
ಬ್ರಿಡ್ಜ್‌ಟೌನ್: ಸದ್ಯ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ನಿಂಗ್ ಯತ್ನ ನಡೆದಿರುವುದು ಪತ್ತೆಯಾಗಿದೆ. ಕೀನ್ಯಾದ ಮಾಜಿ ವೇಗದ ಬೌಲರ್ ಒಬ್ಬ ಉಗಾಂಡ ತಂಡದ ಆಟಗಾರನೊಬ್ಬನನ್ನು ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದ್ದಾಗಿ ತಿಳಿದುಬಂದಿದೆ. ಫಿಕ್ಸಿಂಗ್‌ನಲ್ಲಿ ಶಾಮೀಲಾಗುವಂತೆ ಉಗಾಂಡ ಆಟಗಾರನಿಗೆ ಕೀನ್ಯಾದ ಮಾಜಿ ವೇಗಿ ಕೇಳಿದ್ದಾಗಿ ಐಸಿಸಿ ಮೂಲಗಳು ತಿಳಿಸಿವೆ.
ಈ ಸಂಬಂಧ, ಉಗಾಂಡ ಆಟಗಾರ ತಕ್ಷಣ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತಾ ಘಟಕಕ್ಕೆ ಮಾಹಿತಿ ನೀಡಿದ್ದು, ಘಟಕವು ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಐಸಿಸಿಯ ಎಲ್ಲಾ ಸಹಾಯಕ ರಾಷ್ಟ್ರಗಳಿಗೆ ಮಾಹಿತಿ ರವಾನಿಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿತ್ತು ಎಂದು ತಿಳಿದುಬಂದಿದೆ.
ಪಾಂಡ್ಯ, ಪಂತ್, ಗಿಲ್ ಅಲ್ಲವೇ ಅಲ್ಲ, ಈತನೇ ಭಾರತದ ಭವಿಷ್ಯದ ಕ್ಯಾಪ್ಟನ್ ಎಂದ ಸಂಜಯ್ ಮಂಜ್ರೇಕರ್..!
ಐಸಿಸಿ ಸಹಾಯಕ ರಾಷ್ಟ್ರಗಳಾದ ಉಗಾಂಡ, ಅಮೆರಿಕ, ಪಪುವಾ ನ್ಯೂ ಗಿನಿ, ಒಮಾನ್, ಕೆನಡಾ, ನೇಪಾಳ ಸದ್ಯ ಚಾಲ್ತಿಯಲ್ಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದವು. ಸಣ್ಣ ಕ್ರಿಕೆಟಿಂಗ್ ರಾಷ್ಟ್ರಗಳಾದ ಕಾರಣ, ಈ ತಂಡಗಳ ಆಟಗಾರರನ್ನು ಸುಲಭವಾಗಿ ಆಮಿಷಕ್ಕೆ ಒಳಪಡಿಸಿ, ಫಿಕ್ಸಿಂಗ್‌ನಲ್ಲಿ ತೊಡಗಿಸಬಹುದು ಎಂದು ಬುಕಿಗಳು ಪ್ರಯತ್ನಿಸುವ ಸಾಧ್ಯತೆ ಹೆಚ್ಚು ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಭಿಮಾನಿ ಮೇಲೆ ದಾಳಿಗೆ ಪಾಕ್ ವೇಗಿ ರೌಫ್ ಯತ್ನ!
ಲಾಡರ್‌ಹಿಲ್(ಫ್ಲೋರಿಡಾ): ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಅಭಿಮಾನಿಯೊಬ್ಬನ ಮೇಲೆ ಹಲ್ಲೆಗೆ ಮುಂದಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರೌಫ್ ತಮ್ಮ ಪತ್ನಿ ಜೊತೆ ನಡೆದು ಹೋಗುವಾಗ ಅಭಿಮಾನಿಯೊಬ್ಬನ ಹೇಳಿಕೆ ಕೇಳಿ ಕೆರಳಿದ ರೌಫ್, ಆತನತ್ತ ಓಡಿ, ಹಿಡಿದು ತಳ್ಳಾಡಲು ಶುರು ಮಾಡುತ್ತಾರೆ. ರೌಫ್‌ರ ಪತ್ನಿ ಹಾಗೂ ಆ ಅಭಿಮಾನಿ ಜೊತೆಗಿದ್ದವರು ಇಬ್ಬರನ್ನೂ ಬಿಡಿಸಲು ಯತ್ನಿಸುತ್ತಾರೆ. ರೌಫ್‌ಗೆ ಆತ ಏನು ಹೇಳಿದ ಎನ್ನುವುದು ವಿಡಿಯೋದಲ್ಲಿ ತಿಳಿಯುವುದಿಲ್ಲ. ಆದರೆ ರೌಫ್ ಮಾತ್ರ ಆತನಿಗೆ ‘ಈತ ಭಾರತೀಯ ತಾನೆ?’ ಎಂದು ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ‘ನಾನು ಪಾಕಿಸ್ತಾನಿ, ನಿಮ್ಮ ಜೊತೆ ಒಂದು ಫೋಟೋ ಕೇಳಿದ ಅಷ್ಟೇ’ ಎನ್ನುತ್ತಾರೆ.
ಈತ ಕ್ಯಾಪ್ಟನ್ ಅಲ್ಲ, ಆಟಗಾರನಾಗಿ ಕೂಡಾ ತಂಡದಲ್ಲಿರಲು ಯೋಗ್ಯನಲ್ಲ: ಅಚ್ಚರಿ ಹೇಳಿಕೆ ಕೊಟ್ಟ ಸೆಹ್ವಾಗ್..!
ಈ ಸಂಬಂಧ ಸಾಮಾಜಿಕ ತಾಣದಲ್ಲಿ ಸ್ಪಷ್ಟನೆ ನೀಡಿರುವ ರೌಫ್, ‘ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ತಾಳ್ಮೆ ಕಳೆದುಕೊಳ್ಳುವುದು ಸಹಜ. ನನ್ನ ಆಟವನ್ನು ಟೀಕಿಸುವ ಅಧಿಕಾರ ಅಭಿಮಾನಿಗಳಿಗಿದೆ. ಆದರೆ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.