲೇ ರಾಂಚಿ ಕ್ರೀಡಾಂಗಣದ ಹೊರಭಾಗದಲ್ಲಿ ಅಭಿಮಾನಿಯೋರ್ವನಿಗೆ ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಮತ್ತೆ ವದಂತಿ..!
ರಾಂಚಿ ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ಧೋನಿಗಾಗಿ ಕಾಯುತ್ತಿದ್ದ ಅಭಿಮಾನಿ ಕ್ರೀಡಾಂಗಣದ ಗೇಟಿನ ಭಾಗದಲ್ಲಿ ಕಾಯುತ್ತಿದ್ದ. ಅಭ್ಯಾಸ ಮುಗಿಸಿ ಕ್ರೀಡಾಂಗಣದ ಹೊರಭಾಗಕ್ಕೆ ಬಂದ ಧೋನಿಯನ್ನು ಅಭಿಮಾನಿ ಭೇಟಿಯಾಗಿ ತನ್ನ ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಆಟೋಗ್ರಾಫ್ ಹಾಕಲು ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: ಆಯ್ಕೆ ಸಮಿತಿಯಿಂದ ನಿರ್ಲಕ್ಷ್ಯ; ಪ್ಲಾನ್ 'ಬಿ'ಗೆ ಧೋನಿ ಸಜ್ಜು!.
ಅಭಿಮಾನಿ ಮನವಿಗೆ ಧೋನಿ ಸ್ಪಂದಿಸಿದ್ದಾರೆ. ಯಾವ ರೀತಿ ಸಹಿ ಹಾಕಲಿ ಎಂದು ಮರು ಪ್ರಶ್ನಿಸಿದ ಧೋನಿಗೆ, ಟ್ಯಾಂಕ್ ಮೇಲೆ ಆಟೋಗ್ರಾಫ್ ನೀಡುವಂತೆ ಹೇಳಿದ್ದಾನೆ. ಧೋನಿ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲಿನ ಟ್ಯಾಂಕ್ ಮೇಲೆ ಸಹಿ ಹಾಕಿದ್ದಾರೆ.
ಧೋನಿ ಆಟೋಗ್ರಾಫ್ ಪಡೆದ ಅಭಿಮಾನಿಯ ಸಂತಸಕ್ಕೆ ಪಾರವೇ ಇಲ್ಲ. ಆದರೆ ಸಹಿ ಬಳಿಕ ಅಭಿಮಾನಿಗೆ ಆತಂಕವೂ ಎದುರಾಗಿದೆ. ಟ್ಯಾಂಕ್ ಮೇಲಿನ ಸಹಿ, ಮಳೆಗೆ ಅಳಿಸಿ ಹೋದರೆ ಏನು ಗತಿ ಎಂದು ಆತಂಕ ಪಟ್ಟಿದ್ದಾನೆ. ಟ್ಯಾಂಕ್ ಪೂರ್ತಿ ಲ್ಯಾಮಿನೇಶನ್ ಮಾಡಲು ಅಭಿಮಾನಿ ಮುಂದಾಗಿದ್ದಾನೆ.
ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಇದೀಗ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಧೋನಿ ಹೊರಗುಳಿದಿದ್ದಾರೆ. ಆಯ್ಕೆ ಸಮಿತಿ ಕೂಡ ಧೋನಿ ಬದಲು ಯುವ ಕ್ರಿಕೆಟಿಗರನ್ನು ಸಜ್ಜುಗೊಳಿಸುುವ ಮಾತನಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಧೋನಿ ಕಮ್‌ಬ್ಯಾಕ್‌ಗಾಗಿ ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.