ಈ ಬಾರಿಯ IPLನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡ್ತಿರೋ ತಂಡ ಅಂದ್ರೆ, ಅದು ಕೋಲ್ಕತ್ತಾ ನೈಟ್ ರೈಡರ್ಸ್. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ KKR ಅಬ್ಬರಿಸ್ತಿದೆ. ಈವರೆಗೂ ಆಡಿರೋ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಬೀಗಿದೆ. 18 ಪಾಯಿಂಟ್ಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಈ ಸಲ ಕಪ್ ನಮ್ದೇ ಅಂತಿದೆ.
ಬೆಂಗಳೂರು(ಮೇ.13) ಈ ತಂಡ ಕಳೆದ ಐಪಿಎಲ್‌ನಲ್ಲಿ ಮಕಾಡೆ ಮಲಗಿತ್ತು. ಆದ್ರೆ, ಈ ಬಾರಿ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದೆ. ಆ ಮೂಲಕ 3ನೇ ಬಾರಿ IPL ಚಾಂಪಿಯನ್ಸ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಯಾವ್ದು ಆ ಟೀಮ್, ಅದರ ಯಶಸ್ಸಿನ ಹಿಂದಿನ ಮಾಸ್ಟರ್ ಮೈಂಡ್ ಯಾರು ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ...!
ಮೂರನೇ ಬಾರಿ ಕಪ್ ಗೆಲ್ಲುತ್ತಾ ಶಾರುಕ್ ಟೀಮ್..?
undefined
ಈ ಬಾರಿಯ IPLನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡ್ತಿರೋ ತಂಡ ಅಂದ್ರೆ, ಅದು ಕೋಲ್ಕತ್ತಾ ನೈಟ್ ರೈಡರ್ಸ್. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ KKR ಅಬ್ಬರಿಸ್ತಿದೆ. ಈವರೆಗೂ ಆಡಿರೋ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಬೀಗಿದೆ. 18 ಪಾಯಿಂಟ್ಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಈ ಸಲ ಕಪ್ ನಮ್ದೇ ಅಂತಿದೆ.
ಕಳೆದ ಸೀಸನ್ನಲ್ಲಿ ಶಾರುಕ್ ಖಾನ್ ಟೀಮ್, ಫ್ಲಾಪ್ ಶೋ ನೀಡಿತ್ತು. 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನ ಗೆದ್ದು, ಪಾಯಿಂಟ್ ಟೇಬಲ್ನಲ್ಲಿ 7ನೇ ಸ್ಥಾನ ಅಲಂಕರಿಸಿತ್ತು. ಆದ್ರೆ, ಈ ಬಾರಿ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದೆ. ಆ ಮೂಲಕ 3ನೇ ಬಾರಿ IPL ಚಾಂಪಿಯನ್ಸ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಆದ್ರೆ, KKRನ ಈ ಸೂಪರ್ ಸಕ್ಸಸ್‌ಗೆ ಕಾರಣ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಂದ್ರೆ ತಪ್ಪಿಲ್ಲ.
RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್ ಫಿಕ್ಸ್..!
ಶ್ರೇಯಸ್ ಪಡೆಯ ಮಾಸ್ಟರ್ ಮೈಂಡ್ ಗಂಭೀರ್..!
ಯೆಸ್, ಗೌತಮ್ ಗಂಭೀರ್ ಮೆಂಟರ್ ಆಗಿ ಎಂಟ್ರಿ ನೀಡಿದಾಗಿನಿಂದ KKR ಯಶಸ್ಸಿನ ಹಾದಿ ಹಿಡಿದಿದೆ. ಈ ಹಿಂದೆ ನಾಯಕರಾಗಿ KKRಗೆ ಎರಡು ಬಾರಿ ಕಪ್ ಗೆದ್ದುಕೊಟ್ಟಿದ್ದ ಗೌತಿ, ಈ ಸಲ ಮೆಂಟರ್ ಆಗಿ ಕಪ್ ಗೆದ್ದುಕೊಡೋ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಭರ್ಜರಿ ಗೇಮ್‌ಪ್ಲಾನ್ ರೂಪಿಸ್ತಿದ್ದಾರೆ. ಗಂಭೀರ್ ಅವರ ರಣತಂತ್ರಗಳು ಸಖತ್ತಾಗಿ ವರ್ಕೌಟ್ ಆಗಿವೆ.
