ಕೋಲ್ಕತಾ ವಿರುದ್ಧ ಬೃಹತ್‌ ಗೆಲುವಿಗೆ ಗುಜರಾತ್‌ ಟೈಟಾನ್ಸ್‌ ಕಾತರ

By Kannadaprabha News  |  First Published May 13, 2024, 10:09 AM IST

ಗುಜರಾತ್‌ 12 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡದ ನೆಟ್‌ ರನ್‌ರೇಟ್‌(-1.063) ಕಳಪೆಯಾಗಿರುವುದರಿಂದ ಪ್ಲೇ-ಆಫ್‌ಗೇರುವುದು ಕಷ್ಟ. ಆದರೂ ಕೊನೆ 2 ಪಂದ್ಯಗಳಲ್ಲಿ ಬೃಹತ್‌ ಅಂತರದಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್‌ ಅದೃಷ್ಟ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.


ಅಹಮದಾಬಾದ್‌(ಮೇ.13): ಚೆನ್ನೈ ವಿರುದ್ಧ ಅಭೂತಪೂರ್ವ ಗೆಲುವಿನೊಂದಿಗೆ ತಾನೂ ಪ್ಲೇ-ಆಫ್‌ ರೇಸ್‌ನಲ್ಲಿ ಇರುವುದಾಗಿ ಸಂದೇಶ ರವಾನಿಸಿರುವ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಸೋಮವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಬೃಹತ್‌ ಗೆಲುವೊಂದೇ ತಂಡದ ಮುಂದಿರುವ ಗುರಿ.

ಗುಜರಾತ್‌ 12 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಂಡದ ನೆಟ್‌ ರನ್‌ರೇಟ್‌(-1.063) ಕಳಪೆಯಾಗಿರುವುದರಿಂದ ಪ್ಲೇ-ಆಫ್‌ಗೇರುವುದು ಕಷ್ಟ. ಆದರೂ ಕೊನೆ 2 ಪಂದ್ಯಗಳಲ್ಲಿ ಬೃಹತ್‌ ಅಂತರದಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್‌ ಅದೃಷ್ಟ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ವೇಳೆ ಸೋತರೆ ತಂಡ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

Tap to resize

Latest Videos

IPL 2024 ಡೆಲ್ಲಿಯನ್ನು ಬಗ್ಗುಬಡಿದ ಆರ್‌ಸಿಬಿ, ಪ್ಲೇ ಆಫ್‌ಗೆ ಇನ್ನೊಂದೇ ಹೆಜ್ಜೆ..!

ಮತ್ತೊಂದೆಡೆ ಕೆಕೆಆರ್‌ 12ರಲ್ಲಿ 9 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಗುಜರಾತ್‌ ವಿರುದ್ಧ ಗೆದ್ದು ಅಗ್ರ-2ರಲ್ಲೇ ಉಳಿದುಕೊಳ್ಳುವ ಕಾತರಲ್ಲಿದೆ. ಕೆಕೆಆರ್‌ ಈ ಪಂದ್ಯ ಜಯಿಸಿದರೆ, ಪ್ಲೇ-ಆಫ್‌ನ ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.

ಒಟ್ಟು ಮುಖಾಮುಖಿ: 03

ಕೆಕೆಆರ್‌: 01

ಟೈಟಾನ್ಸ್‌: 02

ಸಂಭವನೀಯ ಆಟಗಾರರ ಪಟ್ಟಿ:

ಕೆಕೆಆರ್‌: ಫಿಲ್ ಸಾಲ್ಟ್‌, ಸುನಿಲ್ ನರೈನ್‌, ವೆಂಕಟೇಶ್‌ ಅಯ್ಯರ್, ಶ್ರೇಯಸ್‌ ಅಯ್ಯರ್(ನಾಯಕ), ರಿಂಕು ಸಿಂಗ್, ನಿತೀಶ್‌ ರಾಣಾ, ಅಂಡ್ರೆ ರಸೆಲ್‌, ರಮಣ್‌ದೀಪ್‌ ಸಿಂಗ್, ಮಿಚೆಲ್ ಸ್ಟಾರ್ಕ್‌, ಹರ್ಷಿತ್‌ ರಾಣಾ, ವರುಣ್ ವರುಣ್‌.

ಗುಜರಾತ್ ಟೈಟಾನ್ಸ್: ಶುಭ್‌ಮನ್ ಗಿಲ್‌(ನಾಯಕ), ಸಾಯಿ ಸುದರ್ಶನ್‌, ಶಾರುಖ್‌ ಖಾನ್, ಡೇವಿಡ್ ಮಿಲ್ಲರ್‌, ಮ್ಯಾಥ್ಯೂ ವೇಡ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ನೂರ್‌ ಅಹಮದ್, ಉಮೇಶ್‌ ಯಾದವ್, ಮೋಹಿತ್‌ ಶರ್ಮಾ, ಕಾರ್ತಿಕ್‌ ತ್ಯಾಗಿ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ
 

click me!