ಗೌತಮ್ ಗಂಭೀರ್‌ ಟೀಂ ಇಂಡಿಯಾ ಹೊಸ ಕೋಚ್‌: ಇಂದು ಅಧಿಕೃತ ಘೋಷಣೆ?

By Naveen KodaseFirst Published Jun 19, 2024, 9:16 AM IST
Highlights

ಝೂಮ್‌ ಕಾಲ್‌ ಮೂಲಕ ನಡೆದ ಸಂದರ್ಶನದಲ್ಲಿ ಸಿಎಸಿ ಮುಖ್ಯಸ್ಥ ಅಶೋಕ್‌ ಮಲ್ಹೋತ್ರಾ, ಜತಿನ್‌ ಪರಂಜಪೆ ಹಾಗೂ ಸುಲಕ್ಷಣಾ ನಾಯ್ಕ್‌ ಇದ್ದರು. ಮೊದಲು ಗೌತಮ್ ಗಂಭೀರ್‌, ಆನಂತರ ಡಬ್ಲ್ಯು ವಿ ರಾಮನ್‌ ಭಾರತ ತಂಡಕ್ಕಾಗಿ ಮುಂದಿನ 3 ವರ್ಷಗಳಿಗೆ ತಾವು ಹಾಕಿಕೊಂಡಿರುವ ಯೋಜನೆಗಳ ಕುರಿತು ಸುಮಾರು 40 ನಿಮಿಷಗಳ ಕಾಲ ವಿವರಿಸಿದರು.

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್‌ಗಳಾದ ಗೌತಮ್‌ ಗಂಭೀರ್‌ ಹಾಗೂ ಡಬ್ಲ್ಯು ವಿ ರಾಮನ್‌ ಮಂಗಳವಾರ ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ, ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಮುಂದೆ ಸಂದರ್ಶನಕ್ಕೆ ಹಾಜರಾದರು.

ಝೂಮ್‌ ಕಾಲ್‌ ಮೂಲಕ ನಡೆದ ಸಂದರ್ಶನದಲ್ಲಿ ಸಿಎಸಿ ಮುಖ್ಯಸ್ಥ ಅಶೋಕ್‌ ಮಲ್ಹೋತ್ರಾ, ಜತಿನ್‌ ಪರಂಜಪೆ ಹಾಗೂ ಸುಲಕ್ಷಣಾ ನಾಯ್ಕ್‌ ಇದ್ದರು. ಮೊದಲು ಗೌತಮ್ ಗಂಭೀರ್‌, ಆನಂತರ ಡಬ್ಲ್ಯು ವಿ ರಾಮನ್‌ ಭಾರತ ತಂಡಕ್ಕಾಗಿ ಮುಂದಿನ 3 ವರ್ಷಗಳಿಗೆ ತಾವು ಹಾಕಿಕೊಂಡಿರುವ ಯೋಜನೆಗಳ ಕುರಿತು ಸುಮಾರು 40 ನಿಮಿಷಗಳ ಕಾಲ ವಿವರಿಸಿದರು. ಬುಧವಾರ ಮತ್ತೊಂದು ಸುತ್ತಿನ ಸಂದರ್ಶನವಿದ್ದು, ಸಿಎಸಿ ಸದಸ್ಯರು ಇನ್ನಷ್ಟು ಪ್ರಶ್ನೆಗಳನ್ನು ಕೇಳಬಹುದು ಎನ್ನಲಾಗಿದೆ.

Latest Videos

ಅಮಿತ್ ಶಾ ಭೇಟಿಯಾದ ಗೌತಮ್ ಗಂಭೀರ್‌! ಟೀಂ ಇಂಡಿಯಾ ಕೋಚ್‌ ಆಗುವುದು ಖಚಿತ?

ಇಬ್ಬರು ಅಭ್ಯರ್ಥಿಗಳ ಸಂದರ್ಶನವನ್ನು ಸಿಎಸಿ ನಡೆಸಿದರೂ, ಈಗಾಗಲೇ ಗೌತಮ್ ಗಂಭೀರ್‌ರನ್ನೇ ಹೊಸ ಕೋಚ್‌ ಆಗಿ ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಬಿಸಿಸಿಐ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು, ಕಾರ್ಯದರ್ಶಿ ಜಯ್‌ ಶಾ ಟೀಂ ಇಂಡಿಯಾದ ನೂತನ ಕೋಚ್‌ ಆಗಿ ಗೌತಮ್ ಗಂಭೀರ್‌ರ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆಯಾದರೂ, ಐಸಿಸಿ ಟ್ರೋಫಿ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಜೋಡಿ ಈ ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸುವರ್ಣಾವಕಾಶ ಕೂಡಿ ಬಂದಿದ್ದು, ಸದ್ಯ ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಅಜೇಯವಾಗುಳಿದು ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ. ಇನ್ನು ಈ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಕಾಂಟ್ರ್ಯಾಕ್ಟ್ ಕೂಡಾ ಮುಕ್ತಾಯವಾಗಲಿದೆ. ಹೀಗಾಗಿ ಹೊಸ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐ, ಬಹುತೇಕ ಗೌತಮ್ ಗಂಭೀರ್ ಅವರನ್ನು ಮುಂದಿನ ಟೀಂ ಇಂಡಿಯಾ ಕೋಚ್ ಆಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.

ವಿರಾಟ್ ಕೊಹ್ಲಿ ಸೇರಿ ಈ ನಾಲ್ವರನ್ನು ರೀಟೈನ್‌ ಮಾಡಲು ರೆಡಿಯಾದ ಆರ್‌ಸಿಬಿ..! ಮ್ಯಾಕ್ಸಿ, ಫಾಫ್ ಕಥೆ ಏನು?

ಇತ್ತೀಚೆಗಷ್ಟೇ ಮುಕ್ತಾಯವಾದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕಳೆದೊಂದು ದಶಕದಿಂದ ಐಪಿಎಲ್ ಟ್ರೋಫಿ ಎದುರಿಸುತ್ತಾ ಬಂದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಟ್ರೋಫಿ ಗೆಲ್ಲುವಲ್ಲಿ ಗೌತಮ್ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದರು. 2024ರ ಐಪಿಎಲ್‌ಗೂ ಮುನ್ನ ಮೆಂಟರ್ ಆಗಿ ಕೆಕೆಆರ್ ತಂಡವನ್ನು ಕೂಡಿಕೊಂಡಿದ್ದ ಗಂಭೀರ್, ಆಟಗಾರರಲ್ಲಿ ಹುರುಪು ತುಂಬಿ, ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

click me!