ಸುನಿಲ್ ನರೈನ್ ಆರಂಭಿಕರಾಗಿ ಅಬ್ಬರಿಸಲು ಗೌತಿ ಕಾರಣ..!
ಹೌದು, ಸುನಿಲ್ ನರೈನ್, ಈ ಸಲ ಕೆಕೆಆರ್ ಬ್ಯಾಟಿಂಗ್ ವಿಭಾಗದ ಮೇನ್ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಖತರ್ನಾಕ್ ಬ್ಯಾಟಿಂಗ್ನಿಂದ ತಂಡಕ್ಕೆ ಭರ್ಜರಿ ಆರಂಭ ತಂದುಕೊಡ್ತಿದ್ದಾರೆ. ಲೀಗ್ನಲ್ಲಿ ಈವರೆಗೂ 12 ಪಂದ್ಯಗಳನ್ನಾಡಿರೋ ನರೈನ್, 182.93ರ ಸರಾಸರಿಯಲ್ಲಿ 461 ರನ್ ಬಾರಿಸಿದ್ದಾರೆ. ಆ ಮೂಲಕ ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಳಿಸಿದವ್ರ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ನರೈನ್ ಅವ್ರನ್ನ ಆರಂಭಿಕರಾಗಿ ಆಡಿಸೋ ಸಲಹೆ ನೀಡಿದ್ದೇ ಗಂಭೀರ್. 2023ರ IPLನಲ್ಲಿ ನರೈನ್ 7ನೇ ಕ್ರಮಾಂಕದಲ್ಲಿ ಆಡಿ, ಕಂಪ್ಲೀಟ್ ಫೇಲ್ ಆಗಿದ್ರು. ಇದ್ರಿಂದ ತಂಡಕ್ಕೆ ಹಿನ್ನಡೆಯಾಗಿತ್ತು. ಆದ್ರೆ, ಗಂಭೀರ್ ಕೆಕೆಅರ್ ತಂಡ ಸೇರಿದ್ಮೇಲೆ, ನರೈನ್ ಅವರನ್ನು ಓಪನರ್ ಆಗಿ ಕಣಕ್ಕಿಳಿಸಿದ್ರು. ಹೊಡಿಬಡಿ ಆಟವಾಡಲು ಫುಲ್ ಫ್ರೀಡಮ್ ನೀಡಿದ್ರು. ಇದ್ರಿಂದ ನರೈನ್ ಫಿಯರ್ಲೆಸ್ ಆಗಿ ಪಕ್ಕಾ ಬ್ಯಾಟರ್‌ನ್ನಂತೆ ಆರ್ಭಟಿಸ್ತಿದ್ದಾರೆ.
ಗಂಭೀರ್ ಕಳೆದ ಎರಡು ಸೀಸನ್ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ರು. ಆಗ ಸತತ ಎರಡು ಸೀಸನ್ಗಳಲ್ಲಿ ಲಖನೌ ಪ್ಲೆ ಆಫ್ ಹಂತ ಪ್ರವೇಶಿಸಿತ್ತು. ಅದ್ರೆ, ಪ್ಲೇ ಆಫ್ನಲ್ಲಿ ಮುಗ್ಗರಿಸಿತ್ತು. ಆದ್ರೀಗ, ಕೆಕೆಆರ್‌ಗೆ ಗಂಭೀರ್ ಕಪ್ ಗೆದ್ದುಕೊಡ್ತಾರಾ...? ಅನ್ನೋದನ್ನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